Home
ಸುದ್ದಿಜಾಲ

ಇಂದು Vivo Y300 5G ಲಾಂಚ್; ಇಲ್ಲಿವೆ ಟಾಪ್ 5G ಫೀಚರ್ಸ್‌.. ಬೆಲೆ ಎಷ್ಟು?

ವಿವೋ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲು ಸಜ್ಜಾಗಿದೆ. ಹೊಸ ವಿವೋ ಮೊಬೈಲ್ ಇಂದು ಗ್ರಾಹಕರ ಕೈ ಸೇರಲಿದೆ. ಹೌದು, ಕಂಪನಿಯು ಇಂದು (ನ.21) ಭಾರತದಲ್ಲಿ ನೂತನ ವಿವೋ Y300 5G (Vivo Y300 5G) ಫೋನನ್ನು ಬಿಡುಗಡೆ ಮಾಡಲಿದೆ. ಇದರ ಬೆಲೆ 22,000 ರೂ.ಗಿಂತಲೂ ಕಡಿಮೆ ಇರಲಿದೆ. ವಿವೋ ಕ್ಯಾಮೆರಾ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದು, ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಬನ್ನಿ, ವಿವೋ Y300 5G ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಈಗಾಗಲೇ, ವಿವೋ Y300 5G ಫೋನಿನ ವಿನ್ಯಾಸ ಮತ್ತು ಬಣ್ಣವನ್ನು ಬಹಿರಂಗಪಡಿಸಿದೆ. ಈ ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಸ್ನಾಪ್‌ಡ್ರಾಗನ್‌ 4 ಜೆನ್‌ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿ 512GB ಸ್ಟೋರೇಜ್‌ ಲಭ್ಯವಿದೆ. ಜೊತೆಗೆ 6.7 ಇಂಚಿನ ದೊಡ್ಡ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು 80W ವೇಗದ ಚಾರ್ಜರ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಇಂದು Vivo Y300 5G ಲಾಂಚ್; 32MP ಸೆಲ್ಫಿ ಕ್ಯಾಮೆರಾ.. ಕಡಿಮೆ ಬೆಲೆ!

ವಿವೋ Y300 5G ಫೋನಿನ ಬೆಲೆ (ನಿರೀಕ್ಷಿತ)

8GB RAM + 128GB ಸ್ಟೋರೇಜ್ ಬೆಲೆ = 21,999 ರೂ.
8GB RAM + 256GB ಸ್ಟೋರೇಜ್ ಬೆಲೆ = 23,999 ರೂ.

ನೂತನ ವಿವೋ Y300 5G ಫೋನ್‌ ಇಂದು (ನವೆಂಬರ್ 21) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ಕಂಪನಿಯು 21,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅದರಂತೆ, ಫೋನಿನ 8GB RAM+128GB ಸ್ಟೋರೇಜ್ ಆಯ್ಕೆಯು 21,999 ರೂ.ಗೆ ಬಿಡುಗಡೆಯಾಗಬಹುದು. 8GB RAM+256GB ಸ್ಟೋರೇಜ್ ರೂಪಾಂತರದ ಬೆಲೆ 23,999 ರೂ. ಇರಲಿದೆ. ನೀವು, ಈ ಫೋನನ್ನು ಟೈಟಾನಿಯಂ ಸಿಲ್ವರ್, ಫ್ಯಾಂಟಮ್ ಪರ್ಪಲ್ ಮತ್ತು ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

ಈ ಸುದ್ದಿ ಓದಿದ್ದೀರಾ?: ಅಗ್ಗದ ಬೆಲೆಗೆ Redmi A4 5G ಲಾಂಚ್; 50MP ಕ್ಯಾಮೆರಾ.. 5160mAh ಬ್ಯಾಟರಿ.. ನ.27ಕ್ಕೆ ಸೇಲ್!

ವಿವೋ Y300 5G: ಟಾಪ್ 5 ಫೀಚರ್ಸ್‌

ಡಿಸ್ಪ್ಲೇ ವಿವರ

ನೂತನ ವಿವೋ Y300 5G ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ 3D ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು ಪೂರ್ಣ ಹೆಚ್‌ಡಿ ಅಮೋಲೆಡ್ ಆಗಿದೆ. ಇದು 1080 × 2400 ಪಿಕ್ಸೆಲ್‌ ರೆಸಲ್ಯೂಶನ್ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ವಿವೋ Y300 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಪ್ರೊಸೆಸರ್‌ ಅನ್ನು 4 ನ್ಯಾನೋಮೀಟರ್‌ನಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Funtouch ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಇಂದು Vivo Y300 5G ಲಾಂಚ್; 32MP ಸೆಲ್ಫಿ ಕ್ಯಾಮೆರಾ.. ಕಡಿಮೆ ಬೆಲೆ!

ಕ್ಯಾಮೆರಾ ಸೆಟಪ್

ವಿವೋ ಯಾವಾಗಲೂ ಕ್ಯಾಮೆರಾಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಮುಂಬರುವ ವಿವೋ Y300 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎಐ (AI) ಔರಾ ಲೈಟ್‌ನೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ವಿವೋ Y300 5G ಫೋನನ್ನು 5000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ ⁠IP64 ರೇಟಿಂಗ್ ಪಡೆದಿದೆ.

Best Mobiles in India

English summary
Vivo Y300 5G launch in India Today: know expected price, Specs and more. ವಿವೋ Y300 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+