ಭಾರತದಲ್ಲಿ ಕೈಗೆಟುಕುವ ಬೆಲೆಯ 'ವಿವೋ Y400 ಪ್ರೊ' ಬಿಡುಗಡೆ ದಿನಾಂಕ ನಿಗದಿ!
ಕಳೆದ ಹಲವು ದಿನಗಳಿಂದ ಹಲವಾರು ವದಂತಿಗಳಿಗೆ ಕಾರಣವಾಗಿದ್ದ ವಿವೋದ ಹೊಸ ವೈ-ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತಂತೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ವಿವೋ ತನ್ನ ಬಹು ನಿರೀಕ್ಷಿತ ಮತ್ತು ಕೈಗೆಟುಕುವ ಬೆಲೆಯ ವಿವೋ Y400 ಪ್ರೊ (Vivo Y400 Pro) ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕವನ್ನು ದೃಢಪಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ವಿವೋ T4 ಅಲ್ಟ್ರಾದ ನಂತರ, ಈ ಹೊಸ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹಾಗಾದರೆ, ಮುಂಬರುವ ವಿವೋ Y400 ಪ್ರೊ ಫೋನ್ ಯಾವಾಗ ಬಿಡುಗಡೆಯಾಗಿಲಿದೆ?, ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳು ಯಾವುವು ಎಂಬುದನ್ನು ಮುಂದೆ ಒದಿ ತಿಳಿಯೋಣ ಬನ್ನಿ.
ಭಾರತದಲ್ಲಿ ವಿವೋ Y400 ಪ್ರೊ ಬಿಡುಗಡೆ ದಿನಾಂಕ
ವಿವೋ Y400 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ ಜೂನ್ 20 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಬಿಡುಗಡೆಯ ನಂತರ, ಈ ಸ್ಮಾರ್ಟ್‌ಫೋನ್ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ (Flipkart), ಅಮೆಜಾನ್ (Amazon), ವಿವೋದ ಅಧಿಕೃತ ಇ-ಸ್ಟೋರ್ (Vivo E-store) ಮತ್ತು ಆಫ್‌ಲೈನ್ ಪಾಲುದಾರ ಚಿಲ್ಲರೆ ವ್ಯಾಪಾರಿಗಳ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ. ವಿವೋ ಈಗಾಗಲೇ Y400 ಪ್ರೊ ಗಾಗಿ ಅಧಿಕೃತ ಉತ್ಪನ್ನ ಪುಟವನ್ನು ಸ್ಥಾಪಿಸಿದ್ದು, ಇದು ಸ್ಮಾರ್ಟ್‌ಫೋನ್‌ನ ವಿನ್ಯಾಸದ ಕುರಿತು ಸ್ಪಷ್ಟವಾದ ನೋಟ ನೀಡುತ್ತದೆ. ಬೆಲೆಯ ವಿಚಾರದಲ್ಲಿ, ವಿವೋ Y400 ಪ್ರೊ ಫೋನ್ ಭಾರತದಲ್ಲಿ ₹20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ವಿವೋ Y400 ಪ್ರೊ: ವಿನ್ಯಾಸ ಮತ್ತು ಪ್ರಮುಖ ಆಕರ್ಷಣೆ
ವಿವೋ ಕಂಪೆನಿ ಪ್ರಕಾರ, Y400 ಪ್ರೊ ತನ್ನ ವಿಭಾಗದಲ್ಲಿ 'ತೆಳ್ಳಗಿನ 3D ಬಾಗಿದ ಡಿಸ್ಪ್ಲೇ ಫೋನ್' ಆಗಿ ಪಾದಾರ್ಪಣೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು ವೃತ್ತಾಕಾರದ ಔರಾ ಲೈಟ್ (Aura Light) ಅನ್ನು ಹೊಂದಿದೆ. ಈ ಔರಾ ಲೈಟ್ ಸ್ಮಾರ್ಟ್ ಕಲರ್ ತಾಪಮಾನ ಹೊಂದಾಣಿಕೆಗೆ ಸಹಾಯ ಮಾಡುತ್ತದೆ, ಇದು ಕಡಿಮೆ ಬೆಳಕಿನಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಿದೆ. ಹಿಂಭಾಗದ ಕ್ಯಾಮೆರಾ ವಿನ್ಯಾಸದಲ್ಲಿ IR ಬ್ಲಾಸ್ಟರ್ (IR Blaster) ಅನ್ನು ಸಹ ಸಂಯೋಜಿಸಲಾಗಿದೆ, ಇದು ಬಳಕೆದಾರರಿಗೆ ಇತರ ಸಾಧನಗಳನ್ನು ನಿಯಂತ್ರಿಸಲು ಅನುಕೂಲ ಕಲ್ಪಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ವಿವೋ Y400 ಪ್ರೊ: ನಿರೀಕ್ಷಿತ ವೈಶಿಷ್ಟ್ಯಗಳು
ಭಾರತದಲ್ಲಿ ವಿವೋ Y400 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಬಿಡುಗಡೆಯಾಗುವ ದಿನಾಂಕ ಪ್ರಕಟವಾದರೂ, ಇದರ ಅಧಿಕೃತ ಫೀಚರ್ಸ್ ಕುರಿತು ಮಾಹಿತಿ ಹೊರಬಿದ್ದಿಲ್ಲ. ಆದರೆ, ಈ ಫೋನಿನಲ್ಲಿ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ.
ಪ್ರೊಸೆಸರ್ ಮತ್ತು ಮೆಮೊರಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC (MediaTek Dimensity 7300 SoC) ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ, ಇದು 8 GB RAM ಮತ್ತು 256 GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಸುಗಮ ಕಾರ್ಯಕ್ಷಮತೆ ಮತ್ತು ಸಾಕಷ್ಟು ಸಂಗ್ರಹಣಾ ಸ್ಥಳವನ್ನು ಖಚಿತಪಡಿಸುತ್ತದೆ ಎನ್ನಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್:90W ವೈರ್ಡ್ ಫಾಸ್ಟ್ ಚಾರ್ಜಿಂಗ್ಬೆಂಬಲದೊಂದಿಗೆ 5,500 mAh ಬ್ಯಾಟರಿಯನ್ನುಹೊಂದಿರಬಹುದು. ಇದು ದೀರ್ಘಕಾಲದ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ನೀಡುತ್ತದೆ ಎನ್ನಲಾಗಿದೆ.
ಡಿಸ್ಪ್ಲೇ: ವರದಿಗಳ ಪ್ರಕಾರ, 6.77-ಇಂಚಿನ FHD+ AMOLED ಪರದೆಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 4,500 ನಿಟ್‌ಗಳವರೆಗೆ ತಲುಪುವ ಗರಿಷ್ಠ ಹೊಳಪನ್ನು (peak brightness) ನೀಡುತ್ತದೆ ಎನ್ನಲಾಗಿದೆ
ಕ್ಯಾಮೆರಾ ವಿಭಾಗ: ಹಿಂಭಾಗದಲ್ಲಿ 50MP ಸೋನಿ IMX882 ಸಂವೇದಕವನ್ನುಹೊಂದಿರುವ ನಿರೀಕ್ಷೆಯಿದೆ, ಇದರೊಂದಿಗೆ 2MP ಅಲ್ಟ್ರಾ-ಸೆಕೆಂಡರಿ ಕ್ಯಾಮೆರಾ ಇರಲಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 32MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.


Click it and Unblock the Notifications








