ವಿವೋ Y100t 5G ಸ್ಮಾರ್ಟ್‌ಫೋನ್ ಲಾಂಚ್: ಅತ್ಯಾಕರ್ಷಕ ಕ್ಯಾಮೆರಾ ಫೀಚರ್ಸ್!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಇದನ್ನು ವಿವೋ Y100t ಸ್ಮಾರ್ಟ್‌ಫೋನ್ ಎಂದು ಹೆಸರಿಸಲಾಗಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, Vivo Y100t 5G ಸ್ಮಾರ್ಟ್‌ಫೋನ್ ಟೆಕ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೋ ಜ್ಯಾಕ್‌ನಂತಹ ಫೀಚರ್ಸ್‌ಗಳನ್ನು ಪಡೆದಿದೆ. ಹಾಗಾದ್ರೆ ವಿವೋ Y100t ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ Y100t 5G ಡಿಸ್‌ಪ್ಲೇ ರಚನೆ
Vivo Y100t 5G ಸ್ಮಾರ್ಟ್‌ಫೋನ್ 6.64 ಇಂಚಿನ ಫುಲ್ ಹೆಚ್‌ಡಿ ಪ್ಲಸ್ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ನೀಡಲಿದ್ದು, 1080x2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇಯು ಪ್ರತಿ ಇಂಚಿಗೆ 394 ಪಿಕ್ಸೆಲ್‌ಗಳ ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.
ವಿವೋ Y100t 5G ಪ್ರೊಸೆಸರ್ ಯಾವುದು?
ವಿವೋ Y100t 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ, ಆದರೆ ಇದರ ಆಂಡ್ರಾಯ್ಡ್ OS ಮತ್ತು OriginOS ನ ನಿಖರವಾದ ಆವೃತ್ತಿಯ ಬಗ್ಗೆ ಮಾಹಿತಿಯಿಲ್ಲ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 512 GB ಅಂತರ್ನಿರ್ಮಿತ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು 8 GB ವರ್ಚುವಲ್ RAM ಅನ್ನು ವಿಸ್ತರಿಸಬಹುದಾಗಿದೆ.
ವಿವೋ Y100t 5G ಕ್ಯಾಮೆರಾ ಸೆಟಪ್ ಏನು?
ವಿವೋ Y100t 5G ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ವಿವೋ Y100t 5G ಬ್ಯಾಟರಿ ಮತ್ತು ಇತರೆ
ವಿವೋ Y100t 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿದೆ. ಇದು NFC, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೋ ಜ್ಯಾಕ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ವಿವೋ Y100t 5G ಬೆಲೆ ಮತ್ತು ಲಭ್ಯತೆ
ವಿವೋ Y100t 5G ಸ್ಮಾರ್ಟ್‌ಫೋನಿನ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಇದರ ಬೆಲೆ ಫೆಬ್ರವರಿ 23 ರಂದು ದೃಢೀಕರಿಸುವ ನಿರೀಕ್ಷೆಯಿದೆ. ಇದನ್ನು ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದು.
ಇನ್ನು ವಿವೋ ಕಂಪೆನಿ ಶೀಘ್ರದಲ್ಲೇ ತನ್ನ ವಿವೋ Y200e 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ನ ಬೆಲೆ ವಿವರ ಕೂಡ ಬಹಿರಂಗವಾಗಿದೆ. ಲಭ್ಯ ಮಾಹಿತಿ ಪ್ರಕಾರ ಈ ಫೋನ್ 6GB RAM + 128GB ರೂಪಾಂತರದ ಆಯ್ಕೆಗೆ 23,999ರೂ ಬೆಲೆಯನ್ನು ಹೊಂದಿರಲಿದೆ. ಇದರ 8GB RAM+ 128GB ಆಯ್ಕೆಯು 25,999ರೂ ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್ ಡೈಮಂಡ್ ಬ್ಲ್ಯಾಕ್ ಮತ್ತು ಕೇಸರಿ ಡಿಲೈಟ್ ಕಲರ್ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ ಎಂದು ಸೂಚಿಸಲಾಗಿದೆ.


Click it and Unblock the Notifications








