3D ಕರ್ವ್ಡ್ ಡಿಸ್ಪ್ಲೇಯ ಅತ್ಯಂತ ಸ್ಲಿಮ್ ಪೋನ್ Vivo Y400 Pro 5G ಬಿಡುಗಡೆ!
ಭಾರತದಲ್ಲಿ ಮೊಬೈಲ್ ಪ್ರಿಯರು ಬಹು ನಿರೀಕ್ಷೆಯಿಂದ ಎದುರುನೋಡುತ್ತಿದ್ದ Vivo Y400 Pro 5G ಫೋನ್ ಇಂದು ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆಯೇ, 3D ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಅತ್ಯಂತ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿ Vivo Y400 Pro 5G (7.49mm ದಪ್ಪ) ಫೋನ್ ಮಾರುಕಟ್ಟೆಗೆ ಕಾಲಿದ್ದು, ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಬೆಂಬಲದ 5,500mAh ಬ್ಯಾಟರಿ ಮತ್ತು 50-ಮೆಗಾಪಿಕ್ಸೆಲ್ ಸೋನಿ IMX882 ಕ್ಯಾಮೆರಾ ಮತ್ತು nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Vivo Y400 Pro 5G ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Vivo Y400 Pro 5G ಫೋನ್ 8GB + 128GB ಆಯ್ಕೆಗೆ 24,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಮತ್ತು ಇದರ 8GB + 256GB ರೂಪಾಂತರದ ಬೆಲೆ 26,999 ರೂ. ಗಳಾಗಿವೆ. ಇದು ಫ್ರೀಸ್ಟೈಲ್ ವೈಟ್, ಫೆಸ್ಟ್ ಗೋಲ್ಡ್ ಮತ್ತು ನೆಬ್ಯುಲಾ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ. ಪ್ರಸ್ತುತ, ಈ ಫೋನ್ ವಿವೋ ಇಂಡಿಯಾ ವೆಬ್‌ಸೈಟ್‌ನಲ್ಲಿ ಪೂರ್ವ-ಆರ್ಡರ್‌ಗಾಗಿ ಲಭ್ಯವಿದ್ದು, ಜೂನ್ 27 ರಿಂದ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
Vivo Y400 Pro 5G ವೈಶಿಷ್ಟ್ಯಗಳು
Vivo Y400 Pro 5G ಫೋನ್ 6.77-ಇಂಚಿನ ಪೂರ್ಣ-ಎಚ್‌ಡಿ+ 3D ಬಾಗಿದ AMOLED ಡಿಸ್ಪ್ಲೇ ಹೊಂದಿದೆ, ಇದು 120Hz ರಿಫ್ರೆಶ್ ದರ, 4,500 ನಿಟ್ಸ್ ಗರಿಷ್ಠ ಹೊಳಪು ಮತ್ತು 300Hz ಟಚ್ ಸ್ಯಾಂಪ್ಲಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್, 8GB LPDDR4X RAM ಮತ್ತು 256GB ವರೆಗೆ UFS 3.1 ಆನ್‌ಬೋರ್ಡ್ ಮೆಮೊರಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ FuntouchOS 15 ನೊಂದಿಗೆ ಬರುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, Vivo Y400 Pro 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು, ಇದರಲ್ಲಿ f/1.79 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಸೆನ್ಸರ್ ಮತ್ತು f/2.4 ಅಪರ್ಚರ್ ಹೊಂದಿರುವ 2-ಮೆಗಾಪಿಕ್ಸೆಲ್ ಸೆನ್ಸರ್ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೋ ಕರೆಗಳಿಗೆ, ಹ್ಯಾಂಡ್‌ಸೆಟ್ f/2.45 ಅಪರ್ಚರ್ ಹೊಂದಿರುವ 32-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳು ಎರಡೂ 4K ವೀಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ.

ಜೊತೆಗೆ ಈ Vivo Y400 Pro 5G ಫೋನ್ AI ಫೋಟೋ ಎನ್‌ಹಾನ್ಸ್ ಮತ್ತು AI ಎರೇಸ್ 2.0 ಮುಂತಾದ AI-ಆಧಾರಿತ ಇಮೇಜಿಂಗ್ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇದರಲ್ಲಿ AI ನೋಟ್ ಅಸಿಸ್ಟ್, AI ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್, AI ಸ್ಕ್ರೀನ್ ಟ್ರಾನ್ಸ್‌ಲೇಷನ್ ಮತ್ತು AI ಸೂಪರ್‌ಲಿಂಕ್ ಮುಂತಾದ ಹಲವಾರು ಉತ್ಪಾದಕತಾ ವೈಶಿಷ್ಟ್ಯಗಳೂ ಸೇರಿವೆ. ಫೋನ್ Google ನ ಸರ್ಕಲ್ ಟು ಸರ್ಚ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, Vivo Y400 Pro 5G ಫೋನ್ 5,500mAh ಬ್ಯಾಟರಿ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಸಂಪರ್ಕ ಆಯ್ಕೆಗಳಲ್ಲಿ, Vivo Y400 Pro 5G ಫೋನ್ ಡ್ಯುಯಲ್ ನ್ಯಾನೋ ಸಿಮ್, 5G, 4G, ವೈ-ಫೈ, ಬ್ಲೂಟೂತ್ 5.4, GPS, OTG ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್‌ಸೆಟ್ IP65-ರೇಟೆಡ್ ಧೂಳು ಮತ್ತು ನೀರು-ನಿರೋಧಕ ನಿರ್ಮಾಣವನ್ನು ಹೊಂದಿದೆ.ನೆಬ್ಯುಲಾ ಪರ್ಪಲ್ ರೂಪಾಂತರವು 163.72×75.00×7.49mm ಗಾತ್ರವನ್ನು ಹೊಂದಿದ್ದು, ಸುಮಾರು 182g ತೂಕವಿದೆ. ಫೆಸ್ಟ್ ಗೋಲ್ಡ್ ಮತ್ತು ಫ್ರೀಸ್ಟೈಲ್ ವೈಟ್ ಆಯ್ಕೆಗಳು ಕ್ರಮವಾಗಿ 7.72mm ಮತ್ತು 7.74mm ದಪ್ಪವನ್ನು ಹೊಂದಿವೆ.


Click it and Unblock the Notifications








