ಮೊಬೈಲ್ ಮಾರುಕಟ್ಟೆಗೆ ವಿವೋ Y27s ಸ್ಮಾರ್ಟ್‌ಫೋನ್ ಎಂಟ್ರಿ! ಅಚ್ಚರಿಯ ಫೀಚರ್ಸ್!
ಟೆಕ್ ವಲಯದ ಸನ್ಸೇಷನ್ ವಿವೋ ಕಂಪೆನಿ ತನ್ನ Y-ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದನ್ನು ವಿವೋ Y27s ಫೋನ್ ಎಂದು ಹೆಸರಿಸಲಾಗಿದ್ದು, ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿದ್ದು, 44W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
ಹೌದು, ವಿವೋ Y27s ಸ್ಮಾರ್ಟ್‌ಫೋನ್ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಅನ್ನು ಬೆಂಬಲಿಸಲಿದ್ದು, ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ Y27s ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ರಚನೆ
ವಿವೋ Y27s ಸ್ಮಾರ್ಟ್‌ಫೋನ್ 6.64 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸದೊಂದಿಗೆ ಬರಲಿದೆ. ಇದು 1080 x 2388 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 395 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 650 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ವಿವೋ Y27s ಸ್ಮಾರ್ಟ್‌ಫೋನ್ ಪ್ರೊಸೆಸರ್ ಯಾವುದು?
ವಿವೋ Y27s ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್13 ಆಧಾರಿತ Funtouch OS 13 ನೊಂದಿಗೆ ರನ್ ಆಗಲಿದೆ. ಹಾಗೆಯೇ 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ.

ವಿವೋ Y27s ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟ್‌ಅಪ್
ವಿವೋ Y27s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಡೆಪ್ತ್ ಲೆನ್ಸ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ವಿವೋ Y27s ಬ್ಯಾಟರಿ ಮತ್ತು ಇತರೆ
ವಿವೋ Y27s ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಫೋನ್ ಎಡ್ಜ್‌ನಲ್ಲಿರುವ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿ ಕೂಡ ಕಾರ್ಯನಿರ್ವಹಿಸಲಿದೆ.

ವಿವೋ Y27s ಬೆಲೆ ಮತ್ತು ಲಭ್ಯತೆ
ವಿವೋ Y27s ಸ್ಮಾರ್ಟ್‌ಫೋನ್ ಇಂಡೋನೇಷ್ಯಾದಲ್ಲಿ 8GBRAM + 128GB ರೂಪಾಂತರಕ್ಕೆ IDR 2,399,000 (ಅಂದಾಜು 12,762ರೂ) ಮತ್ತು 8RAM + 256GB ಆಯ್ಕೆಗೆ IDR 2,799,000 (ಅಂದಾಜು 14,890ರೂ) ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಬರ್ಗಂಡಿ ಬ್ಲಾಕ್ ಮತ್ತು ಗಾರ್ಡನ್ ಗ್ರೀನ್ ಬಣ್ಣಗಳಲ್ಲಿ ಪಡೆಯಬಹುದು.
ಇದಲ್ಲದೆ ವಿವೋ X100 ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ. ಈ ಫೋನ್ ನವೆಂಬರ್ 13ಕ್ಕೆ ಬಿಡುಗಡೆ ಆಗಲಿದೆ ಎಂಬ ಸುದ್ದಿ ಬಹಿರಂಗವಾಗ್ತಿದ್ದ ಹಾಗೇ ಭಾರಿ ಹಲ್‌ಚಲ್ ಸೃಷ್ಟಿಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್ ವೇಗವನ್ನು ಹೊಂದಿರಲಿದೆ.


Click it and Unblock the Notifications








