ವಿವೋ Y12 4G ಸ್ಮಾರ್ಟ್‌ಫೋನ್ ಬಿಡುಗಡೆ! ಕ್ಯಾಮೆರಾ ಹೇಗಿದೆ? ಪ್ರೊಸೆಸರ್ ದಕ್ಷತೆ ಏನು?
ಸ್ಮಾರ್ಟ್‌ಫೋನ್ ವಲಯದಲ್ಲಿ ವಿವೋ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ವಿವೋ ಕಂಪೆನಿ ಕೂಡ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಿವೋ ಕಂಪೆನಿ ಹೊಸದಾಗಿ ವಿವೋ Y12 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮೀಡಿಯಾಟೆಕ್ ಹಿಲಿಯೋ G85SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ವಿವೋ Y12 4G ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ Y12 4G ಡಿಸ್‌ಪ್ಲೇ ರಚನೆ
ವಿವೋ Y12 4G ಸ್ಮಾರ್ಟ್‌ಫೋನ್ 6.56 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ LCD ವಾಟರ್‌ಡ್ರಾಪ್-ನಾಚ್ ಡಿಸ್‌ಪ್ಲೇಯನ್ನು ಹೊಂದಿದ್ದು, 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ವಿವೋ Y12 4G ಪ್ರೊಸೆಸರ್ ಯಾವುದು?
ವಿವೋ Y12 4G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್13 ಆಧಾರಿತ ಒರಿಜಿನ್ OS 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸು ವುದಕ್ಕೆ ಕೂಡ ಅವಕಾಶವನ್ನು ನೀಡಿದೆ.

ವಿವೋ Y12 4G ಕ್ಯಾಮೆರಾ ಸೆಟ್‌ಅಪ್ ಏನಿದೆ?
ವಿವೋ Y12 4G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ LED ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ವಿವೋ Y12 4G ಬ್ಯಾಟರಿ ಮತ್ತು ಇತರೆ ಸೌಲಭ್ಯ
ವಿವೋ Y12 4G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB-C ಪೋರ್ಟ್ ಮೂಲಕ 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಆಡಿಯೊ ಜಾಕ್, ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಅನ್ನು ಒಳಗೊಂಡಿವೆ.

ವಿವೋ Y12 4G ಬೆಲೆ ಮತ್ತು ಲಭ್ಯತೆ
ವಿವೋ Y12 4G ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಅನಾವರಣಗೊಂಡಿದೆ. ಆದರಿಂದ ಚೀನಾದಲ್ಲಿ ಇದರ ಬೆಲೆ 999ಯುವಾನ್ (ಅಂದಾಜು 11,850ರೂ) ಬೆಲೆಯನ್ನು ಹೊಂದಿದೆ. ಇದನ್ನು ವೈಲ್ಡ್ ಗ್ರೀನ್ ಮತ್ತು ಕ್ರಿಸ್ಟಲ್ ಪರ್ಪಲ್‌ನಂತಹ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಇತ್ತೀಚಿಗೆ ವಿವೋ ಕಂಪೆನಿಯ ವಿವೋ ವಾಚ್ 3 ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ 505mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ 3D ಕರ್ವ್ಡ್ ಗ್ಲಾಸ್ ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಶ್ರವಣ ರಕ್ಷಣೆಗಾಗಿ ಸ್ಮಾರ್ಟ್‌ವಾಚ್ ಹೆಚ್ಚಿನ ನಾಯ್ಸ್ ಲೆವೆಲ್ ಅನ್ನು ಸಹ ಪತ್ತೆ ಮಾಡಲಿದೆ. ವಿವೋ ವಾಚ್ 3 ಇಂಟರ್‌ಫೇಸ್, ಫಂಕ್ಷನ್‌ಗಳನ್ನು ನ್ಯಾವಿಗೇಟ್ ಮಾಡಲು ಡಿವೈಸ್‌ನ ಬಲಭಾಗದಲ್ಲಿ ಮೇಲ್ಭಾಗದಲ್ಲಿ ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕಿರೀಟವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಕೆಳಭಾಗದಲ್ಲಿ ಫಿಸಿಕಲ್ ಬಟನ್ ಪಡೆದಿದೆ. ಜೊತೆಗೆ ಸ್ಮಾರ್ಟ್‌ವಾಚ್ ಹೆಲ್ತ್ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ.


Click it and Unblock the Notifications








