Home
ಸುದ್ದಿಜಾಲ

14,990 ರುಪಾಯಿಗೆ ಬರ್ತಿದೆ ವಿವೋ ವೈ83..

By Sushma Charhra

ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವೋ ಫೋನಿನದ್ದೇ ಹವಾ.. ವಿವೋ ಹಿಡಿದು ಸೆಲ್ಫೀ ತೆಗೆದುಕೊಂಡು ಅಂತರ್ಜಾಲದಲ್ಲಿ ಮಿಂಚುವುದು ಹಲವರಿಗಿರುವ ಕ್ರೇಝ್. ಇಂತಹ ವಿವೋ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಒಂದು ವಿಶೇಷ ಟ್ರೆಂಡ್ ಸೃಷ್ಟಿಮಾಡಿರುವುದಂತೂ ಸುಳ್ಳಲ್ಲ. ಈಗ ವಿವೋ ಫೋನಿನ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಚೀನಾದ ಈ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ವಿವೋ ತನ್ನ ವಿವೋ ವೈ 83 ಸ್ಮಾರ್ಟ್ ಫೋನ್ ನ್ನು ಭಾರತದಲ್ಲೂ ಬಿಡುಗಡೆಗೊಳಿಸಿದೆ. ಕಳೆದ ವಾರವಷ್ಟೇ ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ಬಿಡುಗಡೆಯಾಗಿತ್ತು.

14,990 ರುಪಾಯಿಗೆ ಬರ್ತಿದೆ ವಿವೋ ವೈ83..


ಫೋನಿನ ದರ ಮತ್ತು ಲಭ್ಯತೆಯ ವಿವರಗಳು...

ಕಪ್ಪು ಬಣ್ಣದ ಆಯ್ಕೆಯಲ್ಲಿ ಎಲ್ಲಾ ಆಫ್ ಲೈನ್ ಸ್ಟೋರ್ ಗಳಲ್ಲಿ ವಿವೋ ವೈ83 ಫೋನ್ ಲಭ್ಯವಿದ್ದು ಇದರ ಬೆಲೆ 14,990 ರುಪಾಯಿಗಳಾಗಿದೆ

ವೈಶಿಷ್ಟ್ಯತೆಗಳ ಪಟ್ಟಿ ಇಂತಿದೆ...

ವಿವೋ ವೈ 83 6.22-ಇಂಚಿನ ಹೆಚ್ ಡಿ+ ಸ್ಕ್ರೀನ್ ಜೊತೆಗೆ 720x1520 ಪಿಕ್ಸಲ್ ರೆಸೊಲ್ಯೂಷನ್ ಮತ್ತು 19:9 ಅನುಪಾತದ ಡಿಸ್ಪ್ಲೇ ಹೊಂದಿದೆ. ಮತ್ತು ಈ ಡಿಸ್ಪ್ಲೇ ಗೋರಿಲ್ಲಾ ಗ್ಲಾಸ್ ನಿಂದ ಸುರಕ್ಷಿತವಾಗಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಂ ಮೂಲಕ ರನ್ ಆಗಲಿದ್ದು, ಕಂಪೆನಿಯ ಸ್ವಂತ UI ಕಸ್ಟಮೈಸ್ಡ್ ಲೇಯರ್ ಇದ್ದು ಫನ್ ಟಚ್ OS ಕೂಡ ಇದೆ.. 2GHz octa-core MediaTek ಪ್ರೊಸೆಸರ್ 4ಜಿಬಿ RAM ನೊಂದಿಗೆ ಪೇರ್ ಆಗಲಿದೆ.. ಇದರಲ್ಲಿ 32ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು 256 ಜಿಬಿವರೆಗೆ ಸ್ಟೋರೇಜ್ ಹಿಗ್ಗಿಸಿಕೊಳ್ಳಬಹುದಾಗಿದೆ.

ಡುಯಲ್ ಸಿಮ್ ಗೆ ಸಪೋರ್ಟ್ ಮಾಡುವ ಈ ಸ್ಮಾರ್ಟ್ ಫೋನ್ ಗ್ಲಾಸಿ ಮಿರರ್ ಫಿನಿಶ್ ನ ಹಿಂಭಾಗದ ಪೆನಲ್ ಮತ್ತು ಬೆರಳಚ್ಚು ತಂತ್ರಜ್ಞಾನವನ್ನೂ ಇದು ಒಳಗೊಂಡಿದೆ. ವಿವೋ ವೈ83 ಯಲ್ಲಿ 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು f/2.2 ದ್ಯುತಿರಂಧ್ರ ಮತ್ತು LED ಫ್ಲ್ಯಾಶ್ ಇದೆ.

ಇನ್ನು ಇದರಲ್ಲಿ 8ಎಂಪಿ ಮುಂಭಾಗದ ಕ್ಯಾಮರಾ ಸೌಲಭ್ಯವಿದ್ದು f/2.2 ದ್ಯುತಿರಂದ್ರವು ಸೆಲ್ಫಿಗೆ ಅನುಕೂಲವಾಗುವಂತಿದೆ. ಇನ್ನು ಕಂಪೆನಿ ಹೇಳಿಕೆಯ ಪ್ರಕಾರ ಮುಂಭಾಗದ ಕ್ಯಾಮರಾವು AI ಬ್ಯೂಟಿ ವೈಶಿಷ್ಟ್ಯವಿದ್ದು ಬಳಕೆದಾರರು ತಮ್ಮ ಫೋನನ್ನು ಅನ್ ಲಾಕ್ ಮಾಡಲು ಕೂಡ ಇದನ್ನು ಬಳಕೆ ಮಾಡಬಹುದು.

155.21x 75.24 x 7.7mm ಮತ್ತು 3,260 mAh ಬ್ಯಾಟರಿ ಮತ್ತು ಮತ್ತು 4G VoLTE, ವೈಫೈ 8, ಬ್ಲೂಟೂತ್ 5 ಮತ್ತು GPS ಕನೆಕ್ಟಿವಿಟಿ ಆಯ್ಕೆಯೂ ಇದೆ.

ಇತ್ತೀಚೆಗೆ ವಿವೋ ಎಕ್ಸ್ 21 ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದರ ಬೆಲೆ 35990 ರುಪಾಯಿಗಳು. ಇನ್ ಡಿಸ್ಪ್ಲೇ ಬೆರಳಚ್ಚು ತಂತ್ರಜ್ಞಾನ ಹೊಂದಿರುವ ಮೊದಲ ಫೋನನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ವಿವೋಗೆ ಸಲ್ಲಬೇಕು, ಹೌದು ವಿವೋ ಎಕ್ಸ್21 ಈ ತಂತ್ರಜ್ಞಾನವನ್ನು ಒಳಗೊಂಡಿತ್ತು.

ಇದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಂ ಮುಖಾಂತರ ರನ್ ಆಗುತ್ತೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ನ್ನು ಹೊಂದಿದೆ.ಇದು 6ಜಿಬಿ RAM ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನಷ್ಟು ಹಿಗ್ಗಿಸಿಕೊಳ್ಳಬಹುದಾಗಿದೆ.

Best Mobiles in India

English summary
Vivo has launched a new smartphone in India, the Vivo Y83 for Rs 14,990. This is the most affordable smartphone from the company with an iPhone X like notch and a premium design offering higher screen to body ratio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+