Home
ಸುದ್ದಿಜಾಲ

ವಿ ಟೆಲಿಕಾಂನಿಂದ 128 ರೂ,ಗಳ ಹೊಸ ಪ್ರಿಪೇಯ್ಡ್ ಪ್ಲಾನ್ ಲಾಂಚ್‌! ಪ್ರಯೋಜನಗಳೇನು?

ದೇಶದ ಟೆಲಿಕಾಂ ವಲಯದಲ್ಲಿ ವೋಡಾಫೋನ್‌ ಐಡಿಯಾ ಸಂಸ್ಥೆ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಬಳಕೆದಾರರಿಗೆ ಹಲವು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಇತರೆ ಟೆಲಿಕಾಂ ಗಳಿಗೆ ಠಕ್ಕರ್‌ ನೀಡುತ್ತಾ ಬಂದಿದೆ. ಪ್ರತಿದಿನ 2GB ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯಗಳ ಪ್ಲ್ಯಾನ್‌ಗಳನ್ನು ಹೊಂದಿದ್ದು, ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡಬಲ್‌ ಡೇಟಾ ಯೋಜನೆಯ ಕೊಡುಗೆಗಳನ್ನು ನೀಡಿದೆ. ಸದ್ಯ ಇದೀಗ ವೊಡಾಫೋನ್ ಐಡಿಯಾ 128 ರೂ,ಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ.

ವೋಡಾಫೋನ್‌

ಹೌದು, ವೋಡಾಫೋನ್‌ ಐಡಿಯಾ ಹೊಸ 128 ರೂ,ಗಳ ಪ್ರಿಪೇಯ್ಡ್ ಪ್ಲಾನ್ ವೋಚರ್‌ ಪರಿಚಯಿಸಿದೆ. ಇದು ಕಾಲ್‌ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಈ ಯೋಜನೆಯು ನೆಟ್‌ವರ್ಕ್‌ನಲ್ಲಿ 10 ಸ್ಥಳೀಯ ರಾತ್ರಿ ನಿಮಿಷಗಳನ್ನು ನೀಡುತ್ತದೆ. ಈ ಪ್ಲ್ಯಾನ್‌ ಕೆಲವು ಆಯ್ದ ವಲಯಗಳಲ್ಲಿ ಮಾತ್ರ ಲಭ್ಯವಾಗಲಿದೆ. ಇನ್ನುಳಿದಂತೆ ಈ ಹೊಸ 128 ರೂ,ಗಳ ಪ್ರಿಪೇಯ್ಡ್ ಪ್ಲಾನ್ ವೋಚರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೋಡಾಫೋನ್‌

ವೋಡಾಫೋನ್‌ ಐಡಿಯಾದ ಹೊಸ 128 ರೂ,ಗಳ ಪ್ರಿಪೇಯ್ಡ್ ಪ್ಲಾನ್ ವೋಚರ್‌ ಪರಿಚಯಿಸಿದೆ. ಇದು ಕಾಲ್‌ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಈ ಯೋಜನೆಯು ನೆಟ್‌ವರ್ಕ್‌ನಲ್ಲಿ 10 ಸ್ಥಳೀಯ ರಾತ್ರಿ ನಿಮಿಷಗಳನ್ನು ನೀಡುತ್ತದೆ. ಎಲ್ಲಾ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳಿಗೆ ಈ ಯೋಜನೆಯು ಸೆಕೆಂಡಿಗೆ 2.5 ಪೈಸೆ ವಿಧಿಸುತ್ತದೆ. ಈ ಯೋಜನೆಯು ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಹೊರಹೋಗುವ ಎಸ್‌ಎಂಎಸ್ ಸ್ಥಳೀಯ, ಎಸ್‌ಟಿಡಿ ಮತ್ತು ಐಎಸ್‌ಡಿ ಕರೆಗಳಿಗೆ 1, 1.5 ಮತ್ತು 5 ರೂ. ಪ್ಲ್ಯಾನ್‌ ಚೀಟಿ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ಮುಂಬೈ

ಇನ್ನು ಈ ಪ್ಲ್ಯಾನ್‌ ಮುಂಬೈ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ (ಪೂರ್ವ), ಮತ್ತು ಉತ್ತರ ಪ್ರದೇಶ (ಪಶ್ಚಿಮ) ಸೇರಿದಂತೆ ಆಯ್ದ ವಲಯಗಳಲ್ಲಿ ಲಭ್ಯವಿದೆ. ಏರ್‌ಟೆಲ್ 128 ರೂ.ಗೆ ಸ್ಮಾರ್ಟ್ ರೀಚಾರ್ಜ್ ಪ್ಯಾಕ್ ಅನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಪ್ಲ್ಯಾನ್‌ ಬರುತ್ತದೆ. ಏರ್‌ಟೆಲ್‌ನ ಯೋಜನೆಯು ಕರೆ ಅಥವಾ ಡೇಟಾ ಪ್ರಯೋಜನಗಳನ್ನು ನೀಡುವುದಿಲ್ಲ ಮತ್ತು ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿಡಲು ಮತ್ತು ಒಳಬರುವ ಕರೆಗಳನ್ನು ಸ್ವೀಕರಿಸಲು ಬಯಸುವ ಬಳಕೆದಾರರಿಗೆ ಮಾನ್ಯತೆಯನ್ನು ನೀಡುತ್ತದೆ.

ವೊಡಾಫೋನ್

ಇದಲ್ಲದೆ ವೊಡಾಫೋನ್ ಐಡಿಯಾ ತನ್ನ 199ರೂ. ಪ್ರಿಪೇಯ್ಡ್ ಯೋಜನೆಯನ್ನು ಪರಿಷ್ಕರಿಸಿದ್ದು, ಇದು 1GB ದೈನಂದಿನ ಡೇಟಾವನ್ನು 24 ದಿನಗಳವರೆಗೆ ಬಳಕೆದಾರರಿಗೆ ನೀಡುತ್ತದೆ. ವಿ ಬಳಕೆದಾರರು ಚಲನಚಿತ್ರಗಳು ಮತ್ತು ಟಿವಿಯ ಹೆಚ್ಚುವರಿ ಲಾಭದೊಂದಿಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ಪಡೆಯುತ್ತಾರೆ. ಇದೀಗ 1.5GB ದೈನಂದಿನ ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತಿದೆ. ಯೋಜನೆಯು ಅನಿಯಮಿತ ಕರೆಗಳನ್ನು ಸಹ ನೀಡುತ್ತಿದೆ ಮತ್ತು ಯೋಜನೆಯ ಹೆಚ್ಚುವರಿ ಪ್ರಯೋಜನಗಳು ಒಂದೇ ಆಗಿರುತ್ತವೆ.

ಡೇಟಾ

ಇನ್ನು Vi ದೈನಂದಿನ ಡೇಟಾ ಮಿತಿ ಅಥವಾ 447 ರೂ ಬೆಲೆಯ ಬೃಹತ್ ಡೇಟಾ ಯೋಜನೆಯನ್ನು ಸಹ ಪ್ರಾರಂಭಿಸಿದೆ. ಈ ಯೋಜನೆಯು ದೈನಂದಿನ ಡೇಟಾ ಮಿತಿಯನ್ನು ಹೊಂದಿಲ್ಲ. ಅಂದರೆ ಬಳಕೆದಾರರು ಮಿತಿ ಮುಗಿಯುವವರೆಗೆ ಅವರು ಬಯಸಿದಷ್ಟು ಡೇಟಾವನ್ನು ಬಳಸಬಹುದು. ಈ ಯೋಜನೆಯು 60 ದಿನಗಳವರೆಗೆ ದೈನಂದಿನ ಡೇಟಾ ಮಿತಿ ಯೋಜನೆಯಿಲ್ಲದೆ 50GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಇದು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Vodafone Idea or Vi has launched a Rs 128 prepaid plan voucher which gives calling benefits. The plan offers 10 local night minutes within the network.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+