Vivo Y28s 5G ಬೆಲೆ ಇಳಿಕೆ! ಕಡಿಮೆ ಬೆಲೆಗೆ ಲಭ್ಯ.. ವಿಶೇಷತೆಗಳೇನು?
ವಿವೋ ಕಂಪನಿಯು ತನ್ನ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡುತ್ತಿದೆ. ತನ್ನ 'Y' ಸರಣಿಯ 5G ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು, ಟೆಕ್ ಬ್ರಾಂಡ್ ವಿವೋ (Vivo) ಭಾರತದಲ್ಲಿ ವಿವೋ Y28s 5G (Vivo Y28s 5G) ಅನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ, ಈ ಫೋನಿನ ಮೂರು ಸ್ಟೋರೇಜ್ ರೂಪಾಂತರಗಳ ದರವನ್ನು ಕಡಿಮೆ ಮಾಡಿದೆ. ಕಂಪನಿಯು ಯಾವೆಲ್ಲಾ ಆಫರ್ ಘೋಷಿಸಿದೆ, ಹೊಸ ಬೆಲೆ ಮತ್ತು ಫೋನಿನ ವೈಶಿಷ್ಟ್ಯಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ವಿವೋ 5G ಮೊಬೈಲ್ ಕೊಳ್ಳಲು ಬಯಸಿದರೆ, ವಿವೋ Y28s 5G ಸರಿಯಾದ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಯೆಂದರೆ, ಇದು 6.56 ಇಂಚಿನ 90Hz ಡಿಸ್ಪ್ಲೇಯನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದರೊಂದಿಗೆ, 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರಾಟವಾಗುತ್ತಿದೆ.

ವಿವೋ Y28s 5G ಹೊಸ ಬೆಲೆ ಮತ್ತು ಆಫರ್‌ಗಳು
4GB RAM + 128GB = 13,999 ರೂ.
6GB RAM + 128GB = 15,499 ರೂ.
8GB RAM + 128GB = 16,999 ರೂ.
ಆಫರ್ ಬೆಲೆ
4GB RAM + 128GB = 13,499 ರೂ.
6GB RAM + 128GB = 14,999 ರೂ.
8GB RAM + 128GB = 16,499 ರೂ.
ವಿವೋ Y28S 5G ಮೊಬೈಲ್ ಅನ್ನು ಇಂದಿನಿಂದಲೇ ಹೊಸ ದರದಲ್ಲಿ ಖರೀದಿಸಬಹುದು. ನೀವು ಈ ಸ್ಮಾರ್ಟ್‌ಫೋನ್ ಅನ್ನು ಕಂಪನಿಯ ವೆಬ್‌ಸೈಟ್, ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳು ಹಾಗೂ ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಳಲ್ಲಿ 500 ರೂ. ಅಗ್ಗದಲ್ಲಿ ಖರೀದಿಸಬಹುದು. ಈ ವಿವೋ ಫೋನ್ ವಿಂಟೇಜ್ ರೆಡ್ ಮತ್ತು ಟ್ವಿಂಕ್ಲಿಂಗ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.
ಕಂಪನಿಯ ವೆಬ್‌ಸೈಟ್‌ನಿಂದ ಫೋನ್ ಖರೀದಿಸುವಾಗ, ಎಯು (Au) ಬ್ಯಾಂಕ್, ಇಂಡೂಸಿಂಡ್, BOB, DBS, J&K ಬ್ಯಾಂಕ್, ಐಡಿಎಫ್‌ಸಿ, ಫೆಡರಲ್, ಎಸ್‌ಬಿಐ ಅಥವಾ ಯೆಸ್ ಬ್ಯಾಂಕ್ ಕಾರ್ಡ್‌ನಿಂದ ಇಎಂಐ ಮಾಡಿದ್ದರೆ, ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು. ಹೆಚ್‌ಡಿಎಫ್‌ಸಿ, ಐಸಿಐಸಿಐ ಅಥವಾ ಎಸ್‌ಬಿಐ ಬ್ಯಾಂಕ್‌ನಿಂದ ಪೂರ್ಣ ಪಾವತಿಯನ್ನು ಮಾಡಿದರೆ 1,000 ರೂ. ರಿಯಾಯಿತಿ ಲಭ್ಯವಿದೆ. ನೀವು 750 ರೂ. ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಅಮೆಜಾನ್‌ನಲ್ಲಿ ಈ ಆಫರ್ ಪಡೆಯಿರಿ.
ವಿವೋ Y28S 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಈ ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 1612 × 720 ಪಿಕ್ಸೆಲ್ ರೆಸಲ್ಯೂಶನ್, LCD ಪ್ಯಾನೆಲ್‌ನಲ್ಲಿ ಮಾಡಲಾದ ವಾಟರ್‌ಡ್ರಾಪ್ ನಾಚ್ ಶೈಲಿಯ ಡಿಸ್ಪ್ಲೇ ಆಗಿದೆ. ಇದು 90Hz ರಿಫ್ರೆಶ್ ದರ ಮತ್ತು 840 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಪಡೆದಿದೆ. ಜೊತೆಗೆ, ಇದು ಗ್ಲೋಬಲ್ ಡಿಸಿ ಡಿಮ್ಮಿಂಗ್ ಮತ್ತು ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಸಹ ಹೊಂದಿದೆ.
ಪ್ರೊಸೆಸರ್: ವಿವೋ Y28S 5G ಫೋನನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ 8GB ವಿಸ್ತೃತ RAM ತಂತ್ರಜ್ಞಾನವನ್ನು ಹೊಂದಿದೆ. 1TB ಮೆಮೊರಿ ಕಾರ್ಡ್ ಅನ್ನು ಸ್ಥಾಪಿಸಬಹುದು.
ಕ್ಯಾಮೆರಾ: ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು ಸೋನಿ IMX852 ಸಂವೇದಕವಾಗಿದೆ. ಇದರೊಂದಿಗೆ, 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಕಂಪನಿಯು ವಿವೋ Y28s 5G ಸ್ಮಾರ್ಟ್‌ಫೋನ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಕಂಪನಿಯು 4 ವರ್ಷಗಳ ಬ್ಯಾಟರಿ ಗ್ಯಾರಂಟಿಯನ್ನು ನೀಡುತ್ತಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ IP6X ಧೂಳು ನಿರೋಧಕ ಮತ್ತು IPX4 ನೀರಿನ ನಿರೋಧಕವಾಗಿದೆ. ಎಫ್ಎಂ ರೇಡಿಯೋ, 150% ವಾಲ್ಯೂಮ್ ಬೂಸ್ಟ್ ಮತ್ತು ಸ್ಪ್ಲಿಟ್-ಸ್ಕ್ರೀನ್‌ನಂತಹ ವೈಶಿಷ್ಟ್ಯಗಳು ಈ ಫೋನ್‌ನಲ್ಲಿ ಲಭ್ಯವಿದೆ. 5GHz Wi-Fi, ಬ್ಲೂಟೂತ್ 5.4 ಮತ್ತು ಯುಎಸ್‌ಬಿ 2.0 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








