ವಿದ್ಯಾರ್ಥಿಗಳಿಗೆ ವೊಡಾಫೋನ್ ಗಿಫ್ಟ್ - ಕ್ಯಾಂಪಸ್ ಸರ್ವೈವಲ್ ಕಿಟ್!

ಮಹಾರಾಷ್ಟ್ರ ಮತ್ತು ಗೋವಾದ ವಿದ್ಯಾರ್ಥಿಗಳಿಗೆ ವೊಡಾಫೋನ್ ತಂದಿದೆ ಹೊಸ ಆಫರ್ 'ಕ್ಯಾಂಪಸ್ ಸರ್ವೈವಲ್ ಕಿಟ್' ,ಅನಿಯಮಿತ ಕರೆಗಳು ಮತ್ತು ಪ್ರತಿ ದಿನ 1GB ಡೇಟಾ ಒಂದಿಗೆ.

By Tejaswini P G
|

ಭಾರತದ ಎರಡನೇ ದೊಡ್ಡ ಟೆಲಿಕಾಮ್ ಆಪರೇಟರ್ ಎನಿಸಿರುವ ವೊಡಾಫೋನ್ ಹೊಸ ಯೋಜನೆಯೊಂದನ್ನು ತಂದಿದೆ. ಮಹಾರಾಷ್ಟ್ರ ಮತ್ತು ಗೋವಾದ ವಿದ್ಯಾರ್ಥಿಗಳಿಗಾಗಿ ವೊಡಾಫೋನ್ ಲಾಂಚ್ ಮಾಡಿರುವ ಹೊಸ ಸ್ಕೀಮ್ "ವೊಡಾಫೋನ್ ಕ್ಯಾಂಪಸ್ ಸರ್ವೈವಲ್ ಕಿಟ್" !

ವಿದ್ಯಾರ್ಥಿಗಳಿಗೆ ವೊಡಾಫೋನ್ ಗಿಫ್ಟ್ - ಕ್ಯಾಂಪಸ್ ಸರ್ವೈವಲ್ ಕಿಟ್!

"ಕಾಲೇಜಿಗೆ ಹೋಗವ ಪ್ರತಿಯೊಬ್ಬ ವಿದ್ಯಾರ್ಥಿಗೂ ತನಗೆ ಸಿಗುವ ಪಾಕೆಟ್ ಮನಿ ಮತ್ತು ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟದ ವಿಷಯವಾಗಿರುತ್ತದೆ. ಹೀಗೆ ಖರ್ಚುವೆಚ್ಚಗಳನ್ನು ನಿಭಾಯಿಸುವುದು ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುತ್ತದೆ ಕೂಡ.ಇದಕ್ಕೆಂದೇ ವೊಡಾಫೋನ್ ಇಂಡಿಯಾ ಪ್ರಸ್ತುತ ಪಡಿಸಿದೆ 'ಕ್ಯಾಂಪಸ್ ಸರ್ವೈವಲ್ ಕಿಟ್'. ಅನಿಯಮಿತ ಕರೆಗಳು ಹಾಗೂ ಪ್ರತಿ ದಿನ 1GB ಡೇಟಾ ನೀಡುವ ಈ ಆಫರ್ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸಲಿದೆ. ವಿದ್ಯಾರ್ಥಿಗಳೀಗ ಈ ಆಫರ್ ಬಳಸಿ ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಸದಾ ಸಂಪರ್ಕದಲ್ಲಿರಬಹುದು" ಎಂದು ಹೇಳಿದೆ ವೊಡಾಫೋನ್ ಕಂಪೆನಿ.

'ಕ್ಯಾಂಪಸ್ ಸರ್ವೈವಲ್ ಕಿಟ್' ನ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಆಶೀಶ್ ಚಂದ್ರ - ಬಿಸ್ನೆಸ್ ಹೆಡ್, ಮಹಾರಾಷ್ಟ್ರ & ಗೋವಾ , ವೊಡಾಫೋನ್ ಇಂಡಿಯಾ ಅವರು "ಕಾಲೇಜು ಜೀವನದ ಆರಂಭ ಯುವ ಜನಾಂಗಕ್ಕೆ ಸವಾಲು, ಅವಕಾಶ ಮತ್ತು ಅನುಭವಗಳ ಹೊಸ ಲೋಕವನ್ನೇ ತೆರೆದಿಡುತ್ತದೆ. ಅವರಿಗೆ ಸಿಕ್ಕಿರುವ ಹೊಸ ಸ್ವಾತಂತ್ರ್ಯವನ್ನು ಬಳಸಿ ಈ ಹೊಸ ಜಗತ್ತನ್ನು ಶೋಧಿಸಲು ಅವರ ನಿಯಮಿತ ಪಾಕೆಟ್ ಮನಿಯೇ ಅವರಿಗೆ ಒಂದು ಸವಾಲಾಗುತ್ತದೆ." ಎಂದು ಹೇಳಿದರು.

ಹ್ಯಾಕರ್ಸ್‌ಗಳ ಹೊಸ ದಾರಿ ಬ್ಲೂಟೂತ್: ಸೇಫ್‌ ಅಲ್ಲ ನಿಮ್ಮ ಫೋನ್ಹ್ಯಾಕರ್ಸ್‌ಗಳ ಹೊಸ ದಾರಿ ಬ್ಲೂಟೂತ್: ಸೇಫ್‌ ಅಲ್ಲ ನಿಮ್ಮ ಫೋನ್

"ಈ ಸವಾಲನ್ನೆದುರಿಸಲು, ವಿದ್ಯಾರ್ಥಿಗಳು ಯಾವಾಗಲೂ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಲು ಬೇಕಾಗುವ ಸಂಪನ್ಮೂಲಗಳ ಹುಡುಕಾಟದಲ್ಲಿರುತ್ತಾರೆ. ಈ 'ಕ್ಯಾಂಪಸ್ ಸರ್ವೈವಲ್ ಕಿಟ್' ವಿದ್ಯಾರ್ಥಿಗಳಿಗೆ ಶ್ರೇಷ್ಠ ಟೆಲ್ಕೋ ಮತ್ತು ಇತರ ಡೀಲ್ಗಳನ್ನು ನೀಡಿ ಸವಾಲನ್ನೆದುರಿಸಲು ಅವರನ್ನು ಸಜ್ಜು ಮಾಡುವತ್ತ ನಮ್ಮ ಮೊದಲ ಹೆಜ್ಜೆಯಾಗಿದೆ" ಎಂದು ಆಶೀಶ್ ಹೇಳಿದ್ದಾರೆ.

ಈ ಕ್ಯಾಂಪೇನ್ ನ ಅಂಗವಾಗಿ, ವೊಡಾಫೋನ್ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ನಿಯಮಿತ ಪಾಕೆಟ್ ಮನಿ ಬಳಸಿ ಹೇಗೆ ತಮ್ಮ ಕ್ಯಾಂಪಸ್ ಜೀವನದ ಬಹುತೇಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ ಎಂಬುದರ ಕುರಿತಾಗಿ ವೀಡಿಯೋ ಒಂದನ್ನು ಬಿಡಗಡೆ ಮಾಡಿದೆ.ಅಲ್ಲದೆ ವೊಡಾಫೊನ್ ತನ್ನ ಬಳಕೆದಾರರಿಂದ ಕಡಿಮೆ ವೆಚ್ಚದಲ್ಲಿ ಕಾಲೇಜು ಜೀವನವನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಲು ಹೊಸ ಉಪಾಯಗಳನ್ನು ಸ್ವಾಗತಿಸುತ್ತಿದೆ.

ನಿಮ್ಮ ಉಪಾಯಗಳನ್ನು ಈ ವೀಡಿಯೋದ ಕಮೆಂಟ್ ಭಾಗದಲ್ಲಿ ಹಂಚಿಕೊಳ್ಳಬಹುದು.ಕ್ಯಾಂಪಸ್ ಜೀವನವನ್ನು ಕಡಿಮೆ ವೆಚ್ಚದಲ್ಲಿ ಚೆನ್ನಾಗಿ ಅನುಭವಿಸಲು ಬಳಸಬಹುದಾದ ಉಪಾಯಗಳು ಎನ್ನುವ ಇನ್ನೊಂದು ವೀಡಿಯೋದಲ್ಲಿ ನೀವು ನೀಡುವ ಉತ್ತಮ ಹ್ಯಾಕ್ ಗಳನ್ನು ತೋರಿಸಲಾಗಿವುದು ಎಂದು ವೊಡಾಫೋನ್ ತಿಳಿಸಿದೆ.

Best Mobiles in India

Read more about:
English summary
As a part of the campaign, Vodafone has released a video on how students across colleges make the most out of campus life in their limited pocket money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X