Home
ಸುದ್ದಿಜಾಲ

ವಿ ಟೆಲಿಕಾಂನ 449ರೂ, ಮತ್ತು 499ರೂ, ಪ್ಲಾನ್‌ಗಳಲ್ಲಿ ರೀಚಾರ್ಜ್‌ಗೆ ಯಾವುದು ಉತ್ತಮ!

ಟೆಲಿಕಾಂ ವಲಯದಲ್ಲಿ ವೋಡಾಫೋನ್‌ ಐಡಿಯಾ ಟೆಲಿಕಾಂ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿದೆ. ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳ ಪರಿಚಯಿಸಿ ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಜೊತೆಗೆ ಪೈಪೋಟಿ ನೀಡಿದೆ. ಈ ಪೈಕಿ ವೋಡಾಫೋನ್‌ ಐಡಿಯಾ 500ರೂ, ಕ್ಕಿಂತ ಕಡಿಮೆ ಬೆಲೆಯಲ್ಲಿ ಎರಡು ಪ್ಲಾನ್ ಗಳನ್ನು ನೀಡುತ್ತಿದೆ. ಇದರಲ್ಲಿ ಮೊದಲ ಪ್ಲಾನ್ ಡಬಲ್ ಡೇಟಾ ಪ್ಲಾನ್ ಆಗಿದ್ದು ಇದರ ಬೆಲೆ 449ರೂ, ಆಗಿದೆ. ಇದು 2 ಪ್ಲಸ್ 2 ಅಂದರೆ 4GB ದೈನಂದಿನ ಡೇಟಾವನ್ನು ನೀಡುತ್ತದೆ. ಇನ್ನು ಎರಡನೇಯ ಪ್ಲಾನ್‌ 499ರೂ ಬೆಲೆ ಹೊಂದಿದ್ದು, 70ದಿನಗಳ ಮಾನ್ಯತೆಯನ್ನು ಹೊಂದಿದೆ.

ವೋಡಾಫೋನ್‌

ಹೌದು, ವೋಡಾಫೋನ್‌ ಐಡಿಯಾ ಟೆಲಿಕಾಂ 500ರೂ ಗಿಂತ ಕಡಿಮೆ ಬೆಲೆಯ ಎರಡು ಪ್ಲಾನ್‌ಗಳು ಸಾಕಷ್ಟು ಗಮನ ಸೆಳೆದಿವೆ. ಇದರಲ್ಲಿ 449ರೂ ಡಬಲ್‌ ಡೇಟಾ ಪ್ರಯೋಜನ ನೀಡಲಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ವಲಯಗಳಲ್ಲಿ ಈ ಡಬಲ್ ಡೇಟಾ ಆಫರ್ ಸ್ಟಾಪ್‌ ಆಗಿದೆ. ಆದರೆ ಇದು ಉಳಿದ ಟೆಲಿಕಾಂ ವಲಯಗಳಲ್ಲಿ ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಇನ್ನುಳಿದಂತೆ ಈ ಎರಡು ಪ್ಲಾನ್‌ಗಳಲ್ಲಿ ನಿಮಗೆ ಯಾವುದು ಉತ್ತಮ ಎನಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೋಡಾಫೋನ್‌ ಐಡಿಯಾ 449ರೂ ಪ್ಲಾನ್

ವೋಡಾಫೋನ್‌ ಐಡಿಯಾ 449ರೂ ಪ್ಲಾನ್

ಇದು ಡಬಲ್ ಡೇಟಾ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಈ ಪ್ಲಾನ್‌ ದೈನಂದಿನ 4GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಈ ಪ್ಲಾನ್‌ ಬಿಂಜ್ ಆಲ್-ನೈಟ್ ಆಫರ್ ಮತ್ತು ವಾರಾಂತ್ಯದ ರೋಲ್ಓವರ್ ಡೇಟಾ ಪ್ರಯೋಜನವನ್ನು ಸಹ ಹೊಂದಿದೆ. ಇದು ಬಳಕೆದಾರರಿಗೆ ರಾತ್ರಿ 12 AM ಮತ್ತು 6 AM ನಡುವೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಅನುವು ಮಾಡಿಕೊಡಲಿದ್ದು, 56 ದಿನಗಳವರೆಗಿನ ಮಾನ್ಯತೆಯನ್ನು ಹೊಂದಿದೆ.

ವೊಡಾಫೋನ್ ಐಡಿಯಾ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್

ವೊಡಾಫೋನ್ ಐಡಿಯಾ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್

ಇನ್ನು ಈ ಪ್ಲಾನ್‌ ಮೊದಲ ಪ್ಲಾನ್‌ಗಿಂತ 50 ರೂ. ಹೆಚ್ಚಿನ ಬೆಲೆ ಹೊಂದಿಗೆ. ಈ ಪ್ಲಾನ್‌ 1.5GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನವನ್ನು 70 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ವಿಕೇಂಡ್‌ ರೋಲ್‌ಓವರ್ ಡೇಟಾ ಪ್ರಯೋಜನಗಳು ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶ ನೀಡುವ ಪ್ರಯೋಜನಗಳೊಂದಿಗೆ, ಆಲ್-ನೈಟ್ ಕೊಡುಗೆಗಳನ್ನು ನೀಡುತ್ತದೆ.

ಪ್ಲಾನ್‌

ಇನ್ನು ಈ ಎರಡು ಪ್ಲಾನ್‌ಗಳನ್ನು ಗಮನಿಸಿದರೆ ಹೆಚ್ಚಿನ ಡೇಟಾ ಬಯಸುವ ಬಳಕೆದಾರರಿಗೆ 449ರೂ ಪ್ಲಾನ್‌ ಆಯ್ಕೆ ಮಾಡಬಹುದು. ಒಂದು ವೇಳೆ ಹೆಚ್ಚಿನ ಡೇಟಾ ಬದಲಿಗೆ, 70 ದಿನಗಳ ವ್ಯಾಲಿಡಿಟಿಯನ್ನು ಬಯಸಿದರೆ, 499ರೂ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ವೋಡಾಫೋನ್‌

ವೋಡಾಫೋನ್‌ ಐಡಿಯಾ ತನ್ನ ಪೋಸ್ಟ್‌ಪೇಯ್ಡ್‌ ಗ್ರಾಹಕರು myvi.com, ವಿ ಆಪ್ ಮೂಲಕ ಐಫೋನ್‌ 13 ಖರೀದಿಸಿದರೆ ಕ್ಯಾಶ್‌ಬ್ಯಾಕ್‌ ನೀಡುವುದಾಗಿ ಹೇಳಿದೆ. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಸೇರಿದಂತೆ ಎಲ್ಲಾ ಐಫೋನ್‌ ಖರೀದಿ ಮೇಲೂ ವಿ ಟೆಲಿಕಾಂನ ಆಫರ್‌ ಅನ್ವಯವಾಗಲಿದೆ. ವೋಡಾಫೋನ್‌ ಐಡಿಯಾ ವೆಬ್‌ಸೈಟ್‌ನಿಂದ ಫ್ರೀ ಆರ್ಡರ್‌ ಬುಕ್ ಮಾಡುವವರೆಲ್ಲರೂ ಸೆಪ್ಟೆಂಬರ್ 25 ರಿಂದ ಶಿಪ್ಪಿಂಗ್ ಆದ ಕೂಡಲೇ ಐಫೋನ್‌ ಪಡೆಯಬಹುದಾಗಿದೆ. ಜೊತೆಗೆ ಐಫೋನ್ 13 ಅನ್ನು ಖರೀದಿಸಲು ಬಯಸುವ ಪ್ರಿಪೇಯ್ಡ್ ವಿ ಟೆಲಿಕಾಂ ಬಳಕೆದಾರರು 299ರೂ ಪ್ರಿಪೇಯ್ಡ್ ಪ್ಲಾನ್ ರೀಚಾರ್ಜ್ ಮೇಲೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಈ ಆಫರ್‌ನೊಂದಿಗೆ ವಿಕೆಂಡ್‌ ರೋಲ್‌ಓವರ್‌ ಪ್ರಯೋಜನವನ್ನು ಸಹ ಪಡೆಯಬಹುದು.

Best Mobiles in India

English summary
Vodafone Idea offers two plans under Rs 500 which have benefits no other telco is offering.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+