Home
ಸುದ್ದಿಜಾಲ

ವಿವೋ Y100i 5G ಫೋನ್‌ ಲಾಂಚ್‌! ಹೈ-ಡೆಫಿನಿಷನ್ ಫೋಟೋ ಸೆರೆಹಿಡಿಯುವ ಸಾಮರ್ಥ್ಯ!

ಸೆಲ್ಫಿ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ವಿವೋ ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದನ್ನು ವಿವೋ Y100i 5G ಸ್ಮಾರ್ಟ್‌ಫೋನ್‌ ಎಂದು ಗುರುತಿಸಲಾಗಿದೆ. ವಿವೋ Y100i 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸುಧಾರಿತ ಲೆನ್ಸ್ ಮತ್ತು ಹೈ-ಡೆಫಿನಿಷನ್ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಹೌದು, ವಿವೋ Y100i 5G ಸ್ಮಾರ್ಟ್‌ಫೋನ್‌ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ Y100i 5G ಫೋನ್‌ ಲಾಂಚ್‌! ಹೈ-ಡೆಫಿನಿಷನ್ ಫೋಟೋ ಸೆರೆಹಿಡಿಯುವ ಸಾಮರ್ಥ್ಯ!

ವಿವೋ Y100i 5G ಡಿಸ್‌ಪ್ಲೇ ರಚನೆ ಹೇಗಿದೆ?
ವಿವೋ Y100i 5G ಸ್ಮಾರ್ಟ್‌ಫೋನ್ 6.64 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2388 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ ಪಂಚ್-ಹೋಲ್ ಕಟೌಟ್ ವಿನ್ಯಾಸವನ್ನು ಪಡೆದುಕೊಂಡಿದ್ದು, 60Hz ರಿಫ್ರೆಶ್ ರೇಟ್‌ ಹಾಗೂ 93.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.

ವಿವೋ Y100i 5G ಪ್ರೊಸೆಸರ್‌ ಯಾವುದು?
ವಿವೋ Y100i 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು Adreno 619 GPU ಸಪೊರ್ಟ್‌ ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು ವರ್ಚುವಲ್ RAM ವಿಸ್ತರಣೆಗೆ ಬೆಂಬಲವನ್ನು ನೀಡಲಿದ್ದು, RAM ಅನ್ನು 12GB ವರೆಗೆ ವಿಸ್ತರಿಸಬಹುದು.

ವಿವೋ Y100i 5G ಫೋನ್‌ ಲಾಂಚ್‌! ಹೈ-ಡೆಫಿನಿಷನ್ ಫೋಟೋ ಸೆರೆಹಿಡಿಯುವ ಸಾಮರ್ಥ್ಯ!

ವಿವೋ Y100i 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ವಿವೋ Y100i 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದು ಬಳಕೆದಾರರಿಗೆ ಸುಧಾರಿತ ಲೆನ್ಸ್ ಮತ್ತು ಹೈ-ಡೆಫಿನಿಷನ್ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಅವಕಾಶ ನೀಡಲಿದೆ.

ವಿವೋ Y100i 5G ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ವಿವೋ Y100i 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಬಳಕೆದಾರರಿಗೆ 1 ಗಂಟೆಯೊಳಗೆ 0 ರಿಂದ 100 ವರೆಗೆ ಚಾರ್ಜ್ ಮಾಡಲು ಅನುಮತಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, 5G, ವೈಫೈ, GPS, 4G VoLTE, ಬ್ಲೂಟೂತ್‌ v5.1, GPS, ಗ್ಲೋನೋಸ್‌, ಗೆಲಲಿಯೋ, QZSS, USB Type-C ಪೋರ್ಟ್ ಅನ್ನು ಹೊಂದಿದೆ.

ವಿವೋ Y100i 5G ಫೋನ್‌ ಲಾಂಚ್‌! ಹೈ-ಡೆಫಿನಿಷನ್ ಫೋಟೋ ಸೆರೆಹಿಡಿಯುವ ಸಾಮರ್ಥ್ಯ!

ವಿವೋ Y100i 5G ಬೆಲೆ ಮತ್ತು ಲಭ್ಯತೆ
ವಿವೋ Y100i 5G ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯು RMB 1,599 (ಅಂದಾಜು 18,800ರೂ)ಬೆಲೆಯನ್ನು ಹೊಂದಿದೆ. ಇದು ಭಾರತದ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಅನ್ನೊದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಭಾರತಕ್ಕೆ ಬರುವುದರ ಬಗ್ಗೆ ಅಲ್ಲಗೆಳೆಯುವುದಕ್ಕೆ ಕೂಡ ಸಾಧ್ಯವಿಲ್ಲ.

Best Mobiles in India

English summary
Vivo Y100i 5G smartphone with Qualcomm Snapdragon 695 SoC Laaunched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+