ವಿ ಟೆಲಿಕಾಂಗೆ ಶಾಕ್‌ ಕೊಟ್ಟ ಟ್ರಾಯ್‌ ವರದಿ! ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ!

|

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಜೂನ್ 2021ರ ಚಂದಾದಾರರ ಡೇಟಾವನ್ನು ಬಿಡುಗಡೆ ಮಾಡಿದೆ. ಈ ಡೇಟಾ ವರದಿ ನೋಡಿ ವೊಡಾಫೋನ್‌ ಐಡಿಯಾಗೆ ಮತ್ತೊಮ್ಮೆ ಶಾಕ್‌ ಎದುರಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಹಿನ್ನಡೆ ಅನುಭವಿಸುತ್ತಿರುವ ವಿ ಟೆಲಿಕಾಂ ಜೂನ್ 2021ರಲ್ಲಿ 42.89 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಆದರೆ ಜಿಯೋ ಟೆಲಿಕಾಂ ಬಂಫರ್‌ ಹೊಡೆದಿದ್ದು, ಏರ್‌ಟೆಲ್‌ ಕೂಡ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವನ್ನು ಪಡೆದುಕೊಂಡಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಮತ್ತೆ ಹಿನ್ನಡೆಯನ್ನು ಅನುಭವಿಸಿದೆ. ಟೆಲಿಕಾಂ ವಲಯದಲ್ಲಿ ರಿಲಯನ್ಸ್‌ ಜಿಯೋ ಮತ್ತು ಏರ್‌ಟೆಲ್‌ನಿಂದ ಸ್ಪರ್ಧೆ ಎದುರಿಸುತ್ತಿರುವ ವೊಡಾಫೋನ್‌ಐಡಿಯಾ ತನ್ನ ಬಳಕೆದಾರರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಅದರಲ್ಲೂ ಕಳೆದ ಜೂನ್‌ ತಿಂಗಳಲ್ಲಿ 42.89 ಲಕ್ಷ ಬಳಕೆದಾರರನ್ನು ಕಳೆದುಕೊಂಡಿರುವುದು ಸಾಕಷ್ಟು ಹಿನ್ನಡೆಯಾಗಿದೆ. ಹೊಸ ಮಾದರಿಯ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ತನ್ನ ARPU ಅನ್ನು ಹೆಚ್ಚಿಸಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಹಾಗಾದ್ರೆ ಟ್ರಾಯ್‌ನ ವರದಿಯಲ್ಲಿ ಯಾವೆಲ್ಲಾ ಟೆಲಿಕಾಂಗಳು ಮುಂಚೂಣಿಯಲ್ಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 ವಿ ಟೆಲಿಕಾಂ

ಟ್ರಾಯ್‌ ಸಂಸ್ಥೆ ನೀಡಿರುವ ವರದಿಯಂತೆ ವಿ ಟೆಲಿಕಾಂ ಕಳೆದ ಜೂನ್‌ ತಿಂಗಳಲ್ಲಿ 42.89 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಆದರೆ ರಿಲಯನ್ಸ್‌ ಜಿಯೋ 54.66 ಲಕ್ಷ ಚಂದಾದಾರರನ್ನು ಹಾಗೂ ಭಾರ್ತಿ ಏರ್‌ಟೆಲ್ 38.12 ಲಕ್ಷ ಬಳಕೆದಾರರನ್ನು ಹೊಸದಾಗಿ ಪಡೆದುಕೊಂಡಿವೆ. ಇನ್ನು ಬಿಎಸ್‌ಎನ್‌ಎಲ್ ಕೂಡ 9.93 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದು, MTNL ನ ಚಂದಾದಾರರ ಸಂಖ್ಯೆ 4,846 ಬಳಕೆದಾರರಿಂದ ಕಡಿಮೆಯಾಗಿದೆ. ಅಲ್ಲದೆ ಒಟ್ಟು ವೈರ್‌ಲೆಸ್ ಚಂದಾದಾರರು ಮೇ 2021 ರ ಅಂತ್ಯದ ವೇಳೆಗೆ 1,176.84 ಮಿಲಿಯನ್‌ನಿಂದ ಜೂನ್ 2021 ರ ಅಂತ್ಯದ ವೇಳೆಗೆ 1,180.83 ಮಿಲಿಯನ್‌ಗೆ ಏರಿದರು, ಮಾಸಿಕ 0.34 ಶೇಕಡಾ ಬೆಳವಣಿಗೆ ದರವನ್ನು ದಾಖಲಿಸಿದೆ.

ಬ್ರಾಡ್‌ಬ್ಯಾಂಡ್

ಇನ್ನು ಬ್ರಾಡ್‌ಬ್ಯಾಂಡ್ ವಲಯದ ಅಗ್ರ ಐದು ಸೇವಾ ಪೂರೈಕೆದಾರರು ಜೂನ್ 2021 ರ ಅಂತ್ಯದಲ್ಲಿ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರ ಶೇಕಡಾ 98.77 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ. ಇದರಲ್ಲಿ ರಿಲಯನ್ಸ್ ಜಿಯೋ 439.91 ಮಿಲಿಯನ್ ಚಂದಾದಾರರು, ಏರ್‌ಟೆಲ್ 197.10 ಮಿಲಿಯನ್ ಚಂದಾದಾರರು, ವೊಡಾಫೋನ್ ಐಡಿಯಾ 121.42 ಮಿಲಿಯನ್ ಚಂದಾದಾರರು , ಬಿಎಸ್ಎನ್ಎಲ್ 22.69 ಮಿಲಿಯನ್ ಮತ್ತು ಏಟ್ರಿಯಾ ಕನ್ವರ್ಜೆನ್ಸ್ 1.91 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

ವೈರ್ಡ್ ಬ್ರಾಡ್‌ಬ್ಯಾಂಡ್

ಇದರಲ್ಲಿ ಅಗ್ರ ಐದು ವೈರ್ಡ್ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಾಗಿರುವ ಬಿಎಸ್‌ಎನ್‌ಎಲ್ 6.03 ಮಿಲಿಯನ್ ಚಂದಾದಾರರು, ಏರ್‌ಟೆಲ್ 3.37 ಮಿಲಿಯನ್, ರಿಲಯನ್ಸ್ ಜಿಯೋ 3.22 ಮಿಲಿಯನ್, ಏಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್ 1.91 ಮಿಲಿಯನ್ ಮತ್ತು ಹಾಥ್‌ವೇ ಕೇಬಲ್ ಮತ್ತು ಡೇಟಾಕಾಮ್ 1.06 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಅಗ್ರ ಐದು ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಲ್ಲಿ ರಿಲಯನ್ಸ್ ಜಿಯೋ 436.69 ಮಿಲಿಯನ್, ಏರ್‌ಟೆಲ್ 193.74 ಮಿಲಿಯನ್ ಚಂದಾದಾರರು, ವೊಡಾಫೋನ್ ಐಡಿಯಾ 121.41 ಮಿಲಿಯನ್ ಚಂದಾದಾರರು, ಬಿಎಸ್‌ಎನ್‌ಎಲ್ 16.67 ಮಿಲಿಯನ್ ಮತ್ತು ಟಿಕೋನಾ ಇನ್ಫೈನೈಟ್ 0.31 ಮಿಲಿಯನ್ ಚಂದಾದಾರರನ್ನು ಹೊಂದಿವೆ.

ಏರ್‌ಟೆಲ್

ಇನ್ನು ಏರ್‌ಟೆಲ್ ತನ್ನ ಸಕ್ರಿಯ ವೈರ್‌ಲೆಸ್ ಚಂದಾದಾರರ ಗರಿಷ್ಠ ಅನುಪಾತವನ್ನು 97.62 ಶೇಕಡಾ ಮತ್ತು ಎಂಟಿಎನ್‌ಎಲ್ ಕಡಿಮೆ ಸಂಖ್ಯೆಯ ಸಕ್ರಿಯ ವೈರ್‌ಲೆಸ್ ಚಂದಾದಾರರನ್ನು ಹೊಂದಿದ್ದು ಅದು 17.78 ಶೇಕಡಾವನ್ನು ತೋರಿಸಿದೆ. 30 ನೇ ಜೂನ್ 2021 ರ ಹೊತ್ತಿಗೆ, ಖಾಸಗಿ ಸೇವಾ ಪೂರೈಕೆದಾರರು ವೈರ್‌ಲೆಸ್ ಚಂದಾದಾರರ ಶೇಕಡಾ 89.95 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೇವಲ 10.05 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಟೆಲಿಫೋನ್

ಒಟ್ಟಾರೆಯಾಗಿ, ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆ ಜೂನ್ 2021 ರ ಅಂತ್ಯದ ವೇಳೆಗೆ 120.2 ಕೋಟಿಗೆ ಹೆಚ್ಚಾಗಿದೆ, ಇದು ಮಾಸಿಕ 0.34 ಶೇಕಡಾ ಬೆಳವಣಿಗೆಯ ದರವಾಗಿದೆ. ನಗರ ದೂರವಾಣಿ ಚಂದಾದಾರಿಕೆ ಹೆಚ್ಚಾಗಿದೆ, ಆದರೆ ಗ್ರಾಮೀಣ ಚಂದಾದಾರಿಕೆಗಳು ಜೂನ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೂನ್ 2021 ರಲ್ಲಿ 440 ಆಪರೇಟರ್‌ಗಳಿಂದ ಪಡೆದ ವರದಿಗಳ ಪ್ರಕಾರ, ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ 780.27 ದಶಲಕ್ಷದಿಂದ (ಸುಮಾರು 78 ಕೋಟಿ) ಮೇ -21 ರ ಕೊನೆಯಲ್ಲಿ 792.78 ಮಿಲಿಯನ್‌ಗೆ (ಸುಮಾರು 79.2 ಕೋಟಿ) ಹೆಚ್ಚಾಗಿದೆ. ಜೂನ್ -21 ಮಾಸಿಕ 1.60 ಶೇಕಡಾ ಬೆಳವಣಿಗೆಯ ದರವನ್ನು ಹೊಂದಿದೆ, "ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಡೇಟಾ ತೋರಿಸಿದೆ.

Best Mobiles in India

English summary
The Telecom Regulatory Authority of India (TRAI) has released subscriber data for June 2021. The data shows that Vodafone Idea has lost nearly 43 lakh subscribers in June 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X