Subscribe to Gizbot

ವೊಡಾಫೋನ್ ಬಳಕೆದಾರಿಗೆ ಬಂಪರ್: ಸ್ಮಾರ್ಟ್ ಫೋನ್ ಮೇಲೆ 50,000 ವರೆಗೆ ವಿಮೆ..!!!

By: Precilla Dias

ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟಿವ್ ಎನ್ನು ಖ್ಯಾತಿಗೆ ಪಾತ್ರವಾಗಿರುವ ವೊಡಾಫೋನ್ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಲು ಮುಂದಾಗಿದೆ. ಇದಕ್ಕಾಗಿ ವೊಡಾಫೋನ್ ರೆಡ್ ಶೀಲ್ಡ್ ಎನ್ನುವ ಹೊಸ ದೊಂದು ಸೇವೆಯನ್ನು ನೀಡಲು ಸಿದ್ಧವಾಗಿದೆ.

ವೊಡಾಫೋನ್ ಬಳಕೆದಾರಿಗೆ ಬಂಪರ್: ಸ್ಮಾರ್ಟ್ ಫೋನ್ ಮೇಲೆ 50,000 ವರೆಗೆ ವಿಮೆ..!!!

ಸ್ಮಾರ್ಟ್ ಫೋನ್ ಬಳಕೆದಾರರಿಗೆ ವೊಡಾಫೋನ್ ಸಂಪೂರ್ಣ ಡಿವೈಸ್ ಇನ್್ಷ್ಯೂರೆನ್ಸ್ ನೀಡಲು ಮುಂದಾಗಿದ್ದು, ಸ್ಮಾರ್ಟ್ ಫೋನ್ ಸುರಕ್ಷೆಗಾಗಿ ವಿಮೆಯನ್ನು ನೀಡುತ್ತಿದೆ. ಅದುವೇ 50,000 ಸಾವಿರ ರೂ ವರೆಗೂ ಕವರ್ ನೀಡಲಿದೆ.

ಬ್ರಾಡ್ ನ್ಯೂ ಸ್ಮಾರ್ಟ್ ಫೋನಿನಿಂದ ಹಿಡಿದು 6 ತಿಂಗಳು ಹಳೇಯ ಫೋನ್ ಗಳಿಗೆ ವಿಮೆಯನ್ನು ನೀಡುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದು ಮೊಬೈಲ್ ಕಳತನವಾದರೆ, ಬಿದ್ದು ಓಡೆದು ಹೊದರೆ ಮತ್ತು ಮೊಬೈಲ್ ವೈರಸ್ ದಾಳಿಗೆ ತುತ್ತಾದರೆ ರಕ್ಷಣೆಗೆ ನೀಡಲಿದೆ. ಇದು ವೊಡಾಫೋನ್ ರೆಡ್ ಪ್ಲಾನ್ ನ ಒಂದು ಭಾಗವಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಟಾಪ್ ಎಂಡ್ ಸ್ಮಾರ್ಟ ಫೋನ್ ಗಳ ಹಾವಳಿಯೂ ಹೆಚ್ಚಾಗಿದೆ. ಗ್ರಾಹಕರು 50,000 ರೂ ಗಳಿಗೂ ಅಧಿಕ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಫೋನ್ ಗಳಿಗೆ ರಕ್ಷಣೆಯನ್ನು ನೀಡಲು ವೊಡಾಫೋನ್ ಮುಂದಾಗಿದೆ.

ಈ ಸೇವೆಗಾಗಿ ವರ್ಷಕ್ಕೆ ರೂ.720ಗಳ ದರವನ್ನು ವಿಧಿಸಲಿದೆ. ಅದುವೇ ಒಮ್ಮೆಗೆ ಪಡೆದುಕೊಳ್ಳುವ ಬದಲು ಪ್ರತಿ ತಿಂಗಳ ಪೋಸ್ಟ್ ಪೇಯ್ಡ್ ಬಿಲ್ ನೊಂದಿಗೆ ರೂ.60 ಅನ್ನು ಕಟ್ ಮಾಡಿಕೊಳ್ಳಲಿದ್ದು, ಇದು ಒಟ್ಟಾಗಿ ರೂ.720 ಗಳಾಗಲಿದೆ.

English summary
India's second largest telecom operator, Vodafone has come up with VODAFONE RED SHIELD, a complete device security solution a complimentary insurance for smartphones that assures a protection cover of up to Rs. 50,000 on brand new handsets and those up to six months old.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot