'ವಿವೋ Z5i' ಸ್ಮಾರ್ಟ್‌ಫೋನ್‌ ಬಿಡುಗಡೆ!..ತ್ರಿವಳಿ ಕ್ಯಾಮೆರಾ ಸ್ಪೆಷಲ್‌!

|

ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಪಾಪ್‌ಅಪ್‌ ಕ್ಯಾಮೆರಾ ಟ್ರೆಂಡ್‌ ಹುಟ್ಟುಹಾಕಿರುವ 'ವಿವೋ' ಕಂಪನಿಯು ಹೊಸತನ ಪರಿಚಯಿಸುವುದರಲ್ಲಿ ಗುರುತಿಸಿಕೊಂಡಿದೆ. ಹೀಗೆ ಸಂಸ್ಥೆಯ ಹಲವು ಸ್ಮಾರ್ಟ್‌ಫೋನ್‌ಗಳ ವಿಶೇಷ ಫೀಚರ್ಸ್‌ಗಳು ಗ್ರಾಹಕರನ್ನು ಆಕರ್ಷಿಸಿದ್ದು, ಹೀಗಾಗಿ ವಿವೋದ ಹೊಸ ಫೋನಿನಲ್ಲಿ ಏನಾದರೂ ನೂತನ ಫೀಚರ್ ಇರುತ್ತದೆ ಎಂದು ಗ್ರಾಹಕರು ನಿರೀಕ್ಷಿಸುವಂತಾಗಿದೆ. ವಿವೋ ಇದೀಗ ಹೊಸದೊಂದು ಫೋನ್ ಬಿಡುಗಡೆ ಮಾಡಿದೆ.

ವಿವೋ Z5i

ಹೌದು, ವಿವೋ ಸಂಸ್ಥೆಯು ಚೀನಾದಲ್ಲಿ ಇದೀಗ ಹೊಸದಾಗಿ 'ವಿವೋ Z5i' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌, ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ 8GB RAM ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇವುಗಳೊಂದಿಗೆ 'ವಿವೋ Z5i' ಸ್ಮಾರ್ಟ್‌ಫೋನ್‌ ಇನ್ನಿತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

'ವಿವೋ Z5i' ಸ್ಮಾರ್ಟ್‌ಫೋನ್‌ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರ ಶೇ.90.30 % ಪರ್ಸೆಂಟ್ ಆಗಿದೆ. ಡಿಸ್‌ಪ್ಲೇ ರಚನೆಯು ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

'ವಿವೋ Z5i' ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ಹೆಚ್ಚಿಸಿಕೊಳ್ಳಲು ಸಹ ಅವಕಾಶ ಹೊಂದಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

'ವಿವೋ Z5i' ಸ್ಮಾರ್ಟ್‌ಫೋನ್‌ ಮೂರು ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಪಡೆದಿದ್ದು, ಇನ್ನು ಮೂರನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು ಸಹ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಅಗತ್ಯ ಫೋಟೊ ಆಯ್ಕೆಗಳನ್ನು ಹೊಂದಿದೆ.

ಬ್ಯಾಟರಿ ಬಲ

ಬ್ಯಾಟರಿ ಬಲ

'ವಿವೋ Z5i' ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್, ಆಂಬಿಯಂಟ್‌ ಲೈಟ್‌, ಜಿಪಿಎಸ್‌, ಮೈಕ್ರೋ ಯುಎಸ್‌ಬಿ, ಹೆಡ್‌ಫೋನ್ ಆಡಿಯೊ ಜಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಸಹ ಒಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ ಸಂಸ್ಥೆಯು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹೊಸ 'ವಿವೋ Z5i' ಸ್ಮಾರ್ಟ್‌ಫೋನ್‌ 8GB RAM + 128GB ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು CNY 1,798 ( ಭಾರತದಲ್ಲಿ ಅಂದಾಜು 18,300ರೂ.ಗಳು ಎಂದು ಊಹಿಸಲಾಗಿದೆ.) ಆದರೆ ದೇಶಿಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿ ಇಲ್ಲ.

Most Read Articles
Best Mobiles in India

English summary
Vivo Z5i has been launched as the latest entrant in the Z-series by the Chinese company. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X