Subscribe to Gizbot

ವೊಡಾಫೋನ್ ನಿಂದ ದೇಶದ ಮೊದಲ ವೈ-ಫೈ ಶಲ್ಟರ್ ಆರಂಭ

Written By: Lekhaka

ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ವೊಡಾಪೋನ್ ದೇಶದಲ್ಲಿ ಮೊದಲ ಉಚಿತ ವೈ-ಫೈ ಇರುವ ಬಸ್ ನಿಲ್ದಾಣವನ್ನು ನೋಯ್ಡಾದಲ್ಲಿ ತೆರೆದಿದೆ ಎನ್ನಲಾಗಿದೆ. ಈ ಮೂಲಕ ಗ್ರಾಹಕರಿಗೆ ಹೊಸದೊಂದು ಸಾಧ್ಯತೆಯನ್ನು ಮುಕ್ತವಾಗಿಸಿದೆ.

ವೊಡಾಫೋನ್ ನಿಂದ ದೇಶದ ಮೊದಲ ವೈ-ಫೈ ಶಲ್ಟರ್ ಆರಂಭ

ಈ ಬಸ್ ಶಲ್ಟರ್ ನಲ್ಲಿ ಗ್ರಾಹಕರು ಉಚಿತ ವೈಫೈಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದುವೇ ದಿನಕ್ಕೆ 20 ನಿಮಿಷಗಳ ಕಾಲ. ಇದಲ್ಲದೇ ಈ ಉಚಿತ ವೈಫೈ ಕೇವಲ ವೊಡಾಫೋನ್ ಬಳಕೆ ದಾರರಿಗೆ ಮಾತ್ರವಲ್ಲದೇ ಯಾವುದೇ ಟೆಲಿಕಾಂ ಕಂಪನಿಗಳ ಬಳಕೆದಾರರಾಗಿದ್ದರೂ ಉಚಿತ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ನೋಯ್ಡಾವನ್ನು ಸ್ಮಾರ್ಟ್ ಸಿಟಿ ಮಾಡುವ ನಿಟ್ಟಿನಲ್ಲಿ ವೊಡಾಫೋನ್ ಕೈ ಜೋಡಿಸಿದ್ದು, ಈ ಹಿನ್ನಲೆಯಲ್ಲಿ ಇದರ ಮೊದಲ ಹಂತವಾಗಿ ವೈ-ಫೈ ಬಸ್ ಶಲ್ಟರ್ ನಿರ್ಮಾಣ ಮಾಡಿದೆ ಎನ್ನಲಾಗಿದೆ. ಇದು ಡಿಜಿಟಲ್ ಇಂಡಿಯಾದಿಂದ ಪ್ರೇರೆಪಣೆಗೊಂಡು ನಿರ್ಮಿಸಲಾಗಿದೆ ಎಂದು ವೊಡಾಪೋನ್ ತಿಳಿಸಿದೆ.

ಅಮೇಜಾನ್ ಎಖೋ ಸಾಧನಗಳಿಗೆ ಕಸ್ಟಮ್ ಅಲೆಕ್ಸಾ ಸ್ಕಿಲ್ ಅಭಿವೃದ್ಧಿಪಡಿಸುವುದು ಹೇಗೆ?

ದಿನೇ ದಿನೇ ಮೊಬೈಲ್ ಬಳಕೆದಾರಿಗೆ ವೈಫೈ ಅವಶ್ಯಕತೆ ಉಂಟಾಗಲಿದೆ ಇದನ್ನು ನಿವಾರಿಸುವ ಸಲುವಾಗಿ ಈ ಉಚಿತ ವೈಫೈ ಬಸ್ ಶಲ್ಟರ್ ಕಾರ್ಯಚರ್ಣೆಯನ್ನು ಆರಂಭಿಸಿದ್ದು, ಇದು ಮುಂದಿನ ದಿನದಲ್ಲಿ ಬೇರೆ ಬೇರೆ ನಗರಗಳಿಗೂ ವಿಸ್ತರಣೆಯಾಗಲಿದೆ.

ಈ ಬಸ್ ಶರ್ಟರ್ ನಲ್ಲಿ ಅತೀ ವೇಗದ ವೈಫೈ ಮೊಬೈಲ್ ಬಳಕೆದಾರರಿಗೆ ದೊರೆಯಲಿದ್ದು, ಇದರಿಂದಾಗಿ ಬಸ್ ಕಾಯುವ ಸಂದರ್ಭದಲ್ಲಿ ಇಂಟರ್ನೆಟ್ ಸೇವೆಯನ್ನು ಆನಂದಿಸ ಬಹುದಾಗಿದೆ. ಇದಲ್ಲದೇ ಶೀಘ್ರವೇ ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇದೇ ಮಾದರಿಯ ವೈಫೈ ಬಸ್ ಶಲ್ಟರ್ ಶುರುವಾಗಲಿದೆ.

English summary
This Wi-Fi bus shelter allows customers to enjoy complimentary Wi-Fi for up to 20 minutes per day. An operator agnostic offering.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot