ಭಾರತಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ವಿವೋ Y17s ಸ್ಮಾರ್ಟ್‌ಫೋನ್ !
ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಖರೀದಿಸುವವರ ಮೊದಲ ಆಯ್ಕೆ ವಿವೋ ಫೋನ್ ಆಗಿರುತ್ತದೆ. ಅಷ್ಟರ ಮಟ್ಟಿಗೆ ವಿವೋ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಪ್ರಿಯ ಮನಗೆದ್ದಿವೆ. ಇದಕ್ಕೆ ಸೂಕ್ತವೆಂಬಂತೆ ವಿವೋ ಕಂಪೆನಿ ಕೂಡ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ವಿವೋ Y17s ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಹೌದು, ವಿವೋ Y17s ಸ್ಮಾರ್ಟ್‌ಫೋನ್ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಸೌಲಭ್ಯದಲ್ಲಿ ಭಾರತದಲ್ಲಿ ತಯಾರಿಸಲಾಗಿದೆ ಎಂದು ವಿವೋ ಕಂಪೆನಿ ಹೇಳಿದೆ. ಇನ್ನು ವಿವೋ Y17s ಸ್ಮಾರ್ಟ್‌ಫೋನ್ AI-ಚಾಲಿತ ಬ್ಯಾಟರಿ ಸೆಕ್ಯುರಿಟಿ ಫೀಚರ್ಸ್‌ಗಳೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ Y17s ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ Y17s ಸ್ಮಾರ್ಟ್‌ಫೋನ್ 6.56 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದ್ದು, 700 ನಿಟ್ಸ್‌ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ ಸೆಲ್ಫಿ ಕ್ಯಾಮೆರಾಗಾಗಿ ವಾಟರ್ ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.
ವಿವೋ Y17s ಪ್ರೊಸೆಸರ್ ಯಾವುದು?
ವಿವೋ Y17s ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G85SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಎರಡೂ ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.
ವಿವೋ Y17s ಕ್ಯಾಮೆರಾ ಸೆಟ್‌ಅಪ್
ವಿವೋ Y17s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಗಿದೆ. ರಿಯರ್ ಕ್ಯಾಮೆರಾಗಳ ಮೂಲಕ 1080p 30fps ನಲ್ಲಿ ವೀಡಿಯೊಗಳನ್ನು ಸೆರೆಹಿಡಿಯಬಹುದು. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ವಿವೋ Y17s ಬ್ಯಾಟರಿ ಮತ್ತು ಇತರೆ
ವಿವೋ Y17s ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯವನ್ನು ಹೊಂದಿದೆ. ಇದು 15W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಾಧನವು ಸಕ್ರಿಯಗೊಳಿಸಿದ USB ಟೈಪ್-C ಪೋರ್ಟ್ ಮೂಲಕ ರಿವರ್ಸ್-ವೈರ್ಡ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್ AI-ಚಾಲಿತ ಬ್ಯಾಟರಿ ಆಪ್ಟಿಮೈಜರ್ ಅನ್ನು ಸಹ ಹೊಂದಿದೆ, ಇದು ಇಡೀ ರಾತ್ರಿ ಪ್ಲಗ್ ಇನ್ ಮಾಡಿದಾಗ ಫೋನ್ ಹೆಚ್ಚು ಚಾರ್ಜ್ ಆಗುವುದನ್ನು ತಡೆಯುತ್ತದೆ.
ವಿವೋ Y17s ಬೆಲೆ ಮತ್ತು ಲಭ್ಯತೆ
ವಿವೋ Y17s ಸ್ಮಾರ್ಟ್‌ಫೋನ್ 4GB+64GB ಮಾದರಿಗೆ 11,499ರೂ ಬೆಲೆಯನ್ನು ಹೊಂದಿದೆ. ಇದರ 4GB+128GB ರೂಪಾಂತರಕ್ಕೆ 12,499ರೂ.ಬೆಲೆಯನ್ನು ಹೊಂದಿರಲಿದೆ. ಇನ್ನು ಈ ಡಿವೈಸ್ ಗ್ಲಿಟರ್ ಪರ್ಪಲ್ ಮತ್ತು ಫಾರೆಸ್ಟ್ ಗ್ರೀನ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದನ್ನು ಅಮೆಜಾನ್, ಪ್ಲಿಪ್‌ಕಾರ್ಟ್, ವಿವೋ ಆನ್‌ಲೈನ್ ಸ್ಟೋರ್ ಮತ್ತು ವಿವೋ ಪಾಲುದಾರ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೇಲ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಇಂದಿನಿಂದಲೇ ಖರೀದಿಗೆ ಲಭ್ಯವಾಗುತ್ತಿದೆ.


Click it and Unblock the Notifications








