Home
ಸುದ್ದಿಜಾಲ

Vivo: ಹೊಸ ಫೋನಿನ ವಿವರ ಲೀಕ್! ಅಗ್ಗದ ಬೆಲೆ.. ಲಾಂಚ್ ಯಾವಾಗ?

ವಿವೋ (Vivo) ಕಂಪನಿಯು ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಹೌದು, ಕಂಪನಿಯು ಅಗ್ಗದ ಸ್ಮಾರ್ಟ್‌ಫೋನ್ ವಿವೋ Y18e (Vivo Y18e) ಅನ್ನು ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದರ ಬೆಲೆ ಕೇವಲ 7,999 ರೂ. ಆಗಿದೆ. ಇದೀಗ, ವಿವೋ Y19e (Vivo Y19e) ಹೆಸರಿನಲ್ಲಿ ನೂತನ ಫೋನ್ ಪರಿಚಯಿಸಲಿದೆ. ಈ ಅಗ್ಗದ ವಿವೋ ಫೋನ್ ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬರುವ ವಿವೋ Y19e ಮೊಬೈಲ್ 6GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇದು ಯುನಿಸೊಕ್ T612 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಫೋನಿನಲ್ಲಿ 6.68 ಇಂಚಿನ ಡಿಸ್ಪ್ಲೇ ಇರಲಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಈ ವಿವೋ ಫೋನ್ 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

Vivo Y19e ವಿವರ ಸೋರಿಕೆ! ಅಗ್ಗದ ಬೆಲೆ.. ಯಾವಾಗ ಲಾಂಚ್?

ವಿವೋ Y19e ಭಾರತದಲ್ಲಿ ಬಿಡುಗಡೆ ಯಾವಾಗ?

ವಿವೋ Y19e ಫೋನಿನ ಬಗ್ಗೆ ಟೆಕ್ ವೆಬ್‌ಸೈಟ್ ಗಿಜ್ಮೊಚೀನಾ (GizmoChina) ಮೂಲಕ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. IMEI ಡೇಟಾಬೇಸ್‌ನಲ್ಲಿ ಮಾಡೆಲ್ ಸಂಖ್ಯೆ V2431 ನೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ಗುರುತಿಸಲಾಗಿದೆ. ಈ ಪ್ರಮಾಣೀಕರಣದಲ್ಲಿ, ಫೋನಿನ ಮಾರ್ಕೆಟಿಂಗ್ ಹೆಸರನ್ನು ವಿವೋ Y19e ಎಂದು ನಮೂದಿಸಲಾಗಿದೆ. ಪ್ರಸ್ತುತ, ಫೋನಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯು ಪಟ್ಟಿಯಲ್ಲಿ ಲಭ್ಯವಿಲ್ಲ. ಆದರೆ, ಕಂಪನಿಯು ಈ ಅಗ್ಗದ ಮೊಬೈಲ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.

ವಿವೋ Y19e ಫೋನಿನ ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ವಿವೋ Y19e ಫೋನಿನ ಸ್ಮಾರ್ಟ್‌ಫೋನ್ 6.68 ಇಂಚಿನ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 90Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಎಲ್‌ಸಿಡಿ ಡಿಸ್ಪ್ಲೇ ಆಗಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ವರದಿಯ ಪ್ರಕಾರ, ವಿವೋ Y19E ಮೊಬೈಲ್ ಯುನಿಸೊಕ್ T612 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗುತ್ತದೆ. ಇದು 1.8GHz ಗಡಿಯಾರದ ವೇಗದಲ್ಲಿ ಕೆಲಸ ಮಾಡುತ್ತದೆ. ಫೋನ್ ಆಂಡ್ರಾಯ್ಡ್‌ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುವ ಸಾಧ್ಯತೆಯಿದೆ.

ಸ್ಟೋರೇಜ್ ಆಯ್ಕೆ

ಮುಂಬರುವ ವಿವೋ Y19e ಅನ್ನು 6GB RAM ನಲ್ಲಿ ಬಿಡುಗಡೆ ಮಾಡಲಾಗುವುದು. ಇದು 128GB ಇಂಟರ್ನಲ್ ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ. ಫೋನಿನಲ್ಲಿ ವರ್ಚುವಲ್ RAM ತಂತ್ರಜ್ಞಾನವೂ ಲಭ್ಯವಿರಲಿದೆ. ವರದಿಯ ಪ್ರಕಾರ, ಈ ಮೊಬೈಲ್ 1TB ವರೆಗೆ ಮೆಮೊರಿ ಕಾರ್ಡ್ ಬೆಂಬಲಿಸಲು ಸಾಧ್ಯತೆಯಿದೆ.

ಕ್ಯಾಮೆರಾ ಸೆಟಪ್

ಕಪನಿಯು ವಿವೋ Y19e ಫೊನನ್ನು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ವಿವೋ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್‌ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೂತನ ವಿವೋ Y19e ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ವಿವೋ Y18e ಫೋನಿನ ಬೆಲೆ

ಕಂಪನಿಯು ವಿವೋ Y18E ಫೋನನ್ನು ಭಾರತದಲ್ಲಿ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟ ಮಾಡುತ್ತಿದೆ. ನೀವು, ಇದನ್ನು ಕೇವಲ 7,999 ರೂ.ಗಳಲ್ಲಿ ಖರೀದಿಸಬಹುದು. ಈ ಮೊಬೈಲ್ ಸ್ಪೇಸ್ ಬ್ಲಾಕ್ ಮತ್ತು ಜೆಮ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Vivo Y19e details and specifications leaked ahead of launch: know details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+