ಇತಿಹಾಸದ ಭರ್ಜರಿ ಆಫರ್ ಘೋಷಿಸಿದ ವೊಡಾಫೋನ್!..ಜಿಯೋ ಸಹ ನೀಡಿಲ್ಲ!!
ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟು ಮಾಡಿದ್ದ ರಿಲಾಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡಲು ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ನಿರಂತರವಾಗಿ ಯತ್ನಿಸುತ್ತಲೇ ಇವೆ. ಆದರೆ, ಈ ಬಾರಿ ವೊಡಾಫೋನ್ ಮಾತ್ರ ಭರ್ಜರಿ ಆಫರ್ ಮೂಲಕ ಮಾರುಕಟ್ಟೆಯ ಗಮನಸೆಳೆದಿದೆ. ಈ ಆಫರ್ ಜಿಯೋ, ಏರ್‌ಟೆಲ್‌ಗೆ ನುಂಗಲಾರದ ತುತ್ತಾಗಬಹುದು ಎಂದು ಹೇಳಲಾಗುತ್ತಿದೆ.
ಹೌದು, ಜಿಯೋಗಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಇಷ್ಟವಾಗುವಂತಹ ಎರಡು ಆಫರ್‌ಗಳನ್ನು ಇದೇ ಮೊದಲ ಬಾರಿಗೆ ಪ್ರಕಟಿಸಿರುವ ವೊಡಾಫೋನ್ ಈಗ ಮತ್ತಷ್ಟು ಭರ್ಜರಿ ಆಫರ್ ನೀಡುವ ಮೂಲಕ ಗ್ರಾಹಕರ ಸೆಳೆಯುವ ಯತ್ನ ಮಾಡಿದೆ. ಜಿಯೋವಿನ 189 ರೂಪಾಯಿಗಳ ಆಫರ್‌ಗೆ ವಿರುದ್ದವಾಗಿ, ಜಿಯೋಗಿಂತಲೂ ಹೆಚ್ಚು ಲಾಭದಾಯಕವಾದ ಆಫರ್ ಅನ್ನು ನೀಡಿದೆ.

ಜಿಯೋವಿನ 189 ರೂಪಾಯಿಗಳ ಆಫರ್‌ನಲ್ಲಿ ಒಟ್ಟು 56GB ಡೇಟಾ ಗ್ರಾಹಕರಿಗೆ ದೊರೆತರೆ, ವೊಡಾಫೋನ್ ಇದೇ ಬೆಲೆಯಲ್ಲಿ ಒಟ್ಟು 112GB ಡೇಟಾವನ್ನು ಪ್ರಕಟಿಸಿದೆ. ಈ ಆಫರ್ ಡೇಟಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದ್ದು, ಹಾಗಾದರೆ, ವೊಡಾಫೋನ್ ಘೋಷಿಸಿರುವ ನೂತನ 189 ರೂಪಾಯಿಗಳ ಆಫರ್ ಹೇಗಿದೆ? ಗ್ರಾಹಕರಿಗೆ ಹೇಗೆಲ್ಲಾ ಲಾಭ ಎಂದು ಮುಂದೆ ತಿಳಿಯಿರಿ.

ಜಿಯೋ 189 ರೂ. ಆಫರ್!
ವೊಡಾಫೋನ್ ಘೋಷಿಸಿರುವ 189 ರೂ.ಆಫರ್ ತಿಳಿಯುವುದಕ್ಕಿಂತ ಮುಂಚಿತವಾಗಿ ಜಿಯೋವಿನ 189 ರೂ.ಆಫರ್ ಬಗ್ಗೆ ತಿಳಿಯಲೇಬೇಕು. ಅನಿಯಮಿತ ಕರೆ, 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 2GB ಡೇಟಾ ಲಭ್ಯವಿದೆ. ಈ ಆಫರ್ ಒಂದು ತಿಂಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿದ್ದು, ಒಟ್ಟು 56GB ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ.

ಡೇಟಾ ಪ್ರಿಯರಿಗೆ ಇದು ಹಬ್ಬ!
ಜಿಯೋವಿನ 189 ರೂ.ಆಫರ್ ಇಷ್ಟು ಲಾಭದಾಯಕವಾಗಿದ್ದರೆ, ವೊಡಾಫೋನ್ ಇದೇ ಬೆಲೆಯಲ್ಲಿ ಒಟ್ಟು ಒಟ್ಟು 112GB ಡೇಟಾವನ್ನು ಪ್ರಕಟಿಸಿದೆ. ಅಂದರೆ, 1.6 ರೂಪಾಯಿಗಳಿಗೆ ಒಂದು ಜಿಬಿ ಡೇಟಾದಂತೆ ವೊಡಾಫೋನ್ ಡೇಟಾವನ್ನು ಪ್ರಕಟಿಸಿದೆ. ಇದು ಡೇಟಾ ಪ್ರಿಯರಿಗೆ ಹಬ್ಬವಾಗಿದ್ದರೆ, ಕರೆಗಳನ್ನು ಹೆಚ್ಚು ಮಾಡುವವರಿಗೆ ಸೀಮಿತ ಆಯ್ಕೆಯಂತೆ ಕಾಣುತ್ತಿದೆ.

ವೊಡಾಫೋನ್ ಆಫರ್!
ಮೊದಲೇ ಹೇಳಿದಂತೆ ವೊಡಾಫೋನ್ 189 ರೂಪಾಯಿಗಳಿಗೆ ಒಟ್ಟು 112GB ಡೇಟಾವನ್ನು ಪ್ರಕಟಿಸಿ ಟೆಲಿಕಾಂನಲ್ಲಿ ಭರ್ಜರಿ ರೀ ಎಂಟ್ರಿ ಮಾಡಿದೆ. ಆದರೆ, ಈ ಆಫರ್‌ನಲ್ಲಿ ಬಳಕೆದಾರರು ದಿನಕ್ಕೆ 250 ನಿಮಿಷಗಳು ಮತ್ತು ವಾರಕ್ಕೆ 1000 ನಿಮಿಷಗಳವರೆಗೆ ಉಚಿತ ಕರೆಗಳನ್ನು ಮಾಡಲು ಅನುಮತಿಸಲಾಗಿದೆ. ಎಸ್‌ಎಮ್‌ಎಸ್ ಕೂಡ ಉಚಿತವಾಗಿಲ್ಲ ಎನ್ನುವುದು ಆಶ್ಚರ್ಯ.

ಎರಡಲ್ಲಿ ಯಾವ ಆಫರ್ ಬೆಸ್ಟ್?
ವೊಡಾಫೋನ್ 189 ರೂ VS ಜಿಯೋ 189 ರೂ ಎಂದು ತೆಗೆದುಕೊಂಡರೆ ವೊಡಾಪೋನಿನ ಆಫರ್ ಬೆಸ್ಟ್ ಎನ್ನಬಹುದಾಗಿದೆ. ದಿನಕ್ಕೆ 250 ನಿಮಿಷಗಳು ಮತ್ತು ವಾರಕ್ಕೆ 1000 ನಿಮಿಷಗಳವರೆಗೆ ಉಚಿತ ಕರೆಗಳನ್ನು ಹೊಂದಿರುವ ಈ ಆಫರ್ ಕೇವಲ 1.6 ರೂಪಾಯಿಗಳಿಗೆ ಒಂದು ಜಿಬಿ ಡೇಟಾ ಹೊಂದಿರುವುದು ಹೆಚ್ಚು ಎನ್ನಬಹುದು. ಜಿಯೋ ಕೂಡ ಈ ವರೆಗೂ ಇಂತಹ ಆಫರ್ ನೀಡಿಲ್ಲ.

ವೊಡಾಫೊನ್ 279 ರೂ. ಆಫರ್!
189 ರೂ. ಆಫರ್‌ನಂತರಯೇ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ವೊಡಾಫೊನ್ 279 ರೂ. ಆಫರ್ ಕೂಡ ಟೆಲಿಕಾಂ ಗಮನಸೆಳೆದಿದೆ. ಕೆಲವರಿಗೆ ಮಾತ್ರ ಲಭ್ಯವಿರುವ ಈ ಆಫರ್‌ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ಮತ್ತು ಎಸ್ಎಂಎಸ್ (ಟ್ರಾಯ್ ದೈನಂದಿನ ಮಿತಿಯೊಂದಿಗೆ) ಜೊತೆಗೆ 84 ದಿನಗಳ ಅವದಿಗೆ4 ಜಿಬಿ 3ಜಿ /4 ಜಿ ಡೇಟಾವನ್ನು ನೀಡುತ್ತದೆ.


Click it and Unblock the Notifications








