ಭಾರತಕ್ಕೆ ಎಂಟ್ರಿ ಕೊಟ್ಟ Vivo Y200e 5G ಸ್ಮಾರ್ಟ್‌ಫೋನ್: ಕ್ಯಾಮೆರಾದಲ್ಲಿದೆ ಅತ್ಯಾಕರ್ಷಕ ಫೀಚರ್ಸ್!
ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ವಿವೋ Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಮೂಲಕ ಟೆಕ್ ವಲಯದಲ್ಲಿ ಹೊಸ ಸಂಚಲನ ಆರಂಭವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೌದು, Vivo Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಬರಲಿದೆ. ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗಾದ್ರೆ Vivo Y200e 5G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vivo Y200e 5G ಡಿಸ್‌ಪ್ಲೇ ರಚನೆ ಹೇಗಿದೆ?
Vivo Y200e 5G ಸ್ಮಾರ್ಟ್‌ಫೋನ್ 6.67 ಇಂಚಿನ ಸ್ಯಾಮ್‌ಸಂಗ್ E4 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ. ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಅನ್ನು ಹೊಂದಿದೆ. ಇದಲ್ಲದೆ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಿದೆ.
Vivo Y200e 5G ಪ್ರೊಸೆಸರ್ ಯಾವುದು?
Vivo Y200e 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ FunTouch OS 14 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 6GB RAM ಮತ್ತು 128 GB ಹಾಗೂ 8GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ಇದಲ್ಲದೆ 8GB ವರೆಗಿನ ವರ್ಚುವಲ್ RAM ಅನ್ನು ಸಹ ಪಡೆದಿದೆ. ಇದರಲ್ಲಿ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
Vivo Y200e 5G ಕ್ಯಾಮೆರಾ ಸೆಟಪ್ ಏನಿದೆ?
Vivo Y200e 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯಲ್ಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಫ್ಲಿಕರ್ ಸೆನ್ಸಾರ್‌ನಲ್ಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
Vivo Y200e 5G ಬ್ಯಾಟರಿ ಮತ್ತು ಇತರೆ
Vivo Y200e 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 802.11ac, ಬ್ಲೂಟೂತ್ 5.0, GPS ಮತ್ತು USB-C ಪೋರ್ಟ್‌ನಂತಹ ಆಯ್ಕೆಗಳನ್ನು ನೀಡುತ್ತದೆ. ಇದು IP54-ರೇಟೆಡ್ ಧೂಳು ನಿರೋಧಕ ಮತ್ತು ನೀರು-ನಿರೋಧಕ ಚಾಸಿಸ್ ಅನ್ನು ಹೊಂದಿದೆ.
ಭಾರತದಲ್ಲಿ Vivo Y200e 5G ಬೆಲೆ ಮತ್ತು ಲಭ್ಯತೆ
Vivo Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ 6GB + 128GB ಸ್ಟೋರೇಜ್ ಆಯ್ಕೆಗೆ 19,999ರೂ ಬೆಲೆಯನ್ನು ಹೊಂದಿದೆ. ಇದರ 8GB + 128GB ಸ್ಟೋರೇಜ್ ಆಯ್ಕೆಯು 20,999ರೂ ಬೆಲೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಪೋನ್ ಬ್ಲ್ಯಾಕ್ ಡೈಮಂಡ್ ಮತ್ತು ಕೇಸರಿ ಕಿತ್ತಳೆ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ವಿವೋ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಭಾರತದಲ್ಲಿನ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಇದು ಫೆಬ್ರವರಿ 27 ರಿಂದ ಖರೀದಿಗೆ ಲಭ್ಯವಿರುತ್ತದೆ.


Click it and Unblock the Notifications








