Home
ಸುದ್ದಿಜಾಲ

ವಿವೋ ಸಂಸ್ಥೆಯಿಂದ ಎರಡು ಹೊಸ ಫೋನ್‌ ಲಾಂಚ್‌! ಕ್ಯಾಮೆರಾ ವರ್ಷನ್‌ ಸೂಪರ್‌!

ಸ್ಮಾರ್ಟ್‌ಫೋನ್‌‌ ಕ್ಯಾಮೆರಾ ಪ್ರಿಯರಿಗೆ ವಿವೋ ಬ್ರ್ಯಾಂಡ್‌ ಫೋನ್‌ಗಳೆಂದರೆ ಅಚ್ಚುಮೆಚ್ಚು. ಅಷ್ಟರ ಮಟ್ಟಿಗೆ ವಿವೋ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳು ಗ್ರಾಹಕರ ಗಮನಸೆಳೆದಿವೆ. ಇದೀಗ ವಿವೋ ಕಂಪೆನಿ ಹೊಸ ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಫೋನ್‌ಗಳು ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಹೌದು, ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ವಿಶೇಷತೆಯನ್ನು ಹೊಂದಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿವೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿವೆ. ಇನ್ನುಳಿದಂತೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ವಿಶೇಷತೆ ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವೋ ಸಂಸ್ಥೆಯಿಂದ ಎರಡು ಹೊಸ ಫೋನ್‌ ಲಾಂಚ್‌! ಕ್ಯಾಮೆರಾ ವರ್ಷನ್‌ ಸೂಪರ್‌!

ವಿವೋ Y35+ 5G ಮತ್ತು ವಿವೋ Y35m+ 5G ಫೀಚರ್ಸ್‌ ಹೇಗಿದೆ: ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳು 6.44 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿವೆ. ಡಿಸ್‌ಪ್ಲೇ 2388×1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 19:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿವೆ.

ವಿವೋ Y35+ 5G ಮತ್ತು ವಿವೋ Y35m+ 5G ಪ್ರೊಸೆಸರ್‌ ಯಾವುದು: ಈ ಎರಡೂ ಫೋನ್‌ಗಳು ಆಕ್ಟಾ-ಕೋರ್ ಡೈಮೆನ್ಸಿಟಿ 6020SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಜೊತೆಗೆ Mali-G57 GPU ಸರ್ಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿವೆ.

ವಿವೋ ಸಂಸ್ಥೆಯಿಂದ ಎರಡು ಹೊಸ ಫೋನ್‌ ಲಾಂಚ್‌! ಕ್ಯಾಮೆರಾ ವರ್ಷನ್‌ ಸೂಪರ್‌!

ವಿವೋ Y35+ 5G ಮತ್ತು ವಿವೋ Y35m+ 5G ಕ್ಯಾಮೆರಾ: ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳು 50MP ಸಾಮರ್ಥ್ಯದ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, LED ಫ್ಲ್ಯಾಷ್‌ನೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಫೋನ್‌ಗಳು 8MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ವಿವೋ Y35+ 5G ಮತ್ತು ವಿವೋ Y35m+ ಬ್ಯಾಟರಿ ಬ್ಯಾಕ್‌ಅಪ್‌: ಈ ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, 4G LTE, ಡ್ಯುಯಲ್ ನ್ಯಾನೊ SIM ಕಾರ್ಡ್, Wi-Fi 802.11 b/g/n/ac, ಬ್ಲೂಟೂತ್ 5.1, OTG, GPS, Beidou, GLONASS, ಗೆಲಿಲಿಯೊ, 3.5mm ಆಡಿಯೋ ಜ್ಯಾಕ್, USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

ವಿವೋ ಸಂಸ್ಥೆಯಿಂದ ಎರಡು ಹೊಸ ಫೋನ್‌ ಲಾಂಚ್‌! ಕ್ಯಾಮೆರಾ ವರ್ಷನ್‌ ಸೂಪರ್‌!

ವಿವೋ Y35+ 5G ಮತ್ತು ವಿವೋ Y35m+ ಬೆಲೆ ಮತ್ತು ಲಭ್ಯತೆ: ಪ್ರಸ್ತುತ ಈ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಆದರಿಂದ ವಿವೋ Y35+ 5G 6GB RAM ಮತ್ತು 128GB ಆಯ್ಕೆಯ ಬೆಲೆ CNY 1,399 (ಅಂದಾಜು 16,400ರೂ)ಆಗಿದೆ. ಇದು ಸ್ಟಾರ್ ರಿಂಗ್ ಬ್ಲಾಕ್, ಸಾಲ್ಟ್ ಲೇಕ್ ಬ್ಲೂ ಮತ್ತು ನೆಬ್ಯುಲಾ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇನ್ನು ವಿವೋ Y35m + 5G ಸ್ಮಾರ್ಟ್‌ಫೋನ್‌ 8GB RAM ಮತ್ತು 128G ಸ್ಟೋರೇಜ್‌ ಆಯ್ಕೆಯು CNY 1,599 ಯುವಾನ್ (ಅಂದಾಜು 18,700ರೂ)ಬೆಲೆಯಲ್ಲಿ ಬರಲಿದೆ. ಇದು ಸ್ಟಾರ್ ರಿಂಗ್ ಬ್ಲಾಕ್ ಮತ್ತು ರಿಪ್ಪಲ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Vivo Y35+ 5G and the Y35m+ 5G come with a 6.64-inch IPS LCD display that has a Full HD+ resolution and a standard 60Hz refresh rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+