ವಿ ಟೆಲಿಕಾಂನಿಂದ ಹೊಸ ವಿ ಮ್ಯಾಕ್ಸ್ 401 ಸೌತ್ ಪೋಸ್ಟ್‌ಪೇಯ್ಡ್ ಪ್ಲಾನ್ ಲಾಂಚ್! ಏನೆಲ್ಲಾ ಪ್ರಯೋಜನಗಳು!
ದೇಶದ ಜನಪ್ರಿಯ ಟೆಲಿಕಾಂ ಆಪರೇಟರ್‌ಗಳಲ್ಲಿ ವೊಡಾಫೋನ್ ಐಡಿಯಾ ಕೂಡ ಒಂದಾಗಿದೆ. ಏರ್‌ಟೆಲ್ ಮತ್ತು ಜಿಯೋ ನಡುವೆ ಪ್ರಬಲ ಪೈಪೋಟಿ ನಡೆಸುತ್ತಿರುವ ವೋಡಾಫೋನ್ ಐಡಿಯಾ ಪ್ರಿಪೇಯ್ಡ್ ಮಾತ್ರವಲ್ಲದೆ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಇದೀಗ ಬಳಕೆದಾರರಿಗೆ ಅನುಕೂಲವಾಗುವ ವಿಶೇಷ ಪೋಸ್ಟ್‌ಪೇಯ್ಡ್ ಪ್ಲಾನ್ ಪರಿಚಯಿಸಿದೆ.
ಹೌದು, ವೊಡಾಫೋನ್ ಐಡಿಯಾ ವಿ ಮ್ಯಾಕ್ಸ್ 401 ಸೌತ್ ಪೋಸ್ಟ್‌ಪೇಯ್ಡ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪ್ರಾದೇಶಿಕ OTT ವಿಷಯವನ್ನು ಆನಂದಿಸಲು ಅವಕಾಶ ನೀಡಲಿದೆ. ಇದರಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಸಹ ನೀಡಲಿದೆ. ಹಾಗಾದರೆ ಈ ಪೋಸ್ಟ್‌ಪೇಯ್ಡ್ ಪ್ಲಾನ್ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಮ್ಯಾಕ್ಸ್ 401 ಸೌತ್ ಪೋಸ್ಟ್‌ಪೇಯ್ಡ್ ಪ್ಲಾನ್
ವೋಡಾಫೋನ್ ಐಡಿಯಾ 401ರೂ ಬೆಲೆಯಲ್ಲಿ ಈಗಾಗಲೇ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ನೀಡುತ್ತಿದೆ. ಆದರೆ ಹೊಸದಾಗಿ ಪರಿಚಯಿಸಿರುವ ವಿ ಮ್ಯಾಕ್ಸ್ 401 ಸೌತ್ ಪ್ಲಾನ್‌ಗಳು OTT ಆಫರ್‌ನಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದೆ. ಹೊಸದಾಗಿ ಸೇರಿಸಲಾಗಿರುವ ವಿ ಮ್ಯಾಕ್ಸ್ 401ರೂ. ಪೋಸ್ಟ್‌ಪೇಯ್ಡ್ ಪ್ಲಾನ್ ಪ್ರಯೋಜನಗಳ ವಿವರವನ್ನು ಇಲ್ಲಿ ತಿಳಿಯೋಣ ಬನ್ನಿರಿ.
ವಿ ಮ್ಯಾಕ್ಸ್ 401 ಸೌತ್ ಪ್ಲಾನ್ ವಿವರಗಳು
ವಿ ಮ್ಯಾಕ್ಸ್ 401 ಸೌತ್ ಪ್ಲಾನ್ ಆನ್‌ಲೈನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಪ್ಲಾನ್ ಹೆಚ್ಚುವರಿ 50GB ಡೇಟಾ ಜೊತೆಗೆ 1 ಪೋಸ್ಟ್‌ಪೇಯ್ಡ್ ಕನೆಕ್ಟಿವಿಟಿಯನ್ನು ನೀಡಲಿದೆ. ಇದಲ್ಲದೆ ಬಳಕೆದಾರರು ನೈಟ್ ಟೈಂನಲ್ಲಿ ಅನಿಯಮಿತ ಡೇಟಾದೊಂದಿಗೆ 200GB ಮಾಸಿಕ ರೋಲ್‌ಓವರ್ ನೀಡಲಿದೆ. ಅಲ್ಲದೆ ಅನ್‌ಲಿಮಿಟೆಡ್ ಕಾಲ್ ಮತ್ತು ತಿಂಗಳಿಗೆ 3000 SMS ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಈ ಪ್ಲಾನ್‌ನಲ್ಲಿ SunNXT ನ 12 ತಿಂಗಳ ಉಚಿತ ಪ್ರೀಮಿಯಂ ಚಂದಾದಾರಿಕೆ, Vi ಚಲನಚಿತ್ರಗಳು ಮತ್ತು ಟಿವಿ ಅಪ್ಲಿಕೇಶನ್ VIP ಪ್ರವೇಶ, ZEE5 ಪ್ರೀಮಿಯಂಗೆ ಉಚಿತ ಪ್ರವೇಶ, ಹಂಗಾಮ ಮ್ಯೂಸಿಕ್, Vi ಅಪ್ಲಿಕೇಶನ್ ಸೇವೆಗಳನ್ನು ನೀಡಲಿದೆ.

ವಿ ಮ್ಯಾಕ್ಸ್ 401 ಸೌತ್ ಪ್ಲಾನ್‌ನಲ್ಲಿ Sun NXTನಲ್ಲಿ ಆಕ್ಟಿವೇಟ್ ಮಾಡುವುದು ಹೇಗೆ?
ವಿ ಮ್ಯಾಕ್ಸ್ 401 ಸೌತ್ ಪ್ಲಾನ್ ಅನ್ನು ಒಮ್ಮೆ ರೀಚಾರ್ಜ್ ಮಾಡಿದರೆ Sun NXT ಸದಸ್ಯತ್ವವನ್ನು ಸಕ್ರಿಯಗೊಳಿಸುವುದಕ್ಕೆ ಈ ಹಂತಗಳನ್ನು ಅನುಸರಿಸಿ.
* ಮೊದಲಿಗೆ ವಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿರಿ.
* ನಂತರ ಪ್ಲಾನ್ ಬೆನಿಫಿಟ್ಸ್ ವಿಭಾಗಕ್ಕೆ ಹೋಗಿ ಮತ್ತು Sun NXT ಸದಸ್ಯತ್ವವನ್ನು ಪಡೆದುಕೊಳ್ಳಿ
* ಈಗ ನಿಮ್ಮ Vi ಪೋಸ್ಟ್‌ಪೇಯ್ಡ್ ಸಂಖ್ಯೆಯೊಂದಿಗೆ Sun NXT ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ
* ನೋಂದಣಿ ನಂತರ ನಿಮ್ಮ ಉಚಿತ ಚಂದಾದಾರಿಕೆಯನ್ನು ಬಳಸಬಹುದಾಗಿದೆ.

ವಿ 401ರೂ. ಪೋಸ್ಟ್‌ಪೇಯ್ಡ್ ಪ್ಲಾನ್ ವಿವರಗಳು
ವಿ ಟೆಲಿಕಾಂ ಈ ಹಿಂದೆಯೇ ಪರಿಚಯಿಸಿರುವ 401ರೂ ಪೋಸ್ಟ್‌ಪೇಯ್ಡ್ ಪ್ಲಾನ್ ಏತ್ಮನದ್ಯೆ 50GB ಡೇಟಾ ಪ್ರಯೋಜನ ನೀಡಲಿದೆ. ಅಲ್ಲದೆ ಅನಿಯಮಿತ ಕರೆ ಪ್ರಯೋಜನ ಹಾಗೂ ತಿಂಗಳಿಗೆ 3000SMS ಪ್ರಯೋಜನ ಲಭ್ಯವಾಗಲಿದೆ. ಆದರೆ ಈ ಪ್ಲಾನ್‌ನಲ್ಲಿ Sun NXT ಉಚಿತ ಚಂದಾದಾರಿಕೆಯ ಬದಲಿಗೆ, 599ರೂ. ಮೌಲ್ಯದ SonyLiv ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ, ಈ ಪ್ಲಾನ್ ವಿ ಮೂವೀಸ್ ಮತ್ತು TV ಅಪ್ಲಿಕೇಶನ್, ZEE5 ಪ್ರೀಮಿಯಂ, ಹಂಗಾಮಾ ಮ್ಯೂಸಿಕ್, Vi ಅಪ್ಲಿಕೇಶನ್‌ಗೆ ಉಚಿತ ಪ್ರವೇಶವನ್ನು ನೀಡಲಿದೆ.


Click it and Unblock the Notifications








