Home
ಸುದ್ದಿಜಾಲ

Vivo: ವಿವೋದ ಈ ಸ್ಮಾರ್ಟ್‌ಫೋನ್‌ ಮೇಲೆ 32% ಡಿಸ್ಕೌಂಟ್‌ ಲಭ್ಯ! 128GB ಸ್ಟೋರೇಜ್‌ ಆಯ್ಕೆ

ವಿವೋ Y36 ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಅಮೆಜಾನ್‌ ಗುಡ್‌ನ್ಯೂಸ್‌ ನೀಡಿದೆ. ಬಿಡುಗಡೆ ಆದ ದಿನದಿಂದಲೂ ಸಾಕಷ್ಟು ಡಿಮ್ಯಾಂಡ್‌ ಕ್ರಿಯೆಟ್‌ ಮಾಡಿರುವ ಈ ಫೋನ್‌ ಇದೀಗ ಬರೋಬ್ಬರಿ 32% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು ಗ್ರಾಹಕರನ್ನು ಅಚ್ಚರಿಗೆ ದೂಡಿದ್ದು, ಮುಗಿಬಿದ್ದು ಖರೀದಿಸುವಂತೆ ಮಾಡಿದೆ. 128GB ಸ್ಟೋರೇಜ್‌ ಆಯ್ಕೆಗೆ ಈ ಡಿಸ್ಕೌಂಟ್‌ ಅನ್ವಯವಾಗಲಿದೆ.

ಹೌದು, ವಿವೋ Y36 (vivo y36) ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vivo: ವಿವೋದ ಈ ಫೋನ್‌ ಮೇಲೆ 32% ಡಿಸ್ಕೌಂಟ್‌ ಲಭ್ಯ! 128GB ಸ್ಟೋರೇಜ್‌ ಆಯ್ಕೆ

ವಿವೋ Y36 ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು?
ವಿವೋ Y36 ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ 21,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ 32% ಡಿಸ್ಕೌಂಟ್‌ ಪಡೆದುಕೊಂಡಿರುವುದರಿಂದ ಇದನ್ನು ನೀವು ಕೇವಲ 14,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ HDFC ಬ್ಯಾಂಕ್ ಕಾರ್ಡ್ Txn ಮೇಲೆ ಫ್ಲಾಟ್ 750ರೂ.ತ್ವರಿತ ರಿಯಾಯಿತಿ ಸಿಗಲಿದೆ. ಜೊತೆಗೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಮೂಲಕ ಕೂಡ ಹೆಚ್ಚುವರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ವಿವೋ Y36 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?
ವಿವೋ Y36 ಸ್ಮಾರ್ಟ್‌ಫೋನ್‌ 6.64 ಇಂಚಿನ ಫುಲ್‌ ಹೆಚ್‌ಡಿ + LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2388 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 85.4% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿದೆ. ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಬೆಂಬಲವನ್ನು ಒಳಗೊಂಡಿದ್ದು, 650 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಲ್ಲಿದೆ.

Vivo: ವಿವೋದ ಈ ಫೋನ್‌ ಮೇಲೆ 32% ಡಿಸ್ಕೌಂಟ್‌ ಲಭ್ಯ! 128GB ಸ್ಟೋರೇಜ್‌ ಆಯ್ಕೆ

ವಿವೋ Y36 ಪ್ರೊಸೆಸರ್‌ ಯಾವುದು?
ವಿವೋ Y36 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ.

ವಿವೋ Y36 ಕ್ಯಾಮೆರಾ ಸೆಟಪ್‌ ಏನಿದೆ?
ವಿವೋ Y36 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಬೊಕೆ ಲೆನ್ಸ್‌ನಲ್ಲಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಷ್‌ ಅನ್ನು ನೀಡಲಾಗಿದೆ. ಜೊತೆಗೆ ಕ್ಯಾಮೆರಾ ಮೂಲಕ 1080p@30fps ವೀಡಿಯೊ ರೆಕಾರ್ಡಿಂಗ್‌ ಮಾಡಬಹುದಾಗಿದೆ.

Vivo: ವಿವೋದ ಈ ಫೋನ್‌ ಮೇಲೆ 32% ಡಿಸ್ಕೌಂಟ್‌ ಲಭ್ಯ! 128GB ಸ್ಟೋರೇಜ್‌ ಆಯ್ಕೆ

ವಿವೋ Y36 ಬ್ಯಾಟರಿ ಹಾಗೂ ಇತರೆ
ವಿವೋ Y36 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್‌-ಸಿ, ಬ್ಲೂಟೂತ್ ಆವೃತ್ತಿ v5.1, ವೈ-ಫೈ ಆವೃತ್ತಿ 2.4 GHz, 5 GHz ಬೆಂಬಲ, ಯುಎಸ್‌ಬಿ ಟೆಥರಿಂಗ್, ಜಿಪಿಎಸ್ ಬೆಂಬಲವನ್ನು ಪಡೆದಿದೆ. ಇದಲ್ಲದೆ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌, ಗೈರೊ, ಕಂಪಾಸ್‌ ಅನ್ನು ಒಳಗೊಂಡಿದೆ.

Best Mobiles in India

English summary
Vivo y36 smartphone Got 32% discount on amazon: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+