ವಿವೋ ಕಂಪೆನಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತ ಮಾಡಿದೆ! ಇನ್ಯಾಕೆ ತಡ ಕೂಡಲೇ ಖರೀದಿಸಿ!
ವಿವೋ ಕಂಪೆನಿ ತನ್ನ ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ನ್ಯೂಸ್ ನೀಡಿದೆ. ಈ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ವಿವೋ Y100 ಮತ್ತು ವಿವೋ Y100A ಸ್ಮಾರ್ಟ್‌ಫೋನ್‌ಗಳೆರಡರ ಬೆಲೆಯನ್ನು ಇಳಿಕೆ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬೆಲೆ ಇಳಿಕೆಯ ಗಿಫ್ಟ್ ನೀಡಿದೆ.
ಹೌದು, ಭಾರತದಲ್ಲಿ ವಿವೋ Y100 ಮತ್ತು ವಿವೋ Y100A ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆಯಾಗಿದೆ. ಇದರಿಂದ ವಿವೋ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್ ಟೈಂ ಅಂತಾನೇ ಹೇಳಬಹುದಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಆದರೆ ಪ್ರೊಸೆಸರ್ ವಿಚಾರದಲ್ಲಿ ಮಾತ್ರ ಭಿನ್ನವಾಗಿವೆ. ಹಾಗಾದ್ರೆ ವಿವೋ Y100 ಮತ್ತು ವಿವೋ Y100A ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಕಡಿಮೆಯಾಗಿದೆ? ಇದರ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಷ್ಟು ಬೆಲೆ ಇಳಿಕೆಯಾಗಿದೆ: ವಿವೋ Y100 ಮತ್ತು ವಿವೋ Y100A ಸ್ಮಾರ್ಟ್‌ಫೋನ್‌ಗಳು ತಲಾ 1,000 ರೂ. ಬೆಲೆ ಕಡಿತವನ್ನು ಪಡೆದುಕೊಂಡಿವೆ. ಇದರಿಂದ ವಿವೋ Y100 ಸ್ಮಾರ್ಟ್‌ಫೋನ್ 8GB + 12GBಸ್ಟೋರೇಜ್ ಆಯ್ಕೆಯು 23,999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ವಿವೋ Y100A ಸ್ಮಾರ್ಟ್‌ಫೋನ್ 8GB + 256GB ರೂಪಾಂತರದ ಆಯ್ಕೆಯು 25,999ರೂ.ಬೆಲೆಯಲ್ಲಿ ಬರಲಿದೆ.
ಇದರೊಂದಿಗೆ, ಐಸಿಐಸಿಐ, ಎಸ್‌ಬಿಐ, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 2,000ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೆ ಜಿರೋ ಡೌನ್ ಫೇಮೆಂಟ್ ಆಯ್ಕೆಯು ಕೂಡ ದೊರೆಯಲಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ಗಳನ್ನು ಅಮೆಜಾನ್.ಇನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.

ವಿವೋ Y100 ಮತ್ತು ವಿವೋ Y100 A ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿದೆ: ವಿವೋ Y100 ಮತ್ತು ವಿವೋ Y100A ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಅದರಂತೆ 6.38 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿವೆ. ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಇದು 90Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದೆ.
ಆದರೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಭಿನ್ನ ಮಾದರಿಯ ಪ್ರೊಸೆಸರ್ ಅನ್ನು ಪಡೆದುಕೊಂಡಿವೆ. ಇದರಲ್ಲಿ ವಿವೋ Y100 ಫೋನ್ 6nm ಮೀಡಿಯಾ ಟೆಕ್ ಡೈಮೆನ್ಷನ್ 900 ಪ್ರೊಸೆಸರ್ ಅನ್ನು ಹೊಂದಿದ್ದು, 8GB RAM + 128GB ಆಯ್ಕೆಯಲ್ಲಿ ಲಭ್ಯವಿದೆ. ಆದರೆ ವಿವೋ Y100A ಫೋನ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದಲ್ಲದೆ ವಿಸ್ತರಿಸಬಹುದಾದ RAM ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿವೆ. ವಿವೋ Y100 5G ಸ್ಮಾರ್ಟ್‌ಫೋನ್ 44W ವೇಗದ ಚಾರ್ಜಿಂಗ್ ಬೆಂಬಲಿಸುವ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ, ಜಿಪಿಎಸ್ ಮತ್ತು ಒಟಿಜಿಯನ್ನು ಬೆಂಬಲಿಸಲಿವೆ.


Click it and Unblock the Notifications








