Home
ಸುದ್ದಿಜಾಲ

ವೊಡಾಫೋನ್-ಐಡಿಯಾ ವಿಲೀನ!. ಏರ್‌ಟೆಲ್ ಮೀರಿಸಿದ ಭಾರತದ ನಂಬರ್ 1 ಟೆಲಿಕಾಂ ಹೆಸರೇನು ಗೊತ್ತಾ?

By Bhaskar N J

ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನವಾಗಿರುವ ವೊಡಾಫೋನ್ ಮತ್ತು ಐಡಿಯಾ ವಿಲೀನ ಯೋಜನೆಗೆ ಐಡಿಯಾ ಸಂಸ್ಥೆಯು ಷೇರುದಾರರು ಒಪ್ಪಿಗೆ ನೀಡಿದ ನಂತರ, ಈ ಸಂಬಂಧ ಜೂನ್‌ 26ರಂದು ವಿಶೇಷ ಸಭೆಯನ್ನು ಕರೆದಿದ್ದು, ಕಂಪನಿಯ ಆಡಳಿತಮಂಡಳಿಯು ಸದಸ್ಯರ ಅನುಮತಿ ಪಡೆಯಲಿದೆ. ವಿಲೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಐಡಿಯಾ ಸೆಲ್ಯುಲಾರ್ ಲಿಮಿಟೆಡ್‌ ಕಂಪನಿಯು ವೊಡಾಫೋನ್ ಜತೆ ವಿಲೀನವಾಗುತ್ತಿರುವುದರಿಂದ ನೂತನ ಟೆಲಿಕಾಂ ಹುಟ್ಟಿಕೊಳ್ಳಲಿದೆ. ಹೆಸರು ಬದಲಾವಣೆಗೆ ಆಡಳಿತ ಮಂಡಳಿಯು ಸದಸ್ಯರ ಅನುಮೋದನೆಯನ್ನು ಪಡೆಯಲಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಎರಡೂ ಕಂಪನಿಗಳು ತಿಳಿಸಿದ್ದು, ನೂತನ ಹೆಸರನ್ನು ಈ ಟೆಲಿಕಾಂ ಪಡೆದುಕೊಳ್ಳಲಿದೆ. !

ವೊಡಾಫೋನ್-ಐಡಿಯಾ ವಿಲೀನ!..ಈಗ ಭಾರತದ ನಂಬರ್ 1 ಟೆಲಿಕಾಂ ಹೆಸರೇನು ಗೊತ್ತಾ?

ವೊಡಾಫೋನ್ ಮತ್ತು ಐಡಿಯಾ ವಿಲೀನದಿಂದಾಗಿ ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರಲಿದೆ.! ಇದರಿಂದ ಏರ್‌ಟೆಲ್ ಮತ್ತು ಜಿಯೋಗೆ ಹೊಡೆತ ಹೊಡೆತ ಬೀಳಲಿದ್ದು, ಟೆಲಿಕಾಂನಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂದು ಹೇಳಲಾಗುತ್ತಿದೆ.

ಹೊಸ ಟೆಲಿಕಾಂ 'ವೊಡಾಫೋನ್ ಐಡಿಯಾ'!

ಹೊಸ ಟೆಲಿಕಾಂ 'ವೊಡಾಫೋನ್ ಐಡಿಯಾ'!

ಐಡಿಯಾ ಸೆಲ್ಯುಲಾರ್ ಲಿಮಿಟೆಡ್‌ ಕಂಪನಿಯು ವೊಡಾಫೋನ್ ಜತೆ ವಿಲೀನವಾಗುತ್ತಿರುವುದರಿಂದ ನೂತನ ಟೆಲಿಕಾಂ ಹುಟ್ಟಿಕೊಳ್ಳಲಿದೆ. ಕಳೆದ ಕೆಲವು ತಿಂಗಳಿನಿಂದಲೂ ಭಾರೀ ಕುತೋಹಲಕ್ಕೆ ಕಾರಣವಾಗಿದ್ದ ವಿಲೀನ ಟೆಲಿಕಾಂ ಹೆಸರು ಬಹಿರಂಗವಾಗಿದೆ. ನೂತನ ಟೆಲಿಕಾಂ ಹೆಸರು 'ವೊಡಾಫೋನ್ ಐಡಿಯಾ' ಎಂದು ಇಡಲಾಗುತ್ತದೆ ಎನ್ನಲಾಗಿದೆ.

ಭಾರತದ ದೊಡ್ಡ ಟೆಲಿಕಾಂ!!

ಭಾರತದ ದೊಡ್ಡ ಟೆಲಿಕಾಂ!!

ಪ್ರಸ್ತುತ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ಮೊದಲ ಸ್ಥಾನದಲ್ಲಿದ್ದರೆ, ವೊಡಾಪೋನ್ ಮತ್ತು ಐಡಿಯಾ ಟೆಲಿಕಾಂಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿ ಮುಂದುವರೆದಿವೆ. ಆದರೆ, ಈ ಒಪ್ಪಂದದಿಂದಾಗಿ ದೇಶದಲ್ಲಿ ಶೇಕಡ 35% ಗ್ರಾಹಕರನ್ನು ಹೊಂದುವ ಮೂಲಕ ಭಾರತೀಯ ಟೆಲಿಕಾಂನಲ್ಲಿ 'ವೊಡಾಫೋನ್ ಐಡಿಯಾ' ಬೃಹತ್ ಟೆಲಿಕಾಂ ಆಗಿ ರೂಪುಗೊಳ್ಳಲಿದೆ.

ಷೇರು ಹಂಚಿಕೆ ಹೇಗಿರುತ್ತದೆ?

ಷೇರು ಹಂಚಿಕೆ ಹೇಗಿರುತ್ತದೆ?

ಈ ವಿಲೀನದಿಂದಾಗಿ ವೊಡಾಫೋನ್‌ಗೆ 82,800 ಕೋಟಿ ಮತ್ತು ಐಡಿಯಾಗೆ 72,200 ಕೋಟಿ ಮೌಲ್ಯ ಸಿಗಲಿದ್ದು,ವಿಲೀನವಾದ ಕಂಪನಿಯಲ್ಲಿ ವೊಡಾಫೋನ್‌ ಶೇ.45.1, ಆದಿತ್ಯ ಬಿರ್ಲಾ ಶೇ.26 ಮತ್ತು ಐಡಿಯಾ ಷೇರುದಾರರು ಶೇ.28.1 ಷೇರುಗಳನ್ನು ಹೊಂದಲಿದ್ದಾರೆ ಎಂದು ವೊಡಾಫೋನ್ ಕಂಪೆನಿಯ ಮೂಲಗಳಿಂದ ಮಾಧ್ಯಮಗಳಿಗೆ ತಿಳಿದುಬಂದಿದೆ.

ನೂತನ ಸಿಇಒ ಯಾರು?

ನೂತನ ಸಿಇಒ ಯಾರು?

23,000 ಕೋಟಿ ಡಾಲರ್‌ ಮೌಲ್ಯದ, ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಶೇ.35ರಷ್ಟು ಷೇರು ಮಾರುಕಟ್ಟೆಯನ್ನು ಹೊಂದಲಿದೆ. ಈ ನೂತನ ಟೆಲಿಕಾಂ ಕಂಪೆನಿಗೆ ನೂತನ ಸಿಇಒ ಆಗಿ ಬಾಲೇಶ್ ಶರ್ಮಾ ನೇಮಕವಾಗಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಕಾರ್ಯಕಾರಿಯೇತರ ಅಧ್ಯಕ್ಷರಾಗಿದ್ದಾರೆ.

Riversong Jelly Kids GPS tracker hands-on - GIZBOT KANNADA
ಟೆಲಿಕಾಂನಲ್ಲಿ ಭಾರೀ ಪೈಪೋಟಿ!!

ಟೆಲಿಕಾಂನಲ್ಲಿ ಭಾರೀ ಪೈಪೋಟಿ!!

'ವೊಡಾಫೋನ್ ಐಡಿಯಾ' ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಲಿರುವುದರಿಂದ, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ನಡುವೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಉಂಟಾಗಲಿದೆ. ದೇಶದಲ್ಲಿ ಏರ್‌ಟೆಲ್‌ಗಿಂತಲೂ ಹೆಚ್ಚು ನೆಟ್‌ವರ್ಕ್ ಪಡೆಯುವ ಈ ಕಂಪೆನಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಹುದು ಎಂಬ ನಿರೀಕ್ಷೆನ್ನು ಹೊಂದಲಾಗಿದೆ.

ಕಡಿಮೆ ಬೆಲೆಗೆ ಆಫರ್ಸ್!!

ಕಡಿಮೆ ಬೆಲೆಗೆ ಆಫರ್ಸ್!!

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಹುಟ್ಟುವುದರಿಂದ ಟೆಲಿಕಾಂ ಸೇವೆಯ ದರವೂ ಕಡಿಮೆಯಾಗಲಿದೆ ಎನ್ನಲಾಗಿದೆ. ಜಿಯೋ ನೀಡುತ್ತಿರುವ ಆಫರ್‌ಗಳಿಗಿಂತ ಕಡಿಮೆ ಬೆಲೆಗೆ ಸೇವೆಯನ್ನು ನೀಡುವ ಗುರಿಯನ್ನು 'ವೊಡಾಫೋನ್ ಐಡಿಯಾ' ಕಂಪೆನಿ ಸಿಇಒ ಬಾಲೇಶ್ ಶರ್ಮಾ ಹೊಂದಿದ್ದಾರಂತೆ.

Best Mobiles in India

English summary
Idea announced that the merged entity will be known as Vodafone Idea, the company plans to raise Rs. 15,000 in form of non-convertible securities. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+