Home
ಸುದ್ದಿಜಾಲ

ಮಹಿಳೆಯರಿಗಾಗಿ ಮೊಬೈಲ್ ಸುರಕ್ಷತಾ ಸೇವೆ ಆರಂಭಿಸಿದ ವೊಡಾಫೋನ್‌..!

ಭಾರತದ ದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್‌ ಐಡಿಯಾ ಹೊಸದಾಗಿ ಮೊಬೈಲ್ ಆಧಾರಿತ ಸುರಕ್ಷತಾ ವೈಶಿಷ್ಟ್ಯತೆಯನ್ನು ಭಾರತೀಯ ಮಹಿಳೆಯರಿಗಾಗಿ ಬಿಡುಗಡೆಗೊಳಿಸಿದೆ.ಮಹಿಳೆಯರು ತಮ್ಮ ಮೊಬೈಲ್ ಫೋನ್ ಬಳಸಿಯೇ ಸುರಕ್ಷತಾ ಕ್ರಮಗಳನ್ನು ಅನುಸರಿಸಬಹುದಾಗಿರುವ ವಿಶಿಷ್ಟ್ಯ ಸೇವೆಯೇ ಇದಾಗಿದ್ದು ವೊಡಾಫೋನ್‌ ಸಖಿ ಎಂದು ಇದನ್ನು ಕರೆಯಲಾಗಿದೆ.ಇದು ಎಮರ್ಜೆನ್ಸಿ ಅಲರ್ಟ್ಸ್ , ಎಮರ್ಜೆನ್ಸಿ ಬ್ಯಾಲೆನ್ಸ್ ಮತ್ತು ಪ್ರೈವೇಟ್ ನಂಬರ್ ರಿಚಾರ್ಜ್ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುತ್ತದೆ.

ಮಹಿಳೆಯರಿಗಾಗಿ ಮೊಬೈಲ್ ಸುರಕ್ಷತಾ ಸೇವೆ ಆರಂಭಿಸಿದ ವೊಡಾಫೋನ್‌..!

ಮಹಿಳಾ ಸುರಕ್ಷತೆಗಾಗಿ ಹೊಸ ಕ್ರಮ:

ಮಹಿಳಾ ಸುರಕ್ಷತೆಗಾಗಿ ಹೊಸ ಕ್ರಮ:

ಭಾರತದಲ್ಲಿ ಹೆಚ್ಚು ಕಡಿಮೆ ಒಂದು ಬಿಲಿಯನ್ ನಷ್ಟು ಮಹಿಳಾ ಜನಸಂಖ್ಯೆ ಇದ್ದು ಅದರಲ್ಲಿ ಶೇಕಡಾ 18ರಷ್ಟಕ್ಕೂ ಕಡಿಮೆ ಮೊಬೈಲ್ ಚಂದಾದಾರರು ಇದ್ದಾರೆ.ಅದರಲ್ಲೂ ಹೆಚ್ಚಿನ ಮಹಿಳೆಯರ ಬಳಿ ಫೀಚರ್ ಫನ್ ಮತ್ತು ಬೇಸಿಕ್ ಮೊಬೈಲ್ ಫೋನ್ ಗಲಿವೆ. ವೊಡಾಫೋನ್‌ ಸಖಿ ಮೂಲಕ ನಾವು ಸಾಮಾಜಿಕ ಸಮಸ್ಯೆಯ ಪರಿಹಾರಕ್ಕಾಗಿ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದು ವೊಡಾಫೋನ್‌ ಸಂಸ್ಥೆಯ ಅಭಿಪ್ರಾಯವಾಗಿದೆ.

ವೊಡಾಫೋನ್‌ ಸಖಿ ಹೇಗೆ ಕಾರ್ಯ ನಿರ್ವಹಿಸುತ್ತದೆ?

ವೊಡಾಫೋನ್‌ ಸಖಿ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಹೊಸದಾಗಿ ಬಿಡುಗಡೆಗೊಂಡಿರುವ ಈ ಸೇವೆಯ ದೇಶಾದ್ಯಂತ ವೊಡಾಫೋನ್‌ ನ ಎಲ್ಲಾ ಪ್ರೀಪೇಯ್ಡ್ ಮಹಿಳಾ ಗ್ರಾಹಕರಿಗೆ ಲಭ್ಯವಿರುತ್ತದೆ ಮತ್ತು ಇದು ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲೂ ಜೊತೆಗೆ ಫೀಚರ್ ಫೋನ್ ಗಳಲ್ಲೂ ಕೂಡ ಕಾರ್ಯ ನಿರ್ವಹಿಸುತ್ತದೆ. ಬ್ಯಾಲೆನ್ಸ್ ಇಲ್ಲದೇ ಇದ್ದಾಗಲೂ ಅಥವಾ ನೆಟ್ ವರ್ಕ್ ಜಾಗದಲ್ಲಿ ಇಲ್ಲದೇ ಇದ್ದಾಗಲೂ ಅಥವಾ ಅಂತರ್ಜಾಲ ಸಂಪರ್ಕ ಇಲ್ಲದೇ ಇದ್ದಾಗಲೂ ಕೂಡ ಇದು ಕಾರ್ಯ ನಿರ್ವಹಿಸುತ್ತದೆ.

ಮೂರು ಪ್ರಮುಖ ಸೇವೆಗಳು:

ಮೂರು ಪ್ರಮುಖ ಸೇವೆಗಳು:

ಈಗಾಗಲೇ ಹೇಳಿರುವಂತೆ, ವೊಡಾಫೋನ್‌ ಸಖಿ ಮೂರು ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ 10 ಪ್ರೀ ರಿಜಿಸ್ಟರ್ ಕಾಂಟ್ಯಾಕ್ಟ್ ಗಳಿಗೆ ತಮ್ಮ ಲೋಕೇಷನ್ ವಿವರಗಳನ್ನು ಕಳುಹಿಸಲು ಇದು ಅವಕಾಶ ನೀಡುತ್ತದೆ. ತುರ್ತು ಸಂದರ್ಬದಲ್ಲಿ ಈ ತುರ್ತು ಬ್ಯಾಲೆನ್ಸ್ ವೈಶಿಷ್ಟ್ಯತೆಯು 10 ನಿಮಿಷದ ಉಚಿಕ ಕರೆಗೆ ಅವಕಾಶ ನೀಡುತ್ತದೆ ಮತ್ತು ಈ ಸಂದರ್ಬದಲ್ಲಿ ಟಾಕ್ ಟೈಮ್ ಬ್ಯಾಲೆನ್ಸ್ ಇಲ್ಲದೇ ಇದ್ದರೂ ಕೂಡ ನಡೆಯುತ್ತದೆ. ಕಂಪೆನಿಯ ರೀಟೇಲ್ ಔಟ್ ಲೆಟ್ ನಲ್ಲಿ ಪ್ರೈವೇಟ್ ರಿಚಾರ್ಜ್ ವೈಶಿಷ್ಟ್ಯತೆಯ ಮೂಲಕ ಡಮ್ಮಿಯಾಗಿರುವ 10 ಡಿಜಿಟಿನ ನಂಬರ್ ವೊಂದಕ್ಕೆ ರೀಚಾರ್ಜ್ ಮಾಡಲು ಇದು ಅವಕಾಶ ನೀಡುತ್ತದೆ.

10 ಕಾಂಟ್ಯಾಕ್ಟ್ ಗೆ ಅಲರ್ಟ್:

10 ಕಾಂಟ್ಯಾಕ್ಟ್ ಗೆ ಅಲರ್ಟ್:

ಟಾಲ್ ಫ್ರೀ ನಂಬರಿಗೆ ಕರೆ ಮಾಡುವ ಮೂಲಕ ವೊಡಾಫೋನ್‌ ಬಳಸುವ ಮಹಿಳಾ ಗ್ರಾಹಕರು ಈ ಸೇವೆಯನ್ನು ಉಚಿತವಾಗಿ ಆಕ್ಟಿವೇಟ್ ಮಾಡಬಹುದು.ಆಕ್ಟಿವೇಷನ್ ನ ಸಂದರ್ಬದಲ್ಲಿಯೇ 10 ತುರ್ತು ಕಾಂಟ್ಯಾಕ್ಟ್ ನಂಬರ್ ನ್ನು ರಿಜಿಸ್ಟರ್ ಮಾಡಬಹುದು. ಯಾವುದೇ ಅಹಿತಕರ ಘಟನೆಯ ಸಂದರ್ಬದಲ್ಲಿ ಈ 10 ನಂಬರಿನವರು ಅಲರ್ಟ್ ಗಳನ್ನು ನಿಮ್ಮ ಮೊಬೈಲ್ ನಿಂದ ಪಡೆಯುತ್ತಾರೆ.

ಮಹಿಳಾ ಸುರಕ್ಷತೆ ಅಳಿಲು ಸೇವೆ:

ಮಹಿಳಾ ಸುರಕ್ಷತೆ ಅಳಿಲು ಸೇವೆ:

ಮಹಿಳೆಯರ ಸುರಕ್ಷತೆ ದೇಶದ ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಎಷ್ಟೋ ಅವಕಾಶಗಳಿಂದ ಮಹಿಳೆಯರು ವಂಚಿತರಾಗಿರುವುದಕ್ಕೆ ಕಾರಣ ಅವರ ಸುರಕ್ಷತೆಗೆ ಸರಿಯಾದ ಕ್ರಮಗಳು ಇಲ್ಲದೇ ಇರುವ ಭಯವೇ ಆಗಿದೆ. ಹಾಗಾಗಿ ಈ ಕಠಿಣ ಸಮಸ್ಯೆಗೆ ಪರಿಹಾರವನ್ನು ವೊಡಾಫೋನ್‌ ಸಖಿ ನೀಡುವ ಉದ್ದೇಶವನ್ನು ಹೊಂದಿದ್ದು ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವ ಕೆಲಸಕ್ಕೆ ಇದೊಂದು ಅಳಿಲು ಸೇವೆ ಎಂದು ಅಭಿಪ್ರಾಯ ಪಡುತ್ತಾರೆ ವೊಡಾಫೋನ್‌ ಐಡಿಯಾದ ಇವಿಪಿ-ಮಾರ್ಕೆಟಿಂಗ್ ಅಧಿಕಾರಿಯಾಗಿರುವ ಸಿದ್ಧಾರ್ಥ್ ಬ್ಯಾನರ್ಜಿ.

Best Mobiles in India

English summary
Vodafone launches mobile safety service Vodafone Sakhi. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+