Home
ಸುದ್ದಿಜಾಲ

ಭಾರತದ ಮೊಬೈಲ್ ಮಾರುಕಟ್ಟೆ (Q2): ವಿವೋ ನಂ.1 ಬ್ರ್ಯಾಂಡ್!

2025ರ ಏಪ್ರಿಲ್-ಜೂನ್ ಅವಧಿಯಲ್ಲಿ (Q2) ಭಾರತದ ಸ್ಮಾರ್ಟ್‌ಫೋನ್ ಸಾಗಣೆಯು ಗಮನಾರ್ಹವಾಗಿ ಶೇ. 7 ರಷ್ಟು ಹೆಚ್ಚಾಗಿದೆ. ಈ ತ್ರೈ ಮಾಸಿಕದಲ್ಲಿ ವಿವೋ ಕಂಪೆನಿಯು ಒಟ್ಟಾರೆ ಮಾರುಕಟ್ಟೆಯ ಶೇ 21ರಷ್ಟು ಪಾಲನ್ನು ಪಡೆದುಕೊಂಡು ಮೊದಲ ಸ್ಥಾನವನ್ನು ಅಲಂಕರಿಸಿದೆ ಮತ್ತು ಶಿಯೋಮಿ ಕಂಪೆನಿಯು ಈ ಭಾರಿಯೂ ಕುಸಿತವನ್ನು ಕಂಡಿದೆ ಎಂದು ಇತ್ತೀಚಿನ Canalys ಸಂಶೋಧನಾ ವರದಿಯು ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.

ಕ್ಯಾನಲಿಸ್ ಸಂಶೋಧನಾ ವರದಿಯ ಪ್ರಕಾರ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು 39.0 ಮಿಲಿಯನ್ ಯುನಿಟ್‌ಗಳನ್ನು ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 7 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಳು ಮತ್ತು ಹೆಚ್ಚಿನ ದಾಸ್ತಾನು ಹೊಂದಿರುವ ಸಂಯಮದ ತ್ರೈಮಾಸಿಕದಿಂದ ಈ ಬೆಳವಣಿಗೆಗೆ ಉತ್ತೇಜನ ದೊರೆತಿದೆ ಎಂದು ವರದಿಯು ಹೇಳಿದೆ.

ಈ ತ್ರೈಮಾಸಿಕದಲ್ಲಿ ವಿವೋ ಕಂಪೆನಿಯು 8.1 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ ವಿವೋ V50 ಸರಣಿಯ ಬಲವಾದ ಬೇಡಿಕೆ, ಸಣ್ಣ ನಗರಗಳು ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಿವೋ Y-ಸರಣಿಯ ಜನಪ್ರಿಯತೆ, ಆನ್‌ಲೈನ್ ವಿಭಾಗದಲ್ಲಿ, T-ಸರಣಿಯು ವಿಸ್ತೃತ ಉತ್ಪನ್ನ ಶ್ರೇಣಿಯೊಂದಿಗೆ ಕಂಪೆನಿಯು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಭಾರತದ ಮೊಬೈಲ್ ಮಾರುಕಟ್ಟೆ (Q2): ವಿವೋ ನಂ.1 ಬ್ರ್ಯಾಂಡ್!

ವಿವೋ ನಂತರ, ಸ್ಯಾಮ್‌ಸಂಗ್ ಕಂಪೆನಿಯು 6.2 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ಎರಡನೇ ಸ್ಥಾನದಲ್ಲಿದೆ, ಇದು ಮಾರುಕಟ್ಟೆಯ ಶೇ 16ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ತನ್ನ ಹಣಕಾಸು ಬಲವನ್ನು ಸದುಪಯೋಗಪಡಿಸಿಕೊಂಡು, ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ, ವಿಶೇಷವಾಗಿ ಗ್ಯಾಲಕ್ಸಿ A36 ಮತ್ತು ಗ್ಯಾಲಕ್ಸಿ A56 ಮಾದರಿಗಳಿಗೆ EMI ಆಯ್ಕೆಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ ಎಂದು ವರದಿಯು ಹೇಳಿದೆ.

5 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ಒಪ್ಪೋ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಶಿಯೋಮಿಯನ್ನು ಹಿಂದಿಕ್ಕಿದ್ದು, ಒಪ್ಪೋ ಮತ್ತು ಶಿಯೋಮಿ ಎರಡೂ ಶೇ. 13ರಷ್ಟು ಮಾರುಕಟ್ಟೆ ಪಾಲನ್ನು ಹಂಚಿಕೊಂಡಿವೆ. ಒಪ್ಪೋ ತನ್ನ A5 ಸರಣಿಯ ಮೂಲಕ ಆಫ್‌ಲೈನ್ ಮಾರುಕಟ್ಟೆಯಲ್ಲಿ ಬಲವಾದ ಹೆಜ್ಜೆಯನ್ನು ಇಟ್ಟರೆ, ಅದರ K13 ಸರಣಿಯು ಆನ್‌ಲೈನ್‌ನಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಶಿಯೋಮಿ ವರ್ಷದಿಂದ ವರ್ಷಕ್ಕೆ ಕುಸಿತವನ್ನು ಅನುಭವಿಸಿದೆ. ಆದರೆ,

Q2 2025ರಲ್ಲಿ ರೆಡ್ಮಿ 14C 5G ಮತ್ತು ರೆಡ್ಮಿ A5 ಮಾದರಿಗಳ ಮೂಲಕ ಶಿಯೋಮಿ ಸ್ವಲ್ಪ ಚೇತರಿಕೆ ಕಂಡಿದೆ. ರೆಡ್ಮಿ ನೋಟ್ 14 ಸರಣಿಯ ಬಿಡುಗಡೆಯು ಅದರ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದೆ. ಇನ್ನು ರಿಯಲ್‌ಮಿ 3.6 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವ ಮೂಲಕ ಐದನೇ ಸ್ಥಾನದಲ್ಲಿದೆ. ಇದು ಶೇ 9ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ರಿಯಲ್‌ಮಿ ಕೂಡ ಕುಸಿತವನ್ನು ಕಂಡಿದ್ದರೂ, ಅದರ C73, C75 ಮತ್ತು 14X ನಂತಹ ಮಾದರಿಗಳ ಮೂಲಕ ಆಫ್‌ಲೈನ್ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ.

ಒಟ್ಟಾರೆಯಾಗಿ, 2025ರ Q2 ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಧನಾತ್ಮಕ ಅವಧಿಯಾಗಿ ಕಂಡುಬಂದಿರುವುದನ್ನು ಕ್ಯಾನಲಿಸ್ ಸಂಶೋಧನಾ ವರದಿಯ ಅಂಕಿಅಂಶಗಳು ತಿಳಿಸಿದೆ. ಸ್ಮಾರ್ಟ್‌ಫೋನ್ ತಯಾರಕರು ಹೊಸ ಉತ್ಪನ್ನ ಬಿಡುಗಡೆಗಳು ಮತ್ತು ವಿವಿಧ ಮಾರಾಟ ತಂತ್ರಗಳ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ತ್ರೈಮಾಸಿಕಗಳಲ್ಲಿ ಈ ಪ್ರವೃತ್ತಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ.

Best Mobiles in India

English summary
A research report by Canalys indicates that smartphone shipments in India totaled 39.0 million units in the second quarter of this year, marking a 7 percent increase from the same period last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+