Home
ಸುದ್ದಿಜಾಲ

ವಿವೋ ಕಂಪೆನಿಯ ವಿವೋ Y50 ಸ್ಮಾರ್ಟ್‌ಫೋನ್‌ ಬಿಡುಗಡೆ!

ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ವಿವೋ ಕಂಪೆನಿ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಕಂಪೆನಿ ಇದೀಗ ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಪ್ರತಿ ಭಾರಿಯು ವೈವಿಧ್ಯಮಯ ಫೀಚರ್ಸ್‌ ಹಾಗೂ ಕ್ಯಾಮೆರಾ ವಿನ್ಯಾಸದಲ್ಲಿ ಸಾಕಷ್ಟು ಹೊಸತನ್ನು ನೀಡುವ ವಿವೋ ಈ ಭಾರಿಯು ಸ್ಮಾರ್ಟ್‌ಫೋನ್‌ ಪ್ರಿಯರ ನಿರೀಕ್ಷೆಯನ್ನ ಹೆಚ್ಚಿಸಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ವಿವೋ Y50 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಕಾಂಬೋಡಿಯಾದಲ್ಲಿ ಬಿಡುಗಡೆ ಆಗಿದ್ದು, ಹೊಸ ವಿನ್ಯಾಸದಲ್ಲಿ ಆಕರ್ಷಕವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 8GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದ್ದು, ಈ ಮಾದರಿಯ ಸ್ಮಾರ್ಟ್‌ಫೋನ್‌ ನ ಫ್ರೀ ಬುಕಿಂಗ್ ಈಗ ಲೈವ್ ಆಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೊಣ ಬನ್ನಿರಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಆಗಿದ್ದು, ಪಂಚ್‌ಹೋಲ್‌ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ಉತ್ತಮ ಪಿಕ್ಸೆಲ್‌ ಸಾಂದ್ರತೆಯನ್ನ ಒಳಗೊಂಡಿದೆ ಎನ್ನಲಾಗಿದೆ. ಹಾಗೇಯೆ ವಿಡಿಯೋ ವೀಕ್ಷಣೆ ಹಾಗೂ ವಿಡಿಯೋ ಕರೆಗಳಿಗೆ ಬೇಕಾದ ಉತ್ತಮ ಡಿಸ್‌ಪ್ಲೇ ಮಾದರಿಯನ್ನ ಒಳಗೊಂಡಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ವಿವೋ Y50 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 665 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಅಲ್ಲದೆ ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕವೂ ಸಂಗ್ರಹಣಾ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳುವ ಅವಕಾಶವನ್ನ ನೀಡಲಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ 120 ಡಿಗ್ರಿ ಫೀಲ್ಡ್-ಆಫ್ ವ್ಯೂ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಅನ್ನು ಒಳಗೊಂಡಿದೆ. ಜೊತೆಗೆ 4cm ಫೋಕಲ್ ಉದ್ದವನ್ನು ಹೊಂದಿರುವ ಮ್ಯಾಕ್ರೋ ಕ್ಯಾಮೆರಾ ಇದಾಗಿದೆ.ಇದಲ್ಲದೆ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ, ಮೇಲಿನ ಎಡ ಮೂಲೆಯಲ್ಲಿ ಪಂಚ್‌ ಹೋಲ್‌ ಕ್ಯಾಮೆರಾ ಇದ್ದು, ಇದು ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಆದರೆ ಸೆಲ್ಫಿ ಕ್ಯಾಮೆರಾದ ಹೆಚ್ಚಿನ ವಿವರಗಳು ಇನ್ನೂ ಕೂಡ ತಿಳಿದುಬಂದಿಲ್ಲ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಇನ್ನು ವಿವೋ Y 50 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ $249 (ಅಂದಾಜು 18,590.ರೂ,) ಬೆಲೆಯನ್ನ ಹೊಂದಿದ್ದು, ಸ್ಟಾರ್ರಿ ಬ್ಲ್ಯಾಕ್ ಮತ್ತು ಐರಿಸ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Vivo Y50 features a 6.53-inch display with full HD+ resolution and 5,000mAh battery.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+