ಮಹಿಳೆಯರಿಗಾಗಿ ವೊಡಾಫೋನ್ ಸಖಿ ಜಾರಿಗೆ ತಂದ ವೊಡಾಫೋನ್ ಐಡಿಯಾ..!
ಭಾರತದಲ್ಲಿ ಮಹಿಳಾ ಸುರಕ್ಷತೆ ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿರುವ ಈ ಸಂದರ್ಬದಲ್ಲಿ ವಡಾಫೋನ್ ಹೊಸ ಯೋಜನೆಯೊಂದನ್ನು ಬಿಡುಗಡೆಗೊಳಿಸಿದೆ. ವಡಾಫೋನ್ ಐಡಿಯಾ ಮೊಬೈಲ್ ಆಧಾರಿತ ಸುರಕ್ಷತಾ ಸೇವೆಯನ್ನು ಮಹಿಳೆಯರಿಗಾಗಿ ಬಿಡುಗಡೆಗೊಳಿಸಿದೆ ಮತ್ತು ಇದರ ಹೆಸರು “ವಡಾಫೋನ್ ಸಖಿ”. ಇದರಲ್ಲಿ ಮಹಿಳೆಯರಿಗಾಗಿ ಎಮರ್ಜೆನ್ಸಿ ಅಲರ್ಟ್, ಎಮರ್ಜೆನ್ಸಿ ಬ್ಯಾಲೆನ್ಸ್ ಮತ್ತು ಪ್ರೈವೇಟ್ ನಂಬರ್ ರಿಚಾರ್ಜ್ ಆಯ್ಕೆಗಳಿರುತ್ತದೆ.

ಇಂಟರ್ನೆಟ್, ಬ್ಯಾಲೆನ್ಸ್ ಇಲ್ಲದಿರುವಾಗಲೂ ಕಾರ್ಯ:
ಈ ಸುರಕ್ಷತಾ ವೈಶಿಷ್ಟ್ಯವು ದೇಶದಾದ್ಯಂತ ವಡಾಫೋನ್ ಪ್ರಿಪೇಯ್ಡ್ ಸೇವೆಯನ್ನು ಬಳಸುವ ಮಹಿಳಾ ಗ್ರಾಹಕರಿಗಾಗಿ ಲಭ್ಯಗೊಳಿಸಲಾಗಿದೆ. ಈ ಸೇವೆಯು ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಕೆಲಸ ಮಾಡುತ್ತದೆ ಮತ್ತು ಮಬೈಲ್ ಇಂಟರ್ನೆಟ್ ಮತ್ತು ಬ್ಯಾಲೆನ್ಸ್ ಇಲ್ಲದ ಮೊಬೈಲ್ ಗಳಲ್ಲೂ ಕೂಡ ಈ ಸೇವೆಯು ಕಾರ್ಯನಿರ್ವಹಿಸುತ್ತದೆ.

ಮಹಿಳೆಯರ ಸುರಕ್ಷತೆ ಒಲವು ತೋರಿಸಿದ ವಡಾಫೋನ್:
ಭಾರತದಲ್ಲಿ ಸುಮಾರು ಬಿಲಿಯನ್ ಮೊಬೈಲ್ ಕನೆಕ್ಷನ್ ಇದೆ ಮತ್ತು ಅದರಲ್ಲಿ ಅರ್ಧದಷ್ಟು ಮಹಿಳೆಯರೇ ಆಗಿದ್ದಾರೆ.18 ಶೇಕಡಾ ಮೊಬೈಲ್ ಚಂದಾದಾರರು ಮಹಿಳೆಯರಾಗಿದ್ದಾರೆ.ಅದರಲ್ಲಿ ಹೆಚ್ಚಿನ ಮಹಿಳೆಯರಿಗೆ ಕೆಲವು ಫೀಚರ್ ಫೋನ್ ಗಳು ಮತ್ತು ಬೇಸಿಕ್ ಫೋನ್ ಗಳಿಗೆ ಮಾತ್ರವೇ ಆಕ್ಸಿಸ್ ಇದೆ. ಈ ದೊಡ್ಡ ಮಟ್ಟದ ಮಹಿಳಾ ಬಳಕೆದಾರರು ಸಬಲರಾಗಿ ಸಮಾಜದಲ್ಲಿ ಅಭಿವೃದ್ಧಿ ಕಾಣಲು ಮತ್ತು ಗುರುತಿಸಿಕೊಳ್ಳಲು ನೆರವಾಗುತ್ತಿದೆ ಎಂದು ವಡಾಫೋನ್ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಅವನೀಶ್ ಖೋಶ್ಲಾ ತಿಳಿಸಿದ್ದಾರೆ.

ಸಾಮಾಜಿಕ ಸಮಸ್ಯೆಗೆ ಪರಿಹಾರ:
ವಡಾಫೋನ್ ಸಖಿ ಮೂಲಕ ಕೆಲವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಹಿಳೆಯರಿಗೆ ನೆರವಾಗುತ್ತದೆ ಎಂದು ತಿಳಿಸುತ್ತಾರೆ ಖೋಶ್ಲಾ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕ್ಯಾಂಪೇನ್ ಒಂದನ್ನು ಕೂಡ ವಡಾಫೋನ್ ಆಯೋಜಿಸಿದೆ. ಈ ಯೋಜನೆಯಲ್ಲಿ ವಡಾಫೋನ್ ನ ಮಹಿಳಾ ಗ್ರಾಹಕರೆಲ್ಲರೂ ಭಾಗವಹಿಸಬೇಕು ಎಂದು ವಡಾಫೋನ್ ಇಚ್ಛಿಸುತ್ತಿದೆ.
ಒಟ್ಟಾರೆ ಮಹಿಳಾ ಸುರಕ್ಷತೆ ಬಗ್ಗೆ ಭಾರತದಲ್ಲಿ ವಡಾಫೋನ್ ಇಟ್ಟಿರುವ ದಿಟ್ಟ ಹೆಜ್ಜೆಯೊಂದು ಇದಾಗಿದ್ದು ನಿಜಕ್ಕೂ ಮಹಿಳೆಯರ ಸುರಕ್ಷತೆಗೆ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗೆಗಿನ ವಿವರ ಇನ್ನಷ್ಟೇ ತಿಳಿಯಬೇಕು.


Click it and Unblock the Notifications




