Home
ಸುದ್ದಿಜಾಲ

ಪ್ರೇಮಿಗಳ ದಿನಕ್ಕೆ ವಿ ಟೆಲಿಕಾಂನಿಂದ ಭರ್ಜರಿ ಆಫರ್‌! ನಿಮಗೂ ಕೂಡ ಲಭ್ಯ!

ಪ್ರೇಮಿಗಳ ದಿನಾಚರಣೆಗೆ ವೊಡಾಫೋನ್‌ ಐಡಿಯಾ ಟೆಲಿಕಾಂ ಬಂಪರ್‌ ಆಫರ್‌ ಘೋಷಣೆ ಮಾಡಿದೆ. ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5GB ಡೇಟಾ ನೀಡುವುದಾಗಿ ಹೇಳಿದೆ. ಇದಲ್ಲದೆ ಪ್ಲೇ ದಿ ವಿ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ ಅನ್ನು ಕೂಡ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರು 5,000ರೂಪಾಯಿ ಮೌಲ್ಯದ ಗಿಫ್ಟ್‌ ವೋಚರ್‌ಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ಪ್ರೇಮಿಗಳ ದಿನಕ್ಕೆ ವಿ ಟೆಲಿಕಾಂನಿಂದ ಭರ್ಜರಿ ಆಫರ್‌! ನಿಮಗೂ ಕೂಡ ಲಭ್ಯ!

ಹೌದು, ವ್ಯಾಲೆಂಟೈನ್ಸ್‌ ಡೇ ವಿಶೇಷವಾಗಿ ವಿ ಟೆಲಿಕಾಂ ಹೆಚ್ಚುವರಿ ಡೇಟಾ ಪ್ರಯೋಜನ ನೀಡಲು ಮುಂದಾಗಿದೆ. ಈ ಆಫರ್‌ ಅನ್ನು ಪಡೆಯಬೇಕಾದರೆ ವಿ ಟೆಲಿಕಾಂ ಗ್ರಾಹಕರು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಂದರೆ 299ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ರಿಚಾರ್ಜ್‌ ಪ್ಲಾನ್‌ ಹೊಂದಿದ್ದರೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಇನ್ನುಳಿದಂತೆ ವಿ ಟೆಲಿಕಾಂನ ಈ ಹೊಸ ಆಫರ್‌ ಯಾರಿಗೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವಿ ಟೆಲಿಕಾಂನಿಂದ ಭರ್ಜರಿ ಆಫರ್‌!

ವಿ ಟೆಲಿಕಾಂ ತನ್ನ ಗ್ರಾಹಕರಿಗೆ ಪ್ರೇಮಿಗಳ ದಿನಾಚರಣೆಯ ಸಂಭ್ರಮ ಹೆಚ್ಚಾಗುವಂತೆ ಮಾಡಿದೆ. ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಸಮಯದಲ್ಲಿ ಹೆಚ್ಚುವರಿ ವೆಚ್ಚವಿಲ್ಲದೆ 5GB ಡೇಟಾ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಗ್ರಾಹಕರು 299ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್‌ ಪ್ಲಾನ್‌ ಹೊಂದಿರಬೇಕಾಗುತ್ತದೆ. ಅಂತಹ ಬಳಕೆದಾರರಿಗೆ ಹೆಚ್ಚುವರಿ ವೆಚ್ಚವಿಲ್ಲದೆ 28 ದಿನಗಳ ಮಾನ್ಯತೆಯೊಂದಿಗೆ 5GB ಹೆಚ್ಚುವರಿ ಡೇಟಾವನ್ನು ನೀಡಲಾಗುವುದು ಎಂದು ವಿ ಟೆಲಿಕಾಂ ಹೇಳಿದೆ.

ಪ್ರೇಮಿಗಳ ದಿನಕ್ಕೆ ವಿ ಟೆಲಿಕಾಂನಿಂದ ಭರ್ಜರಿ ಆಫರ್‌! ನಿಮಗೂ ಕೂಡ ಲಭ್ಯ!

ಇದಲ್ಲದೆ ವಿ ಟೆಲಿಕಾಂ 199ರೂ. ಮತ್ತು 299ರೂ. ಒಳಗಿನ ಆಯ್ದ ರೀಚಾರ್ಜ್‌ ಹೊಂದಿರುವ ಬಳಕೆದಾರರು ಹೆಚ್ಚುವರಿ 2GB ಡೇಟಾ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಇನ್ನು ಈ ಪ್ರಯೋಜನಗಳು 28 ದಿನಗಳ ಮಾನ್ಯತೆಯೊಂದಿಗೆ ಬರಲಿವೆ ಎಂದು ಹೇಳಲಾಗಿದೆ. ವಿ ಟೆಲಿಕಾಂನ ವ್ಯಾಲೆಂಟೈನ್ಸ್‌ ಡೇ ಪ್ರಯೋಜನಗಳು ಪಡೆಯಲು ಬಯಸುವ ಗ್ರಾಹಕರು ಫೆಬ್ರವರಿ 14, 2023 ರವರೆಗೆ ವಿ ಆಪ್‌ನಲ್ಲಿ ಮಾತ್ರ ರೀಚಾರ್ಜ್ ಮಾಡಿದರೆ ಮಾತ್ರ ಲಭ್ಯವಾಗಲಿದೆ.

ಇನ್ನು ವಿ ಟೆಲಿಕಾಂ 5000ರೂ. ಮೌಲ್ಯದ ಗಿಫ್ಟ್‌ ವೋಚರ್‌ ಅನ್ನು ಕೂಡ ನೀಡುವುದಾಗಿ ಹೇಳಿದೆ. ಆದರೆ ಈ ಗಿಫ್ಟ್‌ ವೋಚರ್‌ ಪಡೆಯಲು ವಿ ಟೆಲಿಕಾಂ ಗ್ರಾಹಕರು ವಿ ಆ್ಯಪ್‌ನಲ್ಲಿ ಹಂಗಾಮಾ ಮ್ಯೂಸಿಕ್‌ನಲ್ಲಿನ ವ್ಯಾಲೆಂಟೈನ್ ಪ್ಲೇಲಿಸ್ಟ್‌ ಹಾಡಿನ ಜಂಬಲ್ ಸಾಹಿತ್ಯದಿಂದ ಸರಿಯಾದ ಹಾಡನ್ನು ಊಹಿಸುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಗೇಮ್‌ನಲ್ಲಿ ಭಾಗವಹಿಸುವವರು #ViLoveTunes ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಿಯಾದ ಉತ್ತರವನ್ನು ಕಾಮೆಂಟ್ ಮಾಡಬೇಕಾಗುತ್ತದೆ.

ಪ್ರೇಮಿಗಳ ದಿನಕ್ಕೆ ವಿ ಟೆಲಿಕಾಂನಿಂದ ಭರ್ಜರಿ ಆಫರ್‌! ನಿಮಗೂ ಕೂಡ ಲಭ್ಯ!

ದಿ ವಿ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ನಲ್ಲಿ ಭಾಗವಹಿಸಿ ಪ್ರತಿ ಪ್ರಶ್ನೆಗೆ ಉತ್ತರಿಸುವ ಪ್ರತಿದಿನ ಒಬ್ಬ ಅದೃಷ್ಟಶಾಲಿ ವಿಜೇತರಿಗೆ 5,000ರೂ. ಮೌಲ್ಯದ ಗಿಫ್ಟ್‌ ವೋಚರ್‌ ದೊರೆಯಲಿದೆ. ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ Vi ಟೆಲಿಕಾಂ ವೆರಿಫೈ ಮಾಡಿದ ಸೊಶೀಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ದಿ ವಿ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ ಅನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಭಾಗವಹಿಸಲು ವಿ ಟೆಲಿಕಾಂ ಬಳಕೆದಾರರು ವಿ ಟೆಲಿಕಾಂನ ಅಧಿಕೃತ ಹ್ಯಾಂಡಲ್‌ಗಳನ್ನು ಅನುಸರಿಸಬೇಕಾಗುತ್ತದೆ.

ಇದಲ್ಲದೆ ಪ್ರೇಮಿಗಳ ದಿನದ ಪ್ರಯುಕ್ತ ನಥಿಂಗ್‌ ಫೋನ್‌ (1) ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. ಡಿಸೈನ್‌ ಹಾಗೂ ಪ್ರೊಸೆಸರ್‌ನಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ ಇದೀಗ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸಖತ್ ಡಿಸ್ಕೌಂಟ್‌ ಪಡೆದಿದ್ದು, ಮತ್ತೊಮ್ಮೆ ಸ್ಮಾರ್ಟ್‌ಫೋನ್‌ ಪ್ರಿಯರು ಹುಬ್ಬೇರಿಸುವಂತೆ ಮಾಡಿದೆ.

Best Mobiles in India

English summary
Vodafone-Idea announced a Play the ‘Vi Love Tunes Contest’ where lucky customers can win gift vouchers worth Rs 5,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+