Home
ಸುದ್ದಿಜಾಲ

Vivo: 34% ರಿಯಾಯಿತಿ ಪಡೆದುಕೊಂಡ ವಿವೋ Y17s ಸ್ಮಾರ್ಟ್‌ಫೋನ್‌:..50MP ಮುಖ್ಯ ಕ್ಯಾಮೆರಾ!

ಕ್ಯಾಮೆರಾ ಫೀಚರ್ಸ್‌ಗಳಿಂದಲೇ ಗ್ರಾಹಕರ ಗಮನ ಸೆಳೆದಿರುವ ವಿವೋ Y17s ಸ್ಮಾರ್ಟ್‌ಫೋನ್‌ ಇದೀಗ ರಿಯಾಯಿತಿ ದರದಲ್ಲಿ ಸೆಲ್‌ ಅಗುತ್ತಿದೆ. ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಳ್ಳುವ ಮೂಲಕ ಗ್ರಾಹಕರ ಹುಬ್ಬೇರುವಂತೆ ಮಾಡಿದೆ. ಅದು ಕೂಡ ಬರೊಬ್ಬರಿ 34% ಡಿಸ್ಕೌಂಟ್‌ ಪಡೆದುಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಹೌದು, ವಿವೋ Y17s ಅಮೆಜಾನ್‌ ತಾಣದಲ್ಲಿ 34% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಹಾಗಾದ್ರೆ ವಿವೊ Y17s ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು? ಇದರ ಫೀಚರ್ಸ್‌ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 34% ರಿಯಾಯಿತಿ ಪಡೆದುಕೊಂಡ ವಿವೋ Y17s ಸ್ಮಾರ್ಟ್‌ಫೋನ್‌:..50MP ಮುಖ್ಯ ಕ್ಯಾಮೆರಾ

ವಿವೋ Y17s ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು?
ವಿವೋ Y17s ಸ್ಮಾರ್ಟ್‌ಫೋನಿನ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಯನ್ನು ಅಮೆಜಾನ್‌ ತಾಣದಲ್ಲಿ 15,999ರೂ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ 34% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಸ್ಮಾರ್ಟ್‌ಫೋನ್‌ ಅನ್ನು ನೀವು ಕೇವಲ 10,499ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಇನ್ನಷ್ಟು ಕಡಿಮೆಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ.

ವಿವೋ Y17s ಫೀಚರ್ಸ್‌ ಹೇಗಿದೆ?
ವಿವೋ Y17s ಸ್ಮಾರ್ಟ್‌ಫೋನ್‌ 6.56 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 60Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದ್ದು, 700 ನಿಟ್ಸ್‌ವರೆಗೆ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇದಲ್ಲದೆ ಸೆಲ್ಫಿ ಕ್ಯಾಮೆರಾಗಾಗಿ ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನು ಹೊಂದಿದೆ.

 34% ರಿಯಾಯಿತಿ ಪಡೆದುಕೊಂಡ ವಿವೋ Y17s ಸ್ಮಾರ್ಟ್‌ಫೋನ್‌:..50MP ಮುಖ್ಯ ಕ್ಯಾಮೆರಾ

ವಿವೋ Y17s ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?
ವಿವೋ Y17s ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ Funtouch OS 13 ಬೆಂಬಲದೊಂದಿಗೆ ರನ್‌ ಆಗಿದೆ. ಈ ಫೋನ್‌ 4GB RAM + 64GB ಮತ್ತು 4GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡೂ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ವಿವೋ Y17s ಕ್ಯಾಮೆರಾ ರಚನೆ ಹೇಗಿದೆ?
ವಿವೋ Y17s (vivo y17s) ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಗಿದೆ. ರಿಯರ್‌ ಕ್ಯಾಮೆರಾಗಳ ಮೂಲಕ 1080p 30fps ನಲ್ಲಿ ವೀಡಿಯೊಗಳನ್ನು ಸೆರೆಹಿಡಿಯಬಹುದು. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

 34% ರಿಯಾಯಿತಿ ಪಡೆದುಕೊಂಡ ವಿವೋ Y17s ಸ್ಮಾರ್ಟ್‌ಫೋನ್‌:..50MP ಮುಖ್ಯ ಕ್ಯಾಮೆರಾ

ವಿವೋ Y17s ಬ್ಯಾಟರಿ ಮತ್ತು ಇತರೆ ಸೌಲಭ್ಯ
ವಿವೋ Y17s ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯವನ್ನು ಹೊಂದಿದೆ. ಇದು 15W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಾಧನವು ಸಕ್ರಿಯಗೊಳಿಸಿದ USB ಟೈಪ್-C ಪೋರ್ಟ್ ಮೂಲಕ ರಿವರ್ಸ್-ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್ AI-ಚಾಲಿತ ಬ್ಯಾಟರಿ ಆಪ್ಟಿಮೈಜರ್ ಅನ್ನು ಸಹ ಹೊಂದಿದೆ, ಇದು ಇಡೀ ರಾತ್ರಿ ಪ್ಲಗ್ ಇನ್ ಮಾಡಿದಾಗ ಫೋನ್ ಹೆಚ್ಚು ಚಾರ್ಜ್ ಆಗುವುದನ್ನು ತಡೆಯುತ್ತದೆ.

Best Mobiles in India

English summary
Vivo Y17s Smartphone Got 34% Discout in amazon website: Offer price Detail in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+