Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಖರೀದಿಸುವುದಕ್ಕೆ ಇದುವೇ ಸಕಾಲ!.ವಿವೋ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ವಿವೋ ಕಂಪೆನಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ ವಿವೋ Y56 5G ಬೆಲೆಯನ್ನು ಕಡಿತಗೊಳಿಸಿದೆ. ಈ ಮೂಲಕ ಈ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಈ ಫೋನ್‌ ಮತ್ತೆ ಸೌಂಡ್‌ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್‌ 8GB RAM +128GB ಮತ್ತು 4GB RAM +128GB ಸ್ಟೋರೇಜ್‌ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಹೌದು, ವಿವೋ Y56 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಇದರ ಎರಡು ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳ ಮೇಲೂ ಸಹ ಬೆಲೆ ಕಡಿತವನ್ನು ಮಾಡಲಾಗಿದೆ. ಇದರೊಂದಿಗೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ತ್ವರಿತ ಕ್ಯಾಶ್‌ಬ್ಯಾಕ್‌ ಆಫರ್‌ ಕೂಡ ದೊರೆಯಲಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದಾಗಿದೆ. ಹಾಗಾದ್ರೆ ವಿವೋ Y56 5G ಫೋನ್‌ ಬೆಲೆ ಎಷ್ಟು ಕಡಿತವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ ಖರೀದಿಸುವುದಕ್ಕೆ ಇದುವೇ ಸಕಾಲ!ವಿವೋ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ವಿವೋ Y56 5G ಮೇಲೆ ಎಷ್ಟು ಬೆಲೆ ಕಡಿತವಾಗಿದೆ?
ವಿವೋ Y56 5G ಸ್ಮಾರ್ಟ್‌ಫೋನ್‌ ಮೇಲೆ 1,000 ರೂ ಬೆಲೆ ಕಡಿತವಾಗಿದೆ. ಇದರಿಂದ 8GB+128GB ಸ್ಟೋರೇಜ್‌ ಆಯ್ಕೆಯು 18,999ರೂ ಬದಲಿಗೆ 17,999ರೂ ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ 4GB+128GB ರೂಪಾಂತರದ ಆಯ್ಕೆಯು 16,999ರೂ. ಬದಲಿಗೆ 15,999ರೂ ಬೆಲೆಯಲ್ಲಿ ದೊರೆಯಲಿದೆ. ಇನ್ನು ಆಸಕ್ತ ಖರೀದಿದಾರರು IDFC ಫಸ್ಟ್ ಬ್ಯಾಂಕ್, ಒನ್ ಕಾರ್ಡ್, IndusInd, ಯೆಸ್ ಬ್ಯಾಂಕ್ ಮತ್ತು DBS ಮೂಲಕ ಮಾಡಿದ ವಹಿವಾಟುಗಳನ್ನು ನಡೆಸಿದರೆ 1000ರೂ.ಗಳ ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದು. ಆದರೆ ಈ ಕ್ಯಾಶ್‌ಬ್ಯಾಕ್ ಆಫರ್‌ ಡಿಸೆಂಬರ್ 31, 2023 ರವರೆಗೆ ಮಾನ್ಯವಾಗಿರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ವಿವೋ Y56 5G ಫೀಚರ್ಸ್‌ ಹೇಗಿದೆ?
ವಿವೋ Y56 5G ಸ್ಮಾರ್ಟ್‌ಫೋನ್‌ 6.58 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2408 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತದಲ್ಲಿದ್ದು, 60Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 90.6% ಸ್ಕ್ರೀನ್-ಟು-ಬಾಡಿ ನಡುವಿನ ಅನುಪಾತವನ್ನು ಪಡೆದಿದೆ.

ಫೋನ್‌ ಖರೀದಿಸುವುದಕ್ಕೆ ಇದುವೇ ಸಕಾಲ!ವಿವೋ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ವಿವೋ Y56 5G ಪ್ರೊಸೆಸರ್‌ ಯಾವುದು?
ವಿವೋ Y56 5G ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 700SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು FunTouch OS 13 ಓವರ್‌ಲೇ ಜೊತೆಗೆ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ.

ವಿವೋ Y56 5G ಕ್ಯಾಮೆರಾ ಸೆಟ್‌ಅಪ್‌
ವಿವೋ Y56 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಫೋನ್‌ ಖರೀದಿಸುವುದಕ್ಕೆ ಇದುವೇ ಸಕಾಲ!ವಿವೋ ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ವಿವೋ Y56 5G ಬ್ಯಾಟರಿ ಮತ್ತು ಇತರೆ
ವಿವೋ Y56 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಸಾಮರ್ಥ್ಯ, 5G ಸಂಪರ್ಕ, Wi-Fi 802.11ac, ಬ್ಲೂಟೂತ್ 5.1, GPS, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಇದಲ್ಲದೆ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಕೂಡ ಒಳಗೊಂಡಿದೆ.

Best Mobiles in India

English summary
Vivo Y56 5G Smartphone gets price cut in India! Details Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+