Home
ಸುದ್ದಿಜಾಲ

ಮೊಬೈಲ್ - ಆಧಾರ್ ಲಿಂಕ್ ಮಾಡಿಸಲು ವೊಡಾಫೋನ್‌ನಿಂದ ವಿಶೇಷ ಯಾತ್ರೆ..!

By Tejaswini P G

ರಾಜಸ್ಥಾನದ ಚಿಕ್ಕ ಪುಟ್ಟ ಪಟ್ಟಣ ಮತ್ತು ಹಳ್ಳಿಗಳಲ್ಲಿ ಮನೆ ಬಾಗಿಲಲ್ಲೇ ಸಿಮ್ ಅಪ್ ಗ್ರೇಡ್ ಮತ್ತು ಆಧಾರ್ ವೆರಿಫಿಕೇಶನ್ ನಡೆಸುವುದಕ್ಕಾಗಿ ಭಾರತದ ಎರಡನೇ ದೊಡ್ಡ್ ಟೆಲಿಕಾಮ್ ಕಂಪೆನಿಯಾದ ವೊಡಾಫೋನ್ ಎರಡು ಮೊಬೈಲ್ ವ್ಯಾನ್ ಗಳನ್ನು ಮೀಸಲಿಟ್ಟಿದೆ.

ಮೊಬೈಲ್ - ಆಧಾರ್ ಲಿಂಕ್ ಮಾಡಿಸಲು ವೊಡಾಫೋನ್‌ನಿಂದ ವಿಶೇಷ ಯಾತ್ರೆ..!

ಈ ವಿಭಿನ್ನ ಮೊಬೈಲ್ ವ್ಯಾನ್ ಯೋಜನೆಯನ್ನು ವೊಡಾಫೋನ್ ಜನಚರಿ 2017 ರಲ್ಲೇ ಪ್ರಾರಂಬಿಸಿತ್ತು. ಝುನ್ಝುನು, ಮಹಾಪುರ, ಹಿಂಗೋನಿಯಾ, ಫತೇಪುರ, ಭದ್ರ, ಬಂಡಿಕುಯಿ, ಮಕ್ರಾನಾ, ಪಂಚ್ಪದ್ರಾ, ಫಲೋಡಿ ಮೊದಲಾದ 450 ಕ್ಕೂ ಅಧಿಕ ಹಳ್ಳಿಗಳನ್ನು ಈಗಾಗಲೇ ತಲುಪಿರುವುದಾಗಿ ವೊಡಾಫೋನ್ ತಿಳಿಸಿದೆ. ಅಲ್ಲದೆ ನೆಚ್ವಾ, ಕಾಸ್ಲಿ, ಧೋಡ್, ಹಿಂದಾಂ, ಮನೋಹರ್ಪುರ್, ಕಿರ್ದಾವ್ಲಿ, ಸಿಂಗ್ರಾವತ್, ಕುರ್ಲಿ, ಪುಲಾಸಾರ್, ಮಂಗ್ಲೂನಾ ಮೊದಲಾದ ಗ್ರಾಮಗಳತ್ತ ಮುಂದೆ ಪ್ರಯಾಣ ಬೆಳೆಸುವುದಾಗಿ ವೊಡಾಫೋನ್ ಹೇಳಿದೆ.

'ಕಳೆದ ಕೆಲವು ವರ್ಷಗಳಲ್ಲಿ ವೊಡಾಫೋನ್ ಹೊಸ 4G ಸೈಟ್ಗಳನ್ನು ಸ್ಥಾಪಿಸಿದ್ದು ವೊಡಾಫೊನ್ ನ SuperNetTM 4G ಹೆಚ್ಚು ಶಕ್ತಿಶಾಲಿಯಾಗಿದೆ. ಅಲ್ಲದೆ ವೊಡಾಫೋನ್ ನ ಶ್ರೇಷ್ಠ ನೆಟ್ವರ್ಕ್ ಅನ್ನು ರಾಜಸ್ಥಾನದ ಅನೇಕಾನೇಕ ಹಳ್ಳಿ ಮತ್ತು ಪಟ್ಟಣಗಳಿಗೆ ವಿಸ್ತರಿಸಲಾಗಿದೆ' ಎಂದು ವೊಡಾಫೋನ್ ಇಂಡಿಯಾ ರಾಜಸ್ಥಾನ್ ಬಿಸ್ನೆಸ್ ಹೆಡ್ ಅಮಿತ್ ಭೇಡಿ ಹೇಳಿದ್ದಾರೆ.

ವೊಡಾಫೋನ್ ಮೊಬೈಲ್ ವ್ಯಾನ್ ಗಳ ಮೂಲಕ ನಮ್ಮ 2G/3G ಗ್ರಾಹಕರು ಮನೆಬಾಗಿಲಲ್ಲೇ ಉಚಿತವಾಗಿ ತಮ್ಮ ಸಿಮ್ ಅಪ್ಗ್ರೇಡ್ ಮಾಡಿಸಿಕೊಂಡು ವೊಡಾಫೋನ್ SuperNet 4G ಯ ಲಾಭ ಪಡೆಯುವಂತಾಗಿದೆ.ಅಲ್ಲದೆ ಮನೆ ಬಾಗಿಲಿಗೆ ಬಂದು ಗ್ರಾಹಕರ ಆಧಾರ್ ಸಂಖ್ಯೆಯನ್ನು ಅವರ ಸಿಮ್ ನೊಂದಿಗೆ ಜೋಡಿಸುವ ವೊಡಾಫೋನ್ ನ ಸೇವೆ ಡಿಜಿಟಲ್ ಇಂಡಿಯಾ ಸಾಧಿಸುವತ್ತ ನಮ್ಮ ಶ್ರದ್ಧೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.

"ದೂರ ದೂರದ ಹಳ್ಳಿಯ ಜನರಿಗೂ ನಮ್ಮ ಈ ಸೇವೆ ಮೊಬೈಲ್ ವ್ಯಾನ್ ಗಳ ಮೂಲಕ ಸುಲಭವಾಗಿ ಕೈಗೆಟಕುವಂತಾಗಿದ್ದು ಸಂತೋಷಕರ ವಿಷಯವಾಗಿದೆ. ಕಳೆದ 10 ತಿಂಗಳಲ್ಲಿ ನಾವು ಸಾವಿರಾರು ಜನರಿಗೆ ತಮ್ಮ ಸಿಮ್ ಅಪ್ ಗ್ರೇಡ್ ಮಾಡಲು ನೆರವಾಗಿದ್ದು ಸುಭವಾಗಿ ತಮ್ಮ ಸಿಮ್ ನೊಂದಿಗೆ ಆಧಾರ್ ಸಂಖ್ಯೆ ಜೋಡಿಸಲು ಸಹಾಯ ಮಾಡಿದ್ದೇವೆ." ಎಂದು ಹೇಳಿದ್ದಾರೆ.

ಈ ಮಧ್ಯೆ, ವೊಡಾಫೋನ್ SuperIoT ಲಾಂಚ್ ಮಾಡಿದ್ದು ಇದು ವೆಹಿಕಲ್ ಟ್ರ್ಯಾಕಿಂಗ್, ಅಸೆಟ್(ಫಿಕ್ಸ್ಡ್ ಮತ್ತು ಮೊಬೈಲ್) ಟ್ರ್ಯಾಕಿಂಗ್, ಪೀಪಲ್ ಟ್ರ್ಯಾಕಿಂಗ್ (ಶಾಲಾ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು) ಮೊದಲಾದ IoTಸೊಲ್ಯೂಶನ್ ಗಳನ್ನು ಒಳಗೊಂಡಿದೆ.

ಟೆಲಿಕಾಂ ಉದ್ಯಮದಲ್ಲಿ ಇಂಥದ್ದೊಂದು ಸೊಲ್ಯೂಶನ್ ಇದೇ ಮೊದಲಾಗಿದ್ದು ಸಾಧನಗಳು, ಅಪ್ಲಿಕೇಶನ್ಗಳು, ಕನೆಕ್ಟಿವಿಟಿ, ಸರ್ವೀಸ್ ಪ್ಲ್ಯಾಟ್ಫಾರ್ಮ್, ಸಪೋರ್ಟ್ ಮತ್ತು ಸೆಕ್ಯೂರಿಟಿ ಯ ಸಂಪೂರ್ಣ ನಿರ್ವಹಣೆಗೆ ಇದು ಅನುವಾಗಲಿದೆ. SuperIoT ಬಳಸುವ ಮೂಲಕ ಉದ್ಯಮಗಳು ಅನೇಕ ಸಪ್ಲೈಯರ್ ಮತ್ತು ಸರ್ವೀಸ್ ಪ್ರೊವೈಡರ್ಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.

Best Mobiles in India

English summary
The company has launched SuperIoT -comprising IoT solutions like Vehicle Tracking, Asset Tracking (Fixed and Mobile) and People Tracking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+