ಕೇವಲ 13,490 ರೂ.ಗೆ 4GB ವೆರಿಯಂಟ್ 'ವಿವೊ ವೈ81' ಲಾಂಚ್!!

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಂಡಿದ್ದ ವಿವೋ ಕಂಪೆನಿಯ 'ವಿವೊ ವೈ81' ಸ್ಮಾರ್ಟ್‌ಪೋನ್ ಇದೀಗ ನೂತನ ವೆರಿಯಂಟ್‌ನಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಒಂದು ವಿಶೇಷ ಟ್ರೆಂಡ್ ಸೃಷ್ಟಿಸಿದ್ದ 'ವಿವೊ ವೈ81' ಪೋನಿನ 4GB ವೆರಿಯಂಟ್ ಸ್ಮಾರ್ಟ್‌ಫೋನ್ ಈಗ ಖರೀದಿಗೆ ಲಭ್ಯವಿದೆ.

ಕಳೆದ ಜೂನ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ವೈ81 ಮಾದರಿಯ ಅತಿ ನೂತನ 4ಜಿಬಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಆಪಲ್ ಮಾದರಿಯಲ್ಲಿ ಡಿಸ್‌ಪ್ಲೇ ನೋಚ್, 6.22-ಇಂಚಿನ ಹೆಚ್ಡಿ+ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಅನ್‌ಲಾಕ್ ಹಾಗೂ ಫುಲ್ ವ್ಯೂ ಡಿಸ್‌ಪ್ಲೇ (2.0)ಯಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ಕೂಡ ಈಗ ಕಡಿಮೆಯಾಗಿದೆ.

ಕೇವಲ 13,490 ರೂ.ಗೆ 4GB ವೆರಿಯಂಟ್ 'ವಿವೊ ವೈ81' ಲಾಂಚ್!!

ವಿವೊ ಕಂಪೆನಿಯ ಅಫಿಷಿಯಲ್ ಇ-ಸ್ಟೋರ್, ಪೇಟಿಎಂ ಮಾಲ್‌ನಲ್ಲಿ 13,490 ರೂಪಾಯಿಗಳಿಗೆ 'ವಿವೊ ವೈ81' ನೂತನ ವೆರಿಯಂಟ್ ಸ್ಮಾರ್ಟ್‌ಫೋನ್ ಮಾರಾಟಕ್ಕಿದ್ದು, ಹಾಗಾದರೆ, 'ವಿವೊ ವೈ81' ಸ್ಮಾರ್ಟ್‌ಪೋನ್ ಹೊಂದಿರುವ ಇನ್ನಿತರ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಖರೀದಿಸಲು ಏನೆಲ್ಲಾ ಕಾರಣಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ವಿವೋ ವೈ 83 6.22-ಇಂಚಿನ ಹೆಚ್ ಡಿ+ ಸ್ಕ್ರೀನ್ ಜೊತೆಗೆ 720x1520 ಪಿಕ್ಸಲ್ ರೆಸೊಲ್ಯೂಷನ್ ಮತ್ತು 19:9 ಅನುಪಾತದ ಡಿಸ್ಪ್ಲೇ ಹೊಂದಿದೆ. ಗೋರಿಲ್ಲಾ ಗ್ಲಾಸ್ ನಿಂದ ಸುರಕ್ಷಿತವಾಗಿರುವ ಈ ಸ್ಮಾರ್ಟ್‌ಪೋನ್ ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್ ಅನ್ನು ಹೊಂದಿದೆ. ಹಿಂಬಾಗದಲ್ಲಿ ಒಂದು ಕ್ಯಾಮರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಒದಗಿಸಲಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

2GHz ಆಕ್ಟ-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಹಾಗೂ 4ಜಿಬಿ RAM ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಂ ಮೂಲಕ ರನ್ ಆಗಲಿರುವ ಸ್ಮಾರ್ಟ್‌ಪೋನ್ ಕಂಪೆನಿಯ ಸ್ವಂತ UI ಕಸ್ಟಮೈಸ್ಡ್ ಲೇಯರ್ ಇದ್ದು ಫನ್ ಟಚ್ OS ಅನ್ನು ಸಹ ಹೊಂದಿದೆ.

ಕ್ಯಾಮೆರಾ ಹೇಗಿವೆ?

ಕ್ಯಾಮೆರಾ ಹೇಗಿವೆ?

ವಿವೋ ವೈ83 ಯಲ್ಲಿ 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು f/2.2 ದ್ಯುತಿರಂಧ್ರ ಮತ್ತು LED ಫ್ಲ್ಯಾಶ್ ಅನ್ನು ಹೊಂದಿದೆ. ಇನ್ನು ಇದರಲ್ಲಿ 8ಎಂಪಿ ಮುಂಭಾಗದ ಕ್ಯಾಮರಾ ಸೌಲಭ್ಯವಿದ್ದು f/2.2 ದ್ಯುತಿರಂದ್ರವು ಸೆಲ್ಫಿಗೆ ಅನುಕೂಲವಾಗುವಂತಿದೆ. ಮುಂಭಾಗದ ಕ್ಯಾಮರಾವು AI ಬ್ಯೂಟಿ ವೈಶಿಷ್ಟ್ಯವಿದ್ದು ಬಳಕೆದಾರರು ತಮ್ಮ ಫೋನನ್ನು ಅನ್ ಲಾಕ್ ಮಾಡಲು ಬಳಕೆ ಮಾಡಬಹುದು.

ಬ್ಯಾಟರಿ ಮತ್ತು ಕನೆಕ್ಟಿವಿಟಿ.

ಬ್ಯಾಟರಿ ಮತ್ತು ಕನೆಕ್ಟಿವಿಟಿ.

ಕಪ್ಪು ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ನೂತನ ವಿವೋ ವೈ 83 ವೆರಿಯಂಟ್ ಸ್ಮಾರ್ಟ್‌ಫೋನ್ 3260mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. 3,260 mAh ಬ್ಯಾಟರಿ ಮತ್ತು ಮತ್ತು 4G VoLTE, USB 2.0, GPS, OTG, ವೈಫೈ 8, ಬ್ಲೂಟೂತ್ 5 ಮತ್ತು GPS ಕನೆಕ್ಟಿವಿಟಿ ಆಯ್ಕೆಯೂ ಸ್ಮಾರ್ಟ್‌ಪೋನಿನಲ್ಲಿ ಇರಲಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

32ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನಿನ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಸಹಾಯದಿಂದ 256 ಜಿಬಿವರೆಗೆ ಸ್ಟೋರೇಜ್ ಹಿಗ್ಗಿಸಿಕೊಳ್ಳಬಹುದಾಗಿದೆ. ಡುಯಲ್ ಸಿಮ್ ಗೆ ಸಪೋರ್ಟ್ ಮಾಡುವ ಈ ಸ್ಮಾರ್ಟ್‌ಫೋನ್ ಗ್ಲಾಸಿ ಮಿರರ್ ಫಿನಿಶ್ ನ ಹಿಂಭಾಗದ ಪೆನಲ್ ಮತ್ತು ಬೆರಳಚ್ಚು ತಂತ್ರಜ್ಞಾನವನ್ನೂ ಹೊಂದಿರುವುದು ಇದರ ವಿಶೇಷತೆ ಎನ್ನಬಹುದು.

Best Mobiles in India

English summary
Vivo has announced that the Y81 along with all the other Y-series phone including the Y83 and Y71i have been manufactured at its Greater Noida facility. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X