ಜಿಯೋ ಹೊಡೆತಕ್ಕೆ ನಲುಗಿದ ಟೆಲಿಕಾಂ!..ಏರ್‌ಟೆಲ್ ಮತ್ತು ವೊಡಾಫೋನ್ ಕಥೆ ಕ್ಲೋಸ್?

|

ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಈ ವರ್ಷದ ಸೆಪ್ಟೆಂಬರ್‌ ತಿಂಗಳೊಂದರಲ್ಲಿಯೇ 49 ಲಕ್ಷ ಬಳಕೆದಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ಟ್ರಾಯ್ ರಿಪೋರ್ಟ್‌ನಿಂದ ತಿಳಿದುಬಂದಿದೆ. ಇದೇ ಸಮಯದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಮಿಂಚಿನ ವೇಗದಲ್ಲಿ ಸಾಗುತ್ತಿರುವ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 69.83 ಲಕ್ಷ ಹೊಸ ಬಳಕೆದಾರರು ಸೇರಿದ್ದಾರೆ ಎಂದು ವಲಯ ನಿಯಂತ್ರಕ ಟ್ರಾಯ್‌ನ ಮಾಹಿತಿ ನೀಡಿದೆ.

 ಟ್ರಾಯ್ ಮಾಹಿತಿ

ಹೌದು, ಟ್ರಾಯ್ ಮಾಹಿತಿಯ ಪ್ರಕಾರ, ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್‌ ನಲ್ಲಿ 23.8 ಲಕ್ಷ ಬಳಕೆದಾರರನ್ನು ಕಳೆದುಕೊಂಡು, ಒಟ್ಟು 32.55 ಕೋಟಿ ಬಳಕೆದಾರರನ್ನು ಹೊಂದಿದೆ. ಅಂತೆಯೇ, ವೊಡಾಫೋನ್ ಐಡಿಯಾ ಸೆಪ್ಟೆಂಬರ್‌ ತಿಂಗಳಲ್ಲಿ 25.7 ಲಕ್ಷ ಬಳಕೆದಾರರನ್ನು ಕಳೆದುಕೊಂಡು ತನ್ನ ಒಟ್ಟು ಬಳಕೆದಾರರ ಸಂಖ್ಯೆಯನ್ನು 37.24 ಕೋಟಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಸೆಪ್ಟೆಂಬರ್‌ ತಿಂಗಳನಲ್ಲಿ 69.83 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಟೆಲಿಕಾಂ ದಿಗ್ಗಜನಾಗುವ ಹತ್ತಿರ ಬಂದಿದೆ.

ಸೆಪ್ಟೆಂಬರ್ 30ರ

2019 ರ ಸೆಪ್ಟೆಂಬರ್ 30ರ ಹೊತ್ತಿಗೆ, ವೊಡಾಫೋನ್ ಐಡಿಯಾವು ಮಾರುಕಟ್ಟೆಯಲ್ಲಿ ಶೇ 31.73 ರಷ್ಟು ಚಂದಾದಾರರ ಪಾಲನ್ನು ಹೊಂದಿದ್ದರೆ, ಬಳಕೆದಾರರ ಸಂಖ್ಯೆಯನ್ನು 35.52 ಕೋಟಿಗೆ ಏರಿಸಿಕೊಂಡಿರುವ ಜಿಯೋ ಶೇ 30.26 ರಷ್ಟು ಮತ್ತು ಭಾರ್ತಿ ಏರ್‌ಟೆಲ್ ಶೇ 27.74 ರಷ್ಟನ್ನು ಹೊಂದಿದೆ. ಸರ್ಕಾರಿ ಸ್ವಾಮ್ಯದ ಎಂಟಿಎನ್ಎಲ್ 8,717 ಬಳಕೆದಾರರನ್ನು ಕಳೆದುಕೊಂಡರೆ (33.93 ಲಕ್ಷ ಬಳಕೆದಾರರ ಸಂಖ್ಯೆ), ಬಿಎಸ್ಎನ್ಎಲ್ 7.37 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಮತ್ತು ಅದರ ಒಟ್ಟು ಬಳಕೆದಾರರ ಸಂಖ್ಯೆ 11.69 ಕೋಟಿ ತಲುಪಿದೆ.

117.37 ಕೋಟಿಗೆ

ಭಾರತದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು 117.1 ಕೋಟಿಯಿದ್ದ ವೈರ್‌ಲೆಸ್ ಚಂದಾದಾರರ ಸಂಖ್ಯೆ (ಜಿಎಸ್‌ಎಂ, ಸಿಡಿಎಂಎ ಮತ್ತು ಎಲ್‌ಟಿಇ) 2019 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 117.37 ಕೋಟಿಗೆ ಏರಿಕೆಯಾಗಿದ್ದು, ಇದು ಮಾಸಿಕ ಶೇಕಡಾ 0.23 ರಷ್ಟು ಬೆಳವಣಿಗೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಿಳಿಸಿದೆ.ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ 65.91 ಕೋಟಿಗೆ ಇಳಿದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 51.45 ಕೋಟಿಗೆ ಏರಿಕೆಯಾಗಿದೆ ಎಂದು ಟ್ರಾಯ್ ಹೇಳಿದೆ.

ವೈರ್‌ಲೆಸ್

ಭಾರತದಲ್ಲಿ ವೈರ್‌ಲೆಸ್ ದೂರವಾಣಿ ದಟ್ಟಣೆ ಆಗಸ್ಟ್ ಅಂತ್ಯದಲ್ಲಿ 88.77 ರಷ್ಟು ಇದ್ದಂತಹದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ 88.90 ಕ್ಕೆ ಏರಿದೆ ಎಂದು ಟ್ರಾಯ್ ತಿಳಿಸಿದೆ. ಇನ್ನು 2019 ರ ಸೆಪ್ಟೆಂಬರ್ 30ರ ಹೊತ್ತಿಗಿನ ಟ್ರಾಯ್ ರಿಪೋರ್ಟ್ ಸಾರಾಂಶವನ್ನು ನಾವು ನೋಡುವುದಾದರೆ, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಜಿಯೋ ಮತ್ತು ಬಿಎಸ್ಎನ್ಎಲ್ ಮಾತ್ರವೇ ಬಳಕೆದಾರರನ್ನು ವೃದ್ಧಿಸಿಕೊಂಡಿರುವುದನ್ನು ನಾವು ನೋಡಬಹುದಾಗಿದ್ದು, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್‌ಗೆ ಇದು ಸಂಕಷ್ಟ ಕಾಲ ಎಂದು ಹೇಳಬಹುದು.

Best Mobiles in India

English summary
As per the TRAI data, Bharti Airtel lost 23.8 lakh users in September to take its total user base to 32.55 crore. Similarly, Vodafone Idea lost 25.7 lakh users in the month to take its total user base to 37.24 crore

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X