4G, 3G ಮತ್ತು 2G ಬಳಕೆದಾರರಿಗೆ ವೊಡಾಫೋನ್ ನಿಂದ ಹೊಸ ಆಫರ್
ಈ ಆಫರ್ ವೊಡಾಫೋನ್ ಸ್ಟೋರ್, ಮಿನಿ ಸ್ಟೋರ್ ನಲ್ಲಿ ಲಭ್ಯವಿದ್ದು, ಅಲ್ಲದೇ ಮೈ ವೊಡಾಫೋನ್ ಆಪ್ ನಿಂದಲೂ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವೋಡಾಪೋನ್ ತನ್ನ ಪ್ರೀಪೆಯ್ಡ್ ಗ್ರಾಹಕರಿಗೆ ಹೊಸ ಆಫರ್ ಲಾಂಚ್ ಮಾಡಿದೆ.

ವೊಡಾಫೋನ್ 348 ಪ್ರೀಪೆಯ್ಡ್ ರಿಜಾರ್ಜ್ ಆಫರ್ ಅನ್ನು ಘೋಷಣೆ ಮಾಡಿದ್ದು, ಈ ಆಫರ್ ನಲ್ಲಿ ಪ್ರತಿ ದಿನ 1GB ಡೇಟಾ ಮತ್ತು ಉಚಿತ ಸ್ಥಳೀಯ-ರಾಷ್ಟ್ರಿಯಾ ಕರೆಗಳನ್ನು ಮಾಡಬಹುದಾಗಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.
ಈ ಆಫರ್ ವೊಡಾಫೋನ್ ಸ್ಟೋರ್, ಮಿನಿ ಸ್ಟೋರ್ ನಲ್ಲಿ ಲಭ್ಯವಿದ್ದು, ಅಲ್ಲದೇ ಮೈ ವೊಡಾಫೋನ್ ಆಪ್ ನಿಂದಲೂ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು.
ವೊಡಾಫೋನ್ ನೂತನವಾಗಿ ನೀಡಿರುವ ಆಫರ್ ನಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದ ಇಂಟರ್ ನೆಟ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು 4G, 3G ಮತ್ತು 2G ಗ್ರಾಹಕರು ಈ ಸೇವೆಯನ್ನು ಪಡೆಯಬಹುದಾಗಿದೆ.
ಇದಲ್ಲದೇ ವೊಡಾಫೋನ್ ಇತ್ತೀಚೆಗೆ 445 ಆಫರ್ ಸಹ ಘೋಷಣೆ ಮಾಡಿತ್ತು. ಇದರಲ್ಲಿ 84GB ಡೇಟಾವನ್ನು 84 ದಿನಗಳ ಅವಧಿಗೆ ಬಳಕೆಗೆ ನೀಡಲಾಗಿತ್ತು. ಇದರಲ್ಲಿಯೂ ಉಚಿತ ಕರೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು.


Click it and Unblock the Notifications