ನಷ್ಟದ ಸುಳಿಯಿಂದ ಹೊರಬರಲು ಸರ್ಕಾರದ ಮೊರೆಹೋದ ವಿ ಟೆಲಿಕಾಂ!

|

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಷ್ಟದಲ್ಲಿರುವ ವೋಡಾಫೋನ್‌ ಐಡಿಯಾ ಟೆಲಿಕಾಂ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ವಿ ಟೆಲಿಕಾಂ ತನ್ನ ಒಟ್ಟು ಆದಾಯ ಬಾಕಿ(AGR)ಯನ್ನು ಪಾವತಿಸಲು ವಿಫಲವಾಗಿ ನಷ್ಟಕ್ಕೆ ಸಿಲುಕಿಕೊಂಡಿದೆ. ಒಂದು ವರದಿಯ ಪ್ರಕಾರ ವಿ ಟೆಲಿಕಾಂ ಸಾಲ 16,000ಕೋಟಿ ರೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ 35.8% ಷೇರುಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲು ಮುಂದಾಗಿದೆ. ಇದರಿಂದ ಭಾರತದಲ್ಲಿ ದಿನೇದಿನೇ ನಷ್ಟ ಅನುಭವಿಸುತ್ತಿರುವ ವಿ ಟೆಲಿಕಾಂ ಒಂದಷ್ಟು ಸುದಾರಿಸಿಕೊಳ್ಳುವ ಸಾಧ್ಯತೆ ಇದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ತನ್ನ ಷೇರುಗಳಲ್ಲಿ 35.8% ಷೇರುಗಳನ್ನು ಭಾರತ ಸರ್ಕಾರಕ್ಕೆ ನೀಡಲು ಮುಂದಾಗಿದೆ. ಈ ಮೂಲಕ ಸಾಲದ ಸುಳಿಯಿಂದ ಹೊರಬರುವ ಸಾಹಸಕ್ಕೆ ಮುಂದಾಗಿದೆ. ಈಗಾಗಲೇ ಭಾರತದಲ್ಲಿ ತನ್ನ ಎಜಿಆರ್ ಬಾಕಿಯನ್ನು ಪಾವತಿಸಲಾಗದೆ ವಿ ಟೆಲಿಕಾಂ ಸಂಕಷ್ಟಕ್ಕೆ ಸಿಲುಕಿದೆ. ಅಷ್ಟೇ ಅಲ್ಲ $6.76 ಶತಕೋಟಿಯಷ್ಟು ಹೊಸ ದೆಹಲಿ ಬಾಕಿಗಳನ್ನು ಸಹ ಬಾಕಿ ಉಳಿಸಿಕೊಂಡಿದೆ. ಹಾಗಾದ್ರೆ ಭಾರತ ಸರ್ಕಾರಕ್ಕೆ ವಿ ಟೆಲಿಕಾಂ ಷೇರುಗಳನ್ನು ಹಸ್ತಾಂತರಿಸಿದರೆ ವಿ ಟೆಲಿಕಾಂ ಕಥೆ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ

ವಿ ಟೆಲಿಕಾಂ ಬ್ರಿಟಿಷ್ ಟೆಲಿಕಾಂ ಗ್ರೂಪ್ ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಟೆಲಿಕಾಂ ಅಂಗಸಂಸ್ಥೆ ಐಡಿಯಾ ನಡುವಿನ ಜಂಟಿ ಉದ್ಯಮವಾಗಿದೆ. ಆದರೆ ಭಾರತದಲ್ಲಿ ವಿ ಟೆಲಿಕಾಂ ಈಗಾಗಲೇ ಸ್ಪೆಕ್ಟ್ರಂ ಮತ್ತು ಎಜಿಆರ್‌ ಬಾಕಿಯನ್ನು ಉಳಿಸಿಕೊಂಡು ನಷ್ಟದ ಸುಳಿಗೆ ಸಿಲುಕಿದೆ. ಹೆಚ್ಚು ಕಡಿಮೆ 16,000ಕೋಟಿ ರೂ ಗಿಂತ ಅಧಿಕ ಸಾಲ ಹೊಂದಿರುವ ವಿ ಟೆಲಿಕಾಂ ಭಾರತದಲ್ಲಿ ಬಾಗಿಲು ಮುಚ್ಚುವ ಮಟ್ಟಕ್ಕೆ ತಲುಪಿದೆ. ಇದೇ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ವಿ ಟೆಲಿಕಾಂ ಇದೀಗ ತನ್ನ ಷೇರುಗಳನ್ನ ಭಾರತ ಸರ್ಕಾರಕ್ಕೆ ನೀಡಲು ಮುಂದಾಗಿದೆ. ಹತ್ತು ರೂ ಮುಖ ಬೆಲೆ ಹೊಂದಿರುವ 1,600ಕೋಟಿ ಷೇರುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಹೊಸ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ.

ವಿ ಟೆಲಿಕಾಂ

ಒಂದು ವೇಳೆ ಭಾರತ ಸರ್ಕಾರಕ್ಕೆ ವಿ ಟೆಲಿಕಾಂ ಈ ಷೇರುಗಳನ್ನು ಹಸ್ತಾಂತರಿಸಿದರೆ ವಿ ಟೆಲಿಕಾಂನಲ್ಲಿ ಅತಿ ಹೆಚ್ಚಿನ ಪಾಲು ಸರ್ಕಾರಕ್ಕೆ ಸೇರಲಿದೆ. ಇದರಿಂದ ವೋಡಾಫೋನ್‌ ಗ್ರೂಪ್‌ ಮತ್ತು ಅಧಿತ್ಯ ಬಿರ್ಲಾ ಗ್ರೂಪ್‌ ನ ಷೇರುಗಳ ಪಾಲು 71.2% ನಿಂದ 46.3%ಗೆ ಇಳಿಯಲಿದೆ. ಸಾರ್ವಜನಿಕರಿಂದ ಹೂಡಿಕೆಯಾದ ಷೇರುಗಳ ಪಾಲು ಇನ್ನು ಕಡಿಮೆಯಾಗಲಿದೆ. ವಿ ಟೆಲಿಕಾಂನಿಂದ ಇಂತಹದೊಂದು ಪ್ರಸ್ತಾವನೆ ಹೊರಬಿಳ್ತಿದ್ದ ಹಾಗೇ ಕಂಪೆನಿಯ ಷೇರುಗಳ ಮೌಲ್ಯ ಕೂಡ ಕುಸಿತವನ್ನು ಅನುಭವಿಸಿದೆ.

ಟೆಲಿಕಾಂ

ಟೆಲಿಕಾಂ ವಲಯಕ್ಕೆ ರಿಲಯನ್ಸ್‌ ಜಿಯೋ ಕಾಲಿಟ್ಟ ನಂತರ ವಿ ಟೆಲಿಕಾಂ ಹೆಚ್ಚು ಕಡಿಮೆ ನಷ್ಟದ ಹಾದಿಗೆ ತಲುಪಿತು ಎನ್ನಬಹುದು. ಜಿಯೋ ಟೆಲಿಕಾಂ ಪ್ರಾರಂಭದಲ್ಲಿ ನೀಡಿದ ಉಚಿತ ಕರೆ ಪ್ರಯೋಜನಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಡೇಟಾ ಪ್ರಯೋಜನದ ಜೊತೆಗೆ ಪೈಪೋಟಿ ನಡೆಸುತ್ತಾ ನಷ್ಟದ ಹಾದಿಗೆ ಬಂದಿದೆ. ಇನ್ನು ಈಗಾಗಲೇ ಉಳಿದಿರುವ ಬಾಕಿ ಪಾವತಿಸಲು ಭಾರತ ಸರ್ಕಾರ ಮತ್ತು ಇತರ ಆಪರೇಟರ್‌ಗಳಿಗೆ ಹಲವು ದಿನಗಳ ಗಡುವನ್ನು ನೀಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ವಿ ಟೆಲಿಕಾಂನಿಂದ ಇಂತಹದೊಂದು ನಿರ್ಧಾರ ಹೊರಬಿದ್ದಿದೆ. ಇನ್ನು ವಿ ಟೆಲಿಕಾಂ ಮಾತ್ರವಲ್ಲ ಏರ್‌ಟೆಲ್ ಕೂಡ ಭಾರತ ಸರ್ಕಾರಕ್ಕೆ ಬಾಕಿ ಪಾವತಿಯನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಭಾರತೀಯ ಸುಪ್ರೀಂ ಕೋರ್ಟ್‌ನಿಂದ ಈ ಟೆಲಿಕಾಂಗಳ ಮನವಿಯನ್ನು ಕೂಡ ತಿರಸ್ಕರಿಸಲಾಗಿತ್ತು ಅನ್ನೊದನ್ನ ಗಮನಿಸಬಹುದು.

Best Mobiles in India

English summary
Vodafone Idea (Vi) has been in a thick soup for some time now with the Indian government regarding its Adjusted Gross Revenue (AGR) dues.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X