ವಿವೊ ಸ್ಮಾರ್ಟ್‌ಪೋನ್ ಖರೀದಿಗೆ ಇದು ಸಕಾಲ! ಭರ್ಜರಿ ಡಿಸ್ಕೌಂಟ್ಸ್!!
ಚೀನಾ ಮೂಲದ ಜನಪ್ರಿಯ ವಿವೋ ಸ್ಮಾರ್ಟ್‌ಫೋನ್ ಕಂಪನಿಯ ''ವಿವೊ Z1 ಪ್ರೊ'' ಮತ್ತು ವಿವೊ Z1 X'' ಸ್ಮಾರ್ಟ್‌ಫೋನ್ ಈಗಾಗಲೇ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಇದೀಗ ಮತ್ತೆ ಭಾರೀ ಸುದ್ದಿಯಲ್ಲಿದೆ. ಅದೇನೆಂದರೇ ಭಾರತೀಯ ಮಾರುಕಟ್ಟೆಯಲ್ಲಿ ''ವಿವೊ Z1 ಪ್ರೊ'' ಮತ್ತು ವಿವೊ Z1 '' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ 1000ರೂ ವೆರೆಗೆ ಕಡಿತವಾಗಿದ್ದು, ಈ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಇದುವೇ ಸರಿಯಾದ ಸಮಯ.

ಹೌದು, ವಿವೊ ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್ ''ವಿವೊ Z1 ಪ್ರೊ'' ಮತ್ತು ವಿವೊ Z1 X'' ಮೇಲೆ 1000 ರೂ. ಬೆಲೆ ಕಡಿತಗೊಳಿಸಲಾಗಿದ್ದು, 13,990 ರೂ. ಬೆಲೆಯನ್ನ ಹೊಂದಿದ್ದ ಜನಪ್ರಿಯ 'ವಿವೊ Z1 ಪ್ರೊ' ಸ್ಮಾರ್ಟ್‌ಫೋನ್ ಈಗ ಕೇವಲ 12,990 ರೂ.ಗಳಿಗೆ ಹಾಗೂ 15,990 ರೂ ಬೆಲೆ ಹೊಂದಿದ್ದ ''ವಿವೊ Z1 X'' ಸ್ಮಾರ್ಟ್‌ಫೋನ್ ಕೇವಲ 14,990 ರೂ.ಗಳಿಗೆ ಲಭ್ಯವಿರುವುದನ್ನು ನೋಡಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಿಸ್‌ಪ್ಲೇ ವಿನ್ಯಾಸ
ವಿವೋ Z1 ಪ್ರೊ ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.53-ಇಂಚಿನ ಫುಲ್-ಎಚ್ಡಿ + ಐಪಿಎಸ್ ಡಿಸ್ಪ್ಲೇ ಜೊತೆಗೆ 19.5: 9 ಆಸ್ಪೆಕ್ಟ್ ರೆಶಿಯೋವನ್ನು ಹೊಂದಿದೆ. ಇನ್ನು ವಿವೊ Z1 X' ಸ್ಮಾರ್ಟ್‌ಫೋನ್ 1080x2 340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6. 38-ಇಂಚಿನ ಫುಲ್‌ಎಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, ವಾಟರ್‌ಡ್ರಾಪ್ ನಾಚ್ ಶೈಲಿಯನ್ನ ಹೊಂದಿದೆ.

ಪ್ರೊಸೆಸರ್
ವಿವೋ Z1 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 712 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ, ಫಂಟೌಚ್ ಓಎಸ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ಸ್ಟೋರೇಜ್ನ ವೇರಿಯೆಂಟ್ ಆಯ್ಕೆಯನ್ನ ಹೊಂದಿದೆ. ಇನ್ನು ವಿವೊ Z1 X ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 712 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 6GB RAM ಮತ್ತು 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ.

ಕ್ಯಾಮೆರಾ ಮಾದರಿ
ಈ ಎರಡು ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ವಿವೋ Z1 ಪ್ರೊ ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ f/ 1.78 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ 120 ಡಿಗ್ರಿ ಸೂಪರ್ ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ವಿವೊ Z1 X ಸ್ಮಾರ್ಟ್‌ಫೋನ್ ಕ್ರಮವಾಗಿ 48MP + 8MP+2MP ಸೆನ್ಸಾರ್ ಹೊಂದಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ.

ಬ್ಯಾಟರಿ
ಇನ್ನು ವಿವೋ Z1 ಪ್ರೊ ಸ್ಮಾರ್ಟ್‌ಫೋನ್ 5,000MAh ಬ್ಯಾಟರಿ ಪ್ಯಾಕ್ಆಪ್ ಹೊಂದಿದ್ದು, ಇದು 18W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನ ಹೊಂದಿದೆ. ಅಲ್ಲದೆ ವಿವೊ Z1 X ಸ್ಮಾರ್ಟ್‌ಫೋನ್ 4,500 MAh ಬ್ಯಾಟರಿ ಪ್ಯಾಕ್ಆಪ್ ಹೊಂದಿದ್ದು, 22.5W ಫ್ಲ್ಯಾಶ್‌ಚಾರ್ಜ್ ಟೆಕ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಹೊಂದಿದ್ದು. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಫಿಂಗರ್‌ಪ್ರಿಂಟ್, ಮ್ಯಾಗ್ನೆಟೋಮೀಟರ್ ನಂತಹ ಆನ್‌ಬೋರ್ಡ್ ಸೆನ್ಸಾರ್ ಅನ್ನು ಹೊಂದಿವೆ.

ಬೆಲೆ
ಸದ್ಯ ಭಾರತದಲ್ಲಿ ವಿವೋ Z 1 ಪ್ರೊ ಸ್ಮಾರ್ಟ್‌ಫೋನ್ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಿದ್ದು, ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಸಾವಿರ ರೂ ಕಡಿತವಾದ ನಂತರ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯದ ಸ್ಮಾರ್ಟ್‌ಫೋನ್ 12,990 ರೂ. ಗೆ ಲಭ್ಯವಾಗಲಿದೆ. 6GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್ 13,990,ರೂ.ಗೆ ಲಭ್ಯವಾಗಲಿದ್ದು, ವಿವೊ Z1X ಸ್ಮಾರ್ಟ್‌ಫೋನ್‌ನ 4GB RAM + 128GB ಸಂಗ್ರಹ ಸಾಮರ್ಥ್ಯದ ಆವೃತ್ತಿ 14,990 ರೂ ಗಳಿಗೆ, ಹಾಗೂ 6GB + 128GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ 16,990 ರೂ ಗೆ ಲಭ್ಯವಿದ್ದು, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ನಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








