Vodafone Idea: 17ರೂ.ಬೆಲೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಲಾಂಚ್! ಅನ್‌ಲಿಮಿಟೆಡ್ ಡೇಟಾ ಸೌಲಭ್ಯ!
ದೇಶದ ಟೆಲಿಕಾಂ ವಲಯದಲ್ಲಿ ವೊಡಾಫೋನ್ ಐಡಿಯಾ ಸಾಕಷ್ಟು ಕುಸಿತವನ್ನು ಅನುಭವಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವೊಡಾಫೋನ್ ಐಡಿಯಾ ಗ್ರಾಹಕರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಇದರ ನಡುವೆಯು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ವೊಡಾಫೋನ್ ಐಡಿಯಾ(Vodafone Idea) ಹೊಸ ಹೊಸ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.
ಹೌದು, ವೊಡಾಫೋನ್ ಐಡಿಯಾ ಇದೀಗ ಭಾರತದಲ್ಲಿ 17ರೂ. ಮತ್ತು 57ರೂ. ಬೆಲೆಯ ಎರಡು ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್‌ಗಳು ರಾತ್ರಿ ಸಮಯದಲ್ಲಿ ಅನಿಯಮಿತ ರಾತ್ರಿ ಡೇಟಾವನ್ನು ನೀಡಲಿವೆ. ಇದರೊಂದಿಗೆ 250 ದಿನಗಳ ವ್ಯಾಲಿಡಿಟಿ ನೀಡುವ ಮತ್ತೊಂದು ಪ್ಲಾನ್ ಅನ್ನು ಕೂಡ ಅನಾವರಣಗೊಳಿದೆ. ಹಾಗಾದ್ರೆ ವಿ ಟೆಲಿಕಾಂ ಪರಿಚಯಿಸಿರುವ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ 17ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು: ವಿ ಟೆಲಿಕಾಂನ ಹೊಸ 17ರೂ. ಪ್ರಿಪೇಯ್ಡ್ ಪ್ಲಾನ್ 12 AM ಮತ್ತು 6 AM ನಡುವೆ ಅನಿಯಮಿತ ರಾತ್ರಿ ಡೇಟಾವನ್ನು ನೀಡಲಿದೆ. ಈ ಪ್ಲಾನ್‌ನಿಮಗೆ ಒಟ್ಟು 24 ಗಂಟೆಗಳ ವ್ಯಾಲಿಡಿಟಿಯನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ SMS ಅಥವಾ ಕರೆ ಪ್ರಯೋಜನಗಳು ಲಭ್ಯವಿಲ್ಲ. ಇದು ಕೇವಲ ರಾತ್ರಿ ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್ ಪ್ಲಾನ್ ಆಗಿದೆ.
ವಿ ಟೆಲಿಕಾಂ 57ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು: ಈ ಪ್ಲಾನ್‌ನಲ್ಲಿ ನಿಮಗೆ ಒಟ್ಟು ಏಳು ದಿನಗಳ (168 ಗಂಟೆಗಳ) ಮಾನ್ಯತೆ ಸಿಗಲಿದೆ. ಈ ಸಮಯದಲ್ಲಿ ನೀವು ಅನಿಯಮಿತ ರಾತ್ರಿ ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ಕರೆ ಹಾಗೂ ಎಸ್‌ಎಂಎಸ್ ಪ್ರಯೋಜನಗಳು ಸಿಗುವುದಿಲ್ಲ.

ವಿ ಟೆಲಿಕಾಂ 1999ರೂ. ಪ್ರಿಪೇಯ್ಡ್ ಪ್ಲಾನ್ ವಿವರ: ವಿ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ಇದಾಗಿದೆ. ಇದು ನಿಮಗೆ ಒಟ್ಟು 250 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ನಿಮಗೆ ಅನಿಯಮಿತ ಕರೆ ಪ್ರಯೋಜನ ಸಿಗಲಿದೆ. ಜೊತೆಗೆ ದೈನಂದಿನ 100 SMS ಮತ್ತು ಪ್ರತಿದಿನ 1.5GB ಡೇಟಾ ಸೌಲಭ್ಯ ಲಭ್ಯ. ಅನಿಯಮಿತ ಕರೆ ಮತ್ತು ಡೇಟಾ ಪ್ಯಾಕ್ ಬಯಸುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಈ ಪ್ಲಾನ್ ಪರಿಚಯಿಸಲಾಗಿದೆ. ದೈನಂದಿನ ನಿರ್ದಿಷ್ಟಪಡಿಸಿದ ಮಿತಿಯು ಮುಗಿದ ನಂತರ ಡೇಟಾ ವೇಗವನ್ನು 64Kbps ಗೆ ಇಳಿಸಲಾಗುತ್ತದೆ ಎಂದು ವಿ ಟೆಲಿಕಾಂ ಹೇಳಿದೆ.
ಇದಲ್ಲದೆ ವಿ ಟೆಲಿಕಾಂ ಇತ್ತೀಚಿಗೆ 549ರೂ. ಪ್ಲ್ಯಾನ್ ಪರಿಚಯಿಸಿತ್ತು. ಈ ಪ್ಲ್ಯಾನ್ 180 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಬಳಕೆದಾರರು ಒಟ್ಟಾರೆ 1GB ಡೇಟಾ ಮಾತ್ರ ಲಭ್ಯವಾಗಲಿದೆ. ಉಳಿದಂತೆ ಹೆಚ್ಚುವರಿ ಡೇಟಾ ಬೇಕು ಎಂದರೆ ಡೇಟಾ ವೋಚರ್‌ಗಳಿಗೆ ಚಂದಾದಾರರಾಗಬೇಕಾಗುತ್ತದೆ. ಇದಿಷ್ಟು ಮಾತ್ರವಲ್ಲ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳಿಗೆ 2.5 ಪೈಸೆಯನ್ನು ಪ್ರತಿ ಸೆಕೆಂಡಿಗೆ ಪಾವತಿ ಮಾಡಬೇಕಾಗುತ್ತದೆ. ಈ ಮೂಲಕ ನೀವು ಸೀಮಿತ ಟಾಕ್‌ಟೈಮ್ ಅನ್ನು ಮಾತ್ರ ಪಡೆಯುತ್ತೀರಿ. ದೀರ್ಘ ಸಮಯದವರೆಗೆ ನಿಮ್ಮ ಸಿಮ್ ಸಕ್ರಿಯವಾಗಿ ಇಟ್ಟುಕೊಳ್ಳಲು ಈ ರೀಚಾರ್ಜ್ ಪ್ಲ್ಯಾನ್ ಉತ್ತಮವಾಗಿದೆ. ಈ ಪ್ಲ್ಯಾನ್ ಸಂಪೂರ್ಣವಾಗಿ ಸಿಂಧುತ್ವವನ್ನು ಬಯಸುವ ಮತ್ತು ಡೇಟಾ ಪ್ರಯೋಜನಗಳ ಬಗ್ಗೆ ಕಾಳಜಿ ವಹಿಸದ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಯಾವುದೇ ರೀತಿಯ ಒಟಿಟಿ ಸೇವೆಗಳಿಗೆ ಪ್ರಯೋಜನಗಳು ಲಭ್ಯವಾಗುವುದಿಲ್ಲ.


Click it and Unblock the Notifications








