Home
ಸುದ್ದಿಜಾಲ

VIನಿಂದ ಬೊಂಬಾಟ್ ಆಫರ್: ಕೇವಲ 95 ರೂ. ರಿಚಾರ್ಜ್ ಮಾಡಿದರೆ ಸಾಕು.. OTT ಮತ್ತು SonyLIV ಫ್ರೀ!

Voda Idea Cheapest OTT Plan: ನೀವು ವೊಡಾಫೋನ್ ಐಡಿಯಾ ಬಳಕೆದಾರರಾಗಿದ್ದರೆ, ಇಲ್ಲಿದೆ ನಿಮಗೆ ಭರ್ಜರಿ ಸಿಹಿ ಸುದ್ದಿ. ನೀವು 100 ರೂ.ಗಿಂತ ಕಡಿಮೆ ದರದ ರೀಚಾರ್ಜ್‌ನಲ್ಲಿ ಹಲವು ಲಾಭಗಳನ್ನು ಪಡೆಯಬಹುದು. ವೊಡಾಫೋನ್ ಐಡಿಯಾ (Vodafone idea) 5G ಸೇವೆಯ ವಿಷಯದಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಿಂತ ಹಿಂದುಳಿದಿರಬಹುದು. ಆದರೆ, ಕಂಪನಿಯು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಹಾಗಿದ್ರೆ, ಈ ಯೋಜನೆಯ ದರ ಮತ್ತು ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

ಹೌದು, ವೊಡಾಫೋನ್ ಐಡಿಯಾ ಕಂಪನಿಯು ಅನೇಕ ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ಇದು ಕಡಿಮೆ ಬೆಲೆಯಲ್ಲಿ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಗಳಲ್ಲಿ ಒಂದು OTT ಪ್ರಯೋಜನಗಳಿಗೆ ಸಂಬಂಧಿಸಿದೆ. OTT ಜೊತೆಗೆ ಡೇಟಾದ ಪ್ರಯೋಜನಗಳನ್ನು ನೀಡುವ ವೊಡಾಫೋನ್ ಐಡಿಯಾದ 100 ರೂ.ಗಿಂತ ಕಡಿಮೆಯಿರುವ ಪ್ಲಾನ್ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ.

VIನಿಂದ ಬೊಂಬಾಟ್ ಆಫರ್: ಕೇವಲ 95 ರೂ. ರಿಚಾರ್ಜ್ ಮಾಡಿದರೆ ಸಾಕು.!

ವೊಡಾಫೋನ್ ಐಡಿಯಾದ 95 ರೂ.ನ ಪ್ರಿಪೇಯ್ಡ್ ಯೋಜನೆ

ಇದು ಕಂಪನಿಯ ಅಗ್ಗದ OTT ಡೇಟಾ ವೋಚರ್ ಆಗಿದೆ. ವೊಡಾಫೋನ್ ಐಡಿಯಾದ 95 ರೂ.ನ ಯೋಜನೆಯಲ್ಲಿ, ನೀವು ಒಟ್ಟು 4GB ಡೇಟಾವನ್ನು ಪಡೆಯಬಹುದು. ಮಾನ್ಯತೆ ಬಗ್ಗೆ ಹೇಳುವುದಾದರೆ, ಈ ರೀಚಾರ್ಜ್ ಪ್ಲ್ಯಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಆದರೆ, ಈ ರೀಚಾರ್ಜ್‌ ಯೋಜನೆಯಡಿಯಲ್ಲಿ ಬಳಕೆದಾರರಿಗೆ ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್ ಸೌಲಭ್ಯಗಳನ್ನು ನೀಡಲಾಗುವುದಿಲ್ಲ.

ಎಸ್‌ಎಂಎಸ್‌ ಮತ್ತು ಧ್ವನಿ ಕರೆಗಾಗಿ ನೀವು ಪ್ರತ್ಯೇಕವಾಗಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ಯೋಜನೆಯಲ್ಲಿ, ಕಂಪನಿಯು ತನ್ನ ಗ್ರಾಹಕರಿಗೆ SonyLivನ ಉಚಿತ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ. ಇದನ್ನು 28 ದಿನಗಳವರೆಗೆ ಬಳಸಬಹುದು.

28 ದಿನಗಳವರೆಗೆ Sony Livನ ವ್ಯಾಲಿಡಿಟಿ

ಈ OTT ವೋಚರ್‌ನ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, 4GB ಡೇಟಾವನ್ನು ಹೊರತುಪಡಿಸಿ ನೀವು 28 ದಿನಗಳವರೆಗೆ Sony Livನ ಉಚಿತ ಮೊಬೈಲ್ ಪ್ಲಾಟ್‌ಫಾರ್ಮ್ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಆದರೆ, 4GB ಡೇಟಾವು 14 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಇನ್ನೂ, Sony Livನ ವ್ಯಾಲಿಡಿಟಿಯು 28 ದಿನಗಳವರೆಗೆ ಇರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ Sony Livಗೆ ಚಂದಾದಾರರಾಗಲು ಬಯಸುವವರಿಗೆ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ.

151 ರೂ. ಮತ್ತು 169 ರೂ. ರೀಚಾರ್ಜ್‌ ಪ್ಲ್ಯಾನ್

ಇದಲ್ಲದೇ ವೊಡಾಫೋನ್ ಐಡಿಯಾ ಕಂಪನಿಯು 151 ರೂ. ಮತ್ತು 169 ರೂ. ಯೋಜನೆಗಳನ್ನು ಹೊಂದಿದೆ. ಇದು ಮೂರು ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ, ಈ ರೀಚಾರ್ಜ್‌ ಪ್ಲ್ಯಾನ್‌ನೊಂದಿಗೆ ಯಾವುದೇ ಸೇವಾ ಮಾನ್ಯತೆ ಲಭ್ಯವಿರುವುದಿಲ್ಲ.

VIನಿಂದ ಬೊಂಬಾಟ್ ಆಫರ್: ಕೇವಲ 95 ರೂ. ರಿಚಾರ್ಜ್ ಮಾಡಿದರೆ ಸಾಕು.!

601 ರೂ.ಗಳ ರಿಚಾರ್ಜ್ ಯೋಜನೆ ಕೂಡ ಲಭ್ಯ

601 ರೂ.ಗಳ ರಿಚಾರ್ಜ್ ಯೋಜನೆಯಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 100 SMS ಮತ್ತು ಪ್ರತಿದಿನ 3GB ಡೇಟಾ ಲಭ್ಯವಿರುತ್ತದೆ. ಈ ಪ್ಲಾನ್ ಅನ್ನು ಬಳಕೆದಾದರೂ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ. ಇದರಲ್ಲಿ ಒಟ್ಟಾರೆಯಾಗಿ 84GB ಡೇಟಾ ಲಭ್ಯವಿರುತ್ತದೆ. ಅಲ್ಲದೆ ಈ ಯೋಜನೆಯಲ್ಲಿ 16GB ಹೆಚ್ಚುವರಿಯ ಡೇಟಾವನ್ನು ಸಹ ಪಡೆಯಬಹುದು.

ಒಟ್ಟಾರೆ, ವೊಡಾಫೋನ್ ಐಡಿಯಾ ಭಾರತದ ಜನಪ್ರಿಯ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಈಗಾಗಲೇ ಟೆಲಿಕಾಂ ಮಾರುಕಟ್ಟೆಯನ್ನು ಆಳುತ್ತಿರುವ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಿದೆ. ಒಂದಿಷ್ಟು ಕೈಗೆಟಕುವ ರಿಚಾರ್ಜ್ ಯೋಜನೆಯಲ್ಲಿ ಸಿಗುವ ಪ್ರಯೋಜನಗಳಿಗಿಂತ ಅಧಿಕವಾಗಿ ಅನುಕೂಲಗಳನ್ನು ನೀಡುತ್ತಿದೆ. ಈ ಮೂಲಕ ಜಿಯೋ ಮತ್ತು ಏರ್‌ಟೆಲ್ ರೀಚಾರ್ಜ್‌ ಯೋಜನೆಗಳ ಬೆಲೆಯಲ್ಲಿ ಏರಿಕೆ ಬೆಲೆ ಬಳಿಕ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್‌ ರೂಪಿಸಿದೆ.

Best Mobiles in India

English summary
Vodafone Idea Rs. 99 cheapest Prepaid Recharge Plan: talktime, validity, and data benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+