Home
ಸುದ್ದಿಜಾಲ

ವೋಡಾಪೋನ್ ಆಫರ್‌ಗೆ ಬೆಚ್ಚಿದೆ ಜಿಯೋ, ಏರ್‌ಟೆಲ್‌..! ಯಾವುದದು ಮೂರು ಶಾಕಿಂಗ್ ಆಫರ್..! ಗ್ರಾಹಕರಿಗೆ ಲಾಭವೇನು..?

ವೋಡಾಫೋನ್ ಸದ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರದಲ್ಲಿ ಪಾತ್ರವಹಿಸುತ್ತಿದ್ದು, ಇದಕ್ಕಾಗಿ ತನ್ನ ಗ್ರಾಹಕರಿಗೆ ಹೊಸ ಆಪರ್ ನೀಡಲು ಮುಂದಾಗಿದೆ. ಮೂರು ಹೊಸ ಆಫರ್ ನೀಡಿದೆ.

By Srinidhi

ಭಾರತದ ಟೆಲಿಕಾಂ ವಲಯದಲ್ಲಿ ಎರಡನೇ ಅತೀ ದೊಡ್ಡ ಆಪರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವೋಡಾಫೋನ್ ಸದ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರದಲ್ಲಿ ಪಾತ್ರವಹಿಸುತ್ತಿದ್ದು, ಇದಕ್ಕಾಗಿ ತನ್ನ ಗ್ರಾಹಕರಿಗೆ ಹೊಸ ಆಪರ್ ನೀಡಲು ಮುಂದಾಗಿದೆ. ಮೂರು ಹೊಸ ಆಫರ್ ನೀಡಿದೆ.

ವೋಡಾಪೋನ್ ಆಫರ್‌ಗೆ ಬೆಚ್ಚಿದೆ ಜಿಯೋ, ಏರ್‌ಟೆಲ್‌..! ಯಾವುದದು ಮೂರು ಶಾಕಿಂಗ್ ಆಫರ್

ವೋಡಾಪೋನ್ 4G/3G ಗ್ರಾಹಕರಿಗೆ ತನ್ನ ಆಫರ್ ಲಾಭವನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ರೂ.445, ರೂ.353 ಮತ್ತು ರೂ.145 ರ ಆಫರ್‌ಗಳನ್ನು ಬಿಡುಗಡೆ ಮಾಡಿದೆ. ತನ್ನ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಿದೆ. ತಮಗೆ ಬೇಕಾದ ಆಫರ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ವೋಡಾಫೋನ್ ರೂ. 445 ಆಫರ್:

ವೋಡಾಫೋನ್ ರೂ. 445 ಆಫರ್:

ವೋಡಾಪೋನ್ 4G/3G ಗ್ರಾಹಕರಿಗಾಯೇ ಈ ಆಫರ್ ನೀಡಿದ್ದು, ಈ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ 4G ಹ್ಯಾಂಡ್‌ ಸೆಟ್ ಬಳಕೆದಾರರಿಗೆ ಪ್ರತಿ ನಿತ್ಯ 4G ವೇಗದ 1 GB ಡೇಟಾವನ್ನು ನೀಡಲಿದೆ. ಅಲ್ಲದೇ ಯಾವುದೇ ನೆಟ್‌ವರ್ಕಿಗೆ ಉಚಿತವಾಗಿ ಅನ್‌ಲಿಮಿಟೆಡ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ವೋಡಾಫೋನ್ ರೂ. 353 ಆಫರ್:

ವೋಡಾಫೋನ್ ರೂ. 353 ಆಫರ್:

ಇದೇ ಮಾದರಿಯಲ್ಲಿ 3G ಬಳಕೆದಾರರಿಗೆ ವೋಡಾಫೋನ್ ರೂ. 353 ಆಫರ್ ಘೋಷಣೆ ಮಾಡಿದ್ದು, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ 2 GB 3G ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲೂ ಯಾವುದೇ ನೆಟ್‌ವರ್ಕಿಗೆ ಉಚಿತವಾಗಿ ಅನ್‌ಲಿಮಿಟೆಡ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ವೋಡಾಫೋನ್ ರೂ. 145 ಆಫರ್:

ವೋಡಾಫೋನ್ ರೂ. 145 ಆಫರ್:

ಇದರೊಂದಿಗೆ ಕಡಿಮೆ ಬೆಲೆಗೆ ಹೆಚ್ಚಿನ ಆಫರ್ ಬೇಕು ಎನ್ನುವವರಿಗೆ ವೋಡಾಪೋನ್ ನೀಡಿರುವ ಹೊಸ ಆಫರ್ ಇದಾಗಿದೆ. ಇದರಲ್ಲಿ ವೋಡಾಪೋನ್ ಟು ವೋಡಾಪೋನ್ ಗೆ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಅಲ್ಲದೇ 28 ದಿನಗಳ ಅವಧಿಗೆ ಪ್ರತಿ ನಿತ್ಯ 1GB ಡೇಟಾವನ್ನು ನೀಡಲಾಗುವುದು.

ಜಿಯೋ ಮಾದರಿಯಲ್ಲಿ ಆಫರ್:

ಜಿಯೋ ಮಾದರಿಯಲ್ಲಿ ಆಫರ್:

ವೋಡಾಪೋನ್ ಸಹ ಜಿಯೋ ಮಾದರಿಯನ್ನು ಅನುಸರಿಸುತ್ತಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರವನ್ನು ನೀಡುತ್ತಿದೆ. ಅವರ ಅವಶ್ಯಕತೆಗೆ ತಕ್ಕಂತೆ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಡಲು ಮುಂದಾಗಿದೆ. ಇದರಿಂದ ಗ್ರಾಹಕರಿಗೆ ಲಾಭವಾಗಲಿದೆ.

Best Mobiles in India

English summary
India’s second largest telecom operator, Vodafone India has launched new first recharge plans to take on the incumbent operator Reliance Jio. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+