Vi: ಹೊಸ ಪ್ಲಾನ್ ಲಾಂಚ್; ನಿತ್ಯ 2GB ಡೇಟಾ.. ಅನ್‌ಲಿಮಿಟೆಡ್ ಕಾಲ್ಸ್.. ತುಂಬಾ ಕಡಿಮೆ ಬೆಲೆ! ವ್ಯಾಲಿಡಿಟಿ ನೋಡಿ
ವಿಐ (Vi) ಸದ್ದಿಲ್ಲದೆ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ತಂದಿದೆ. ಇದರಲ್ಲಿ ಡೇಟಾ ಜೊತೆಗೆ ಉಚಿತ ಕರೆ ಪ್ರಯೋಜನ ಸಿಗುತ್ತದೆ. ಹೌದು, ದೇಶದ 3ನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಯೋಜನೆಯಾಗಿದೆ. ಈ ಮೂಲಕ ಕಂಪನಿಯು, ಈ ಹೊಸ ಯೋಜನೆಯನ್ನು ತನ್ನ ಪೋರ್ಟ್‌ಫೋಲಿಯೊಗೆ ಸೇರಿಸಿದೆ. ಈ ರೀಚಾರ್ಜ್ ಯೋಜನೆಯ ಬೆಲೆ ಎಷ್ಟು? ವ್ಯಾಲಿಡಿಟಿ ಮತ್ತು ಪ್ರಯೋಜನಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.
ಕಂಪನಿಯು ನಿತ್ಯ ಬಳಕೆಗಾಗಿ ಅಗ್ಗದ ರೀಚಾರ್ಜ್ ಪ್ಯಾಕ್ ಬಯಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಯೋಜನೆಯನ್ನು (Vodafone Idea Rs 340 Prepaid Plan Launched) ಪರಿಚಯಿಸಿದೆ. ಈ ಯೋಜನೆಯ ಬೆಲೆ 340 ರೂ. ಆಗಿದೆ. ವಿಶೇಷವೆಂದರೆ, ಈ ಪ್ಲಾನ್ ಪ್ರಸ್ತು, ದೇಶಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ. ಅಲ್ಲದೆ, ವಿಐನ ಈ ಹೊಸ ಯೋಜನೆಯು ಸೀಮಿತ ಡೇಟಾ ಅಗತ್ಯವಿರುವ ಬಳಕೆದಾರರಿಗೆ, ಹೆಚ್ಚು ಕರೆ ಮತ್ತು ಎಸ್‌ಎಂಎಸ್ ಸೌಲಭ್ಯಗಳ ಅಗತ್ಯವಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಯಾವ ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವಿಐ 340 ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳು
ವಿಐ 340 ರೂ.ಗಳ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಈ ಪ್ಲಾನ್ ಮೂಲಕ ಬಳಕೆದಾರರು ಪ್ರತಿದಿನ 1GB ಡೇಟಾ (ದಿನಕ್ಕೆ 1GB + 1GB ಹೆಚ್ಚುವರಿ ಡೇಟಾ) ಪಡೆಯಬಹುದು. ಹಾಗೆಯೇ ನಿತ್ಯ 100 ಎಸ್‌ಎಂಎಸ್ (SMS) ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕಾಲ್ (ಧ್ವನಿ ಕರೆ) ಸೌಲಭ್ಯವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಕಂಪನಿಯು 1GB ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ವಿಶೇಷವೆಂದರೆ, ಮುಂಬೈ ಭಾಗದ ಬಳಕೆದಾರರು ಮಾತ್ರ ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಪಡೆಯುತ್ತಿದ್ದಾರೆ.
ನೀವು ವಿಐ 340 ರೂ.ಗಳ ರೀಚಾರ್ಜ್ ಯೋಜನೆಗೆ ದಿನಕ್ಕೆ 12 ರೂ. ವೆಚ್ಚ ಮಾಡಬೇಕಾತ್ತದೆ. ಇದು ಕೆಲವು ಗ್ರಾಹಕರಿಗೆ ಸ್ವಲ್ಪ ದುಬಾರಿಯಾಗಿ ಕಾಣಿಸಬಹುದು. ಆದರೆ, ಸೀಮಿತ ಡೇಟಾ ಮತ್ತು ಆಗಾಗ ಕರೆ ಮಾಡುವ ಅಗತ್ಯವಿರುವ ಬಳಕೆದಾರರಿಗೆ, ಈ ಯೋಜನೆಯು ಉಪಯುಕ್ತ ಆಯ್ಕೆಯಾಗಿದೆ. ಈ 340 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಉಲ್ಲೇಖಿಸಿಲ್ಲ. ಆದರೆ, ಟೆಲಿಕಾಂಟಾಕ್ ವರದಿಯ ಪ್ರಕಾರ, ಈ ಯೋಜನೆಯೊಂದಿಗೆ ಕೆಲವು ಹೈಲೈಟ್ ಮಾಡದ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.
ರಾತ್ರಿ ಬ್ರೌಸಿಂಗ್ ಅಥವಾ ಡೌನ್‌ಲೋಡ್‌ಗೆ ಬೆಸ್ಟ್
ವಿಐನ (VI) ಅಧಿಕೃತ ವೆಬ್‌ಸೈಟ್‌ನ ಪಟ್ಟಿಯ ಪ್ರಕಾರ, ಈ 340 ರೂ.ಗಳ ರೀಚಾರ್ಜ್ ಯೋಜನೆಯು ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಮಧ್ಯಾಹ್ನ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯ ರವರೆಗೆ ಅನಿಯಮಿತ ಡೇಟಾ ಸಿಗುತ್ತದೆ. ಬಳಕೆದಾರರು ಯಾವುದೇ ಡೇಟಾ ಕಡಿತವಿಲ್ಲದೆ ಇಂಟರ್ನೆಟ್ ಬಳಸಬಹುದು. ಇದು ರಾತ್ರಿ ಬ್ರೌಸಿಂಗ್ ಅಥವಾ ಡೌನ್‌ಲೋಡ್‌ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಬಳಕೆದಾರರು ರೀಚಾರ್ಜ್ ಮಾಡುವ ಮೊದಲು MyVi ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಈ ಪ್ರಯೋಜನಗಳನ್ನು ದೃಢೀಕರಿಸಬೇಕು.
ನಿಮ್ಮ ಡೇಟಾ ವ್ಯರ್ಥವಾಗುವುದಿಲ್ಲ
ನೀವು ವಾರದಲ್ಲಿ ಬಳಸದ ಡೇಟಾವನ್ನು ವಾರಾಂತ್ಯಕ್ಕೆ ವರ್ಗಾಯಿಸಲಾಗುತ್ತದೆ (ವಾರಾಂತ್ಯದ ಡೇಟಾ ರೋಲ್‌ಓವರ್). ಹೀಗಾಗಿ, ನಿಮ್ಮ ಡೇಟಾ ವ್ಯರ್ಥವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಡೇಟಾ ಡಿಲೈಟ್ ಬೆನಿಫಿಟ್. ಇದು ನಿಷ್ಠೆ ಆಧಾರಿತ ವೈಶಿಷ್ಟ್ಯವಾಗಿದ್ದು, ಬಳಕೆದಾರರಿಗೆ ಕಾಲಕಾಲಕ್ಕೆ ಉಚಿತ ಡೇಟಾ ಬಹುಮಾನಗಳನ್ನು ನೀಡಲಾಗುತ್ತದೆ. ವಿಶೇಷವಾಗಿ MyVi ಅಪ್ಲಿಕೇಶನ್ ಮೂಲಕ ಸಕ್ರಿಯವಾಗಿ ಉಳಿದರೆ, ಈ ಸಂಭಾವ್ಯ ಪ್ರಯೋಜನಗಳನ್ನು ಪರಿಗಣಿಸಲಾಗುವುದು. ಕಡಿಮೆ ಬೆಲೆಯಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳ ಜೊತೆಗೆ ಮೂಲಭೂತ ಅಗತ್ಯಗಳನ್ನು ಬಯಸುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಬಹುದು.


Click it and Unblock the Notifications








