Home
ಸುದ್ದಿಜಾಲ

ಜಿಯೋ-ಏರ್‌ಟೆಲ್‌ಗೆ ಸಾಧ್ಯವಾಗಿಲ್ಲ: ವೊಡಾದಿಂದ ನಿತ್ಯ 2.8 GB ಡೇಟಾ ಕೇವಲ ರೂ.199ಕ್ಕೆ...!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಯಾವ ಮಟ್ಟಕ್ಕೆ ತಲುಪಲಿದೆಯೋ ತಿಳಿಯುತ್ತಿಲ್ಲ. ದಿನಕ್ಕೊಂದು ಹೊಸ ಮಾದರಿಯ ಆಫರ್ ಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ನಿತ್ಯ ಬಳಕೆಗೆ ನೀಡುವ ಡೇಟಾ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗುತ್ತಿದ್ದು, ಬಳಕೆದಾರರಿಗೆ ಇನಷ್ಟು ಡೇಟಾ ಹಸಿವನ್ನು ಹೆಚ್ಚಿಸುವ ಕಡಗೆ ಟೆಲಿಕಾಂ ಕಂಪನಿಗಳು ಸಾಗುತ್ತಿವೆ. ಇದರಿಂದಾಗಿ ಬಳಕೆದಾರರು ಅಗತ್ಯಕ್ಕಿಂತಲೂ ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ವೊಡಾದಿಂದ ನಿತ್ಯ 2.8 GB ಡೇಟಾ ಕೇವಲ ರೂ.199ಕ್ಕೆ...!

ಸದ್ಯ ಮಾರುಕಟ್ಟೆಯಲ್ಲಿ ನಿತ್ಯ 1.4 GB ಡೇಟಾವನ್ನು ನೀಡುತ್ತಿದ್ದ ಏರ್‌ಟೆಲ್, ತನ್ನ ಪ್ಲಾನ್‌ಗಳನ್ನು ಬದಲಾಯಿಸಿ ನಿತ್ಯ 2GB ಡೇಟಾವನ್ನು ನೀಡುವುದಾಗಿ ಘೋಷಿಸಿತು. ಈಗ ಪ್ಲಾನ್ ಬದಲಾಯಿಸುವ ಕೆಲಸಕ್ಕೆ ವೊಡಾಫೋನ್ ಕೈ ಹಾಕಿದ್ದು, ಒಂದೇ ಏಟಿಗೆ ಏರ್‌ಟೆಲ್ ಮತ್ತು ಜಿಯೋವನ್ನು ಉರುಳಿಸುವ ಸಲುವಾಗಿ ನಿತ್ಯ 2.8 GB ಡೇಟಾವನ್ನು ನೀಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾವನ್ನು ನೀಡುವ ಪ್ರಯತ್ನಕ್ಕೆ ಕೈ ಹಾಕಿದೆ.

ಬದಲಾದ ರೂ.199 ಪ್ಲಾನ್:

ಬದಲಾದ ರೂ.199 ಪ್ಲಾನ್:

28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದ ರೂ.199 ಪ್ಲಾನ್ ಅನ್ನ ವೊಡಾಫೋನ್ ಬದಲಾಯಿಸಿದೆ. ಈ ಹಿಂದೆ ಬಳಕೆದಾರರಿಗೆ ನಿತ್ಯ 1.4 GB ಡೇಟಾವನ್ನು ನೀಡುತಿತ್ತು. ಆದರೆ ಏರ್‌ಟೆಲ್ ಇದೇ ಮಾದರಿಯ ಪ್ಲಾನ್ ಬದಲಾಯಿಸಿದ ಹಿನ್ನಲೆಯಲ್ಲಿ ವೊಡಾಫೋನ್ ಸಹ ತನ್ನ ಪ್ಲಾನ್ ಅನ್ನು ಬದಲಾಯಿಸಿ, ನಿತ್ಯ ಅತೀ ಹೆಚ್ಚು ಅನ್ನುವ 2.8GB ಡೇಟಾವನ್ನು ನೀಡಲು ಮುಂದಾಗಿದೆ.

ಒಟ್ಟು 78.4GB ಡೇಟಾ:

ಒಟ್ಟು 78.4GB ಡೇಟಾ:

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಲಭ್ಯವಿರುವ 28 ದಿನಗಳ ಪ್ಲಾನ್‌ನಲ್ಲಿ ಬಳಕೆದಾರರಿಗೆ ನೀಡುತ್ತಿರುವ ಅತೀ ಹೆಚ್ಚಿನ ಡೇಟಾವನ್ನು ನೀಡುತ್ತಿರುವ ಪ್ಲಾನ್ ಇದಾಗಿದೆ. ಇದು ಬಳಕೆದಾರರಿಗೆ ಒಟ್ಟು 78.4GB ಡೇಟಾವನ್ನು ನೀಡಲಿದೆ. ಬೇರೆ ಯಾವುದೇ ಪ್ಲಾನ್‌ಗಳು ಇಷ್ಟು ದೊಡ್ಡ ಪ್ರಮಾಣದ ಡೇಟಾವನ್ನು ನೀಡುತ್ತಿಲ್ಲ ಎನ್ನಲಾಗಿದೆ. ಇದು ಬೆಸ್ಟ್ ಆಫರ್ ಎಂದರೆ ತಪ್ಪಾಗುವುದಿಲ್ಲ.

ಎಲ್ಲಾರಿಗೂ ಲಭ್ಯವಿಲ್ಲ ಎನ್ನಲಾಗಿದೆ:

ಎಲ್ಲಾರಿಗೂ ಲಭ್ಯವಿಲ್ಲ ಎನ್ನಲಾಗಿದೆ:

ವೊಡಾಫೋನ್ ಹೊಸದಾಗಿ ನೀಡಿರುವ 2.8GB ಡೇಟಾ ಪ್ಲಾನ್ ಎಲ್ಲರಿಗೂ ಲಭ್ಯವಿಲ್ಲ ಎನ್ನಲಾಗಿದೆ. ವೊಡಾಫೋನ್ ಕೇವಲ ಆಯ್ದ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಅದೃಷ್ಠವಂತರಿಗೆ ಮಾತ್ರವೇ ದೊರೆಯುತ್ತಿದೆ. ಆದರಲ್ಲಿಯೂ ವೊಡಾಫೋನ್ ಆಪ್ ನಲ್ಲಿ ರಿಚಾರ್ಜ್ ಮಾಡಿಕೊಳ್ಳುವವರಿಗೆ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ.

ಕರೆ ಮಾಡುವ ಅವಕಾಶ ಹಾಗೇ ಇದೆ:

ಕರೆ ಮಾಡುವ ಅವಕಾಶ ಹಾಗೇ ಇದೆ:

ಇದಲ್ಲದೇ ರೂ.199 ಪ್ಲಾನ್ ಅನ್ನು ಬದಲಾಯಿಸಿರುವ ವೊಡಾಫೋನ್ ಡೇಟಾವನ್ನು ಮಾತ್ರವೇ ಹೆಚ್ಚು ಮಾಡಿದೆ. ಅಲ್ಲದೇ ಕರೆ ಮಾಡುವ ಅವಕಾಶವನ್ನು ಹಾಗೇ ಇಟ್ಟಿದೆ. ಇದಲ್ಲದೇ ಉಚಿತವಾಗಿ SMS ಅನ್ನು ಕಳುಹಿಸುವ ಆಯ್ಕೆಯನ್ನು ನೀಡಲಾಗಿದೆ.

ರೂ.2.53ಕ್ಕೆ ಒಂದು GB ಡೇಟಾ:

ರೂ.2.53ಕ್ಕೆ ಒಂದು GB ಡೇಟಾ:

ವೊಡಾಫೋನ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾವನ್ನು ನೀಡಲಿದೆ ಎನ್ನಲಾಗಿದ್ದು, ಈ ಪ್ಲಾನ್ ನಲ್ಲ ಬಳಕೆದಾರರು ಕಡಿಮೆ ಎಂದರೆ ರೂ.2.53ಕ್ಕೆ ನೀಡುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸ್ಪರ್ಧೆಯನ್ನು ಸೃಷ್ಟಿ ಮಾಡಲಿದೆ.

Best Mobiles in India

English summary
Vodafone India Beats Jio, Airtel by Offering 78.4GB Data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+