Home
ಸುದ್ದಿಜಾಲ

Vivo: ಸೆಲ್ಫಿ ಪ್ರಿಯರಿಗೆ ಮತ್ತೊಂದು ಆಯ್ಕೆ! ಎಂಟ್ರಿ ಕೊಟ್ಟಿದೆ ಹೊಸ ವಿವೋ Y100i ಪವರ್ ಸ್ಮಾರ್ಟ್‌ಫೋನ್‌ !

ಸೆಲ್ಫಿ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ವಿವೋ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ವಿವೋ Y100i ಪವರ್ ಎಂದು ಹೆಸರಿಸಲಾಗಿದೆ. ಇದು ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, vivo Y100i ಪವರ್ ಸ್ಮಾರ್ಟ್‌ಫೋನ್‌ ಟೆಕ್‌ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್ ಹೊಂದಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vivo: ಸೆಲ್ಫಿ ಪ್ರಿಯರಿಗೆ ಮತ್ತೊಂದು ಆಯ್ಕೆ! ಎಂಟ್ರಿ ಕೊಟ್ಟಿದೆ ವಿವೋ Y100i ಪವರ್

ವಿವೋ Y100i ಪವರ್ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ Y100i ಪವರ್ ಸ್ಮಾರ್ಟ್‌ಫೋನ್‌ 6.64 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪಂಚ್-ಹೋಲ್ IPS LCD ಡಿಸ್‌ಪ್ಲೇ ಆಗಿದ್ದು, 1080 x 2388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 120 Hzz ರೇಟ್‌ ಬೆಂಬಲಿಸಲಿದೆ. ಈ ಡಿಸ್‌ಪ್ಲೇ ವೀಡಿಯೋ ವೀಕ್ಷಣೆ ಯೋಗ್ಯವಾದ ಮಾದರಿಯನ್ನು ಹೊಂದಿದೆ.

ವಿವೋ Y100i ಪವರ್ ಪ್ರೊಸೆಸರ್‌ ಯಾವುದು?
ವಿವೋ Y100i ಪವರ್ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12 GB RAM ಮತ್ತು 512 GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ. ಇದರೊಂದಿಗೆ 12 GB ವರ್ಚುವಲ್ RAM ಕೂಡ ವಿಸ್ತರಿಸಬಹುದಾಗಿದೆ.

Vivo: ಸೆಲ್ಫಿ ಪ್ರಿಯರಿಗೆ ಮತ್ತೊಂದು ಆಯ್ಕೆ! ಎಂಟ್ರಿ ಕೊಟ್ಟಿದೆ ವಿವೋ Y100i ಪವರ್

ವಿವೋ Y100i ಪವರ್ ಕ್ಯಾಮೆರಾ ಸೆಟಪ್‌ ಏನಿದೆ?
ವಿವೋ Y100i ಪವರ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ವಿವೋ Y100i ಪವರ್ ಬ್ಯಾಟರಿ ಮತ್ತು ಇತರೆ
ವಿವೋ Y100i ಪವರ್ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 802.11ac, ಬ್ಲೂಟೂತ್ 5.1, GPS ಮತ್ತು USB- ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ 639mm2 ಲಿಕ್ವಿಡ್ ಕೂಲಿಂಗ್ ಹೀಟ್ ಪೈಪ್ ಮತ್ತು 8736mm ಗ್ರ್ಯಾಫೈಟ್ ಶೀಟ್ ಅನ್ನು ಹೊಂದಿದೆ.

Vivo: ಸೆಲ್ಫಿ ಪ್ರಿಯರಿಗೆ ಮತ್ತೊಂದು ಆಯ್ಕೆ! ಎಂಟ್ರಿ ಕೊಟ್ಟಿದೆ ವಿವೋ Y100i ಪವರ್

ವಿವೋ Y100i ಪವರ್ ಬೆಲೆ ಮತ್ತು ಲಭ್ಯತೆ
ವಿವೋ Y100i ಪವರ್ ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಇದರ ಬೆಲೆ 2,099 ಯುವಾನ್ (~$295) ಆಗಿದೆ. ಇದು ಕಪ್ಪು, ಬಿಳಿ ಮತ್ತು ನೀಲಿ ಮುಂತಾದ ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇದಲ್ಲದೆ ವಿವೋ ಕಂಪೆನಿ ಇತ್ತೀಚಿಗೆ ವಿವೋ S18 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಫೋನ್‌ 6.78 ಇಂಚಿನ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 9200+ SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಮಾಲಿ-G715 Immortalis MP11 GPU ಸಪೋರ್ಟ್‌ ಪಡೆದಿದ್ದು, ಆಂಡ್ರಾಯ್ಡ್ 14 ಆಧಾರಿತ ಮೂಲ OS 4ನಲ್ಲಿ ರನ್‌ ಆಗಲಿದೆ. ಹಾಗೆಯೇ 12GB RAM ಮತ್ತು 256GB ಹಾಗೂ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ವೇರಿಯೆಂಟ್‌ನೊಂದಿಗೆ ಬರಲಿದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

Best Mobiles in India

English summary
Vivo Y100i Power with Snapdragon 6 Gen 1 launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+