Home
ಸುದ್ದಿಜಾಲ

ಗರ್ಭ ನೃತ್ಯಕ್ಕೆ ಉಚಿತ ಜೋಡಿ ಪಾಸ್ ನೀಡುತ್ತಿದೆ ವೊಡಾಫೋನ್..!

ಭಾರತದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಗಳಲ್ಲಿ ಒಂದೆನಿಸಿರುವ ವೊಡಾಫೋನ್‌ ಐಡಿಯಾ ತಮ್ಮ ಚಂದಾದಾರರನ್ನು ಆಕರ್ಷಿಸಲು ಹೊಸಹೊಸ ತಂತ್ರಗಾರಿಕೆಯನ್ನು ಮಾಡುತ್ತಿದೆ. ಇದೀಗ ವೊಡಾಫೋನ್‌ ಹೆಚ್ಚು ಚಂದಾದಾರರನ್ನು ಪಡೆಯಲು ಉಚಿತ ಗರ್ಭ ಪಾಸ್ ಗಳನ್ನು ಕಪಲ್ಸ್ ಗೆ ಆಫರ್ ಮಾಡುತ್ತಿದೆ. ಯಾರು ಹೊಸ ಪೋಸ್ಟ್ ಪೇಯ್ಡ್ ಕನೆಕ್ಷನ್ ಪಡೆಯುತ್ತಾರೋ ಅವರು ಈ ಆಫರ್ ನ್ನು ಪಡೆಯಲಿದ್ದಾರೆ.ಅದಕ್ಕಾಗಿ 399 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ರೀಚಾರ್ಜ್ ನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಗುಜರಾತ್ ನಲ್ಲಿ ಲಭ್ಯವಿರುವ ಆಫರ್:

ಗುಜರಾತ್ ನಲ್ಲಿ ಲಭ್ಯವಿರುವ ಆಫರ್:

ಈ ಆಫರ್ ಗುಜರಾತ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಿದೆ. ಒಂದು ವೇಳೆ ನೀವು ಗುಜರಾತ್ ನಲ್ಲಿ ಇದ್ದರೆ ಹೊಸ ವೊಡಾಫೋನ್‌ ಪೋಸ್ಟ್ ಪೇಯ್ಡ್ ಕನೆಕ್ಷನ್ ನ್ನು 399 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಪಡೆದುಕೊಂಡರೆ ನಿಮಗೆ ಗರ್ಭಾ ಪಾಸ್ ಉಚಿತವಾಗಿ ಲಭ್ಯವಾಗುತ್ತದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ಅಗೋಮೋನಿ ಇವೆಂಟ್ ಗೂ ಕೂಡ ವೊಡಾಫೋನ್‌ ಪಾಸ್ ಗಳನ್ನು ನೀಡಿತ್ತು.

ವೊಡಾಫೋನ್‌ ಇಂಡಿಯಾ ಮತ್ತು ಐಡಿಯಾ ಸೆಲ್ಯೂಲರ್ ಎರಡೂ ಕೈಜೋಡಿಸಿದ್ದು ಭಾರತದ ಅತೀ ದೊಡ್ಡ ಟೆಲಿಕಾಂ ಕಂಪೆನಿಯಾಗಿ ಈ ವರ್ಷದ ಅಗಸ್ಟ್ ನಲ್ಲಿ ಹೊರಹೊಮ್ಮಿದೆ. ಒಟ್ಟು 408 ಮಿಲಿಯನ್ ಆಕ್ಟೀವ್ ಚಂದಾದಾರರು ಇದಲ್ಲಿ ಇದ್ದಾರೆ ಮತ್ತು ಒಟ್ಟಾರೆ ಮಾರುಕಟ್ಟೆ ಶೇರ್ 32.2 ಶೇಕಡಾದಷ್ಟಿದೆ.

ಜಿಯೋದಿಂದ ಐಡಿಯಾಗೆ ಸ್ಪರ್ಧೆ

ಜಿಯೋದಿಂದ ಐಡಿಯಾಗೆ ಸ್ಪರ್ಧೆ

ಆದರೆ ಐಡಿಯಾಗೆ ನಿಜವಾದ ಸ್ಪರ್ಧೆ ಏರ್ಪಡುತ್ತಿರುವುದು ಜಿಯೋ ಮೂಲಕ. ಜಿಯೋದವರು ತಮ್ಮ ಸ್ವಂತ ಫೆಸ್ಟೀವ್ ಆಫರ್ ಗಳನ್ನು ನೀಡುತ್ತಿದ್ದಾರೆ ಮತ್ತು ಆ ಮೂಲಕ ಹೆಚ್ಚಿನ ಚಂದಾದಾರರನ್ನು ಪಡೆಯುತ್ತಿದ್ದಾರೆ. ವೊಡಾಫೋನ್‌ ಐಡಿಯಾ ಕೂಡ ಇದೀಗ ಹೆಚ್ಚಿನ ಚಂದಾದಾರರನ್ನು ಪಡೆಯಲು ಇವೆಂಟ್ ಪಾಸ್ ಗಳನ್ನು ನೀಡುವ ಕಾರ್ಯಕ್ರಮವನ್ನು ಮಾಡುತ್ತಿದೆ.

ಮೂರು ಕಂಪನಿಗಳ ಟೆಲಿಕಾಂ

ಮೂರು ಕಂಪನಿಗಳ ಟೆಲಿಕಾಂ

ಭಾರತದ ಟೆಲಿಕಾಂ ಮಾರುಕಟ್ಟೆಯು ಪ್ರಮುಖವಾಗಿ ಮೂರು ಸಂಸ್ಥೆಗಳಿಂದ ಆಳಲ್ಪಡುತ್ತಿದೆ. ವೊಡಾಫೋನ್‌ ಐಡಿಯಾ, ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ. ವೊಡಾಫೋನ್‌ ಐಡಿಯಾದ ದೊಡ್ಡ ಸ್ಪೆಕ್ಟ್ರಮ್ ಫೋರ್ಟ್ ಫೋಲಿಯೋ ಇದ್ದು 1850 MHz ನಲ್ಲಿರುತ್ತದೆ. ಇತ್ತೀಚೆಗೆ ವೊಡಾಫೋನ್‌ ಐಡಿಯಾ ಒಟ್ಟಿಗೆ ಸೇರಿಕೊಂಡ ನಂತರ ಆನ್-ಬೋರ್ಡ್ ಗೆ ಹೆಚ್ಚಿನ ಚಂದಾದಾರರನ್ನು ತರಲು ಅತ್ಯುತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ ಮತ್ತು ಸ್ಪರ್ಧೆಯನ್ನು ಹೆಚ್ಚಿಸಲಾಗುತ್ತಿದೆ. 2ಜಿ,3ಜಿ,4ಜಿ ನೆಟ್ ವರ್ಕ್ ಫ್ಲ್ಯಾಟ್ ಫಾರ್ಮ್ ನ ಸೇವೆಯನ್ನು ಎಲ್ಲಾ ಕಡೆಗಳಲ್ಲೂ ನೀಡಲಾಗುತ್ತಿದೆ.

ವೊಡಾಫೋನ್‌ ಹೇಳಿರುವುದೇನು..?

ವೊಡಾಫೋನ್‌ ಹೇಳಿರುವುದೇನು..?

ದೊಡ್ಡ ಮಟ್ಟದ ಡಿಜಿಟಲ್ ಸೇವೆ ಮತ್ತು ಆಫರ್ ಗಳನ್ನು ನಾವು ನೀಡುತ್ತೇವೆ. ವಾಯ್ಸ್, ಡಾಟಾ, ಮೊಬೈಲ್ ಪೇಮೆಂಟ್, IoT,ಎಂಟರ್ಟೈನ್ ಮೆಂಟ್ ಹಾಗೂ ಇತರೆ ಹಲವಾರು ರೀತಿಯ ಆಫರ್ ಗಳನ್ನು ನೀಡಲಾಗುತ್ತಿದೆ. 15,000 ಬ್ರಾಂಡೆಡ್ ಸ್ಟೋರ್ ಗಳಲ್ಲಿ ಮತ್ತು ಡಿಜಿಟಲ್ ಚಾನಲ್ ಗಳಲ್ಲಿ, 1.7 ಮಿಲಿಯನ್ ರೀಟೇಲ್ ಟಚ್- ಪಾಯಿಂಟ್ ಗಳು ದೇಶಾದ್ಯಂತ ಆಕ್ಸಿಸ್ ಗಾಗಿ ಅವಕಾಶ ನೀಡಲಾಗುತ್ತದೆ.

ಜಿಯೋ ಸಂಸ್ಥೆ ಯಾವಾಗಲೂ ಹೊಸ ಹೊಸ ಯೋಜನೆಗಳನ್ನು ಮತ್ತು ತಾರಿಫ್ ಪ್ಯಾಕ್ ಗಳನ್ನು ತರುತ್ತಲೇ ಇರುತ್ತದೆ ಮತ್ತು 4ಜಿ ಡಾಟಾ ಭಾರೀ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ಇತರೆ ಕಂಪೆನಿಗಳಿಗೆ ಹೋಲಿಸಿದರೆ ವಾಯ್ಸ್ ಕರೆಗಳನ್ನು ಜಿಯೋದಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ ಮತ್ತು ಕೇವಲ ಡಾಟಾ ಬಳಕೆಗೆ ಕಡಿಮೆ ಮೊತ್ತವನ್ನು ಪಾವತಿಸಬೇಕಾಗುತ್ತದೆ.

Best Mobiles in India

English summary
Vodafone Idea offering free couple passes for Garba on new postpaid connections. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+