Home
ಸುದ್ದಿಜಾಲ

ವೊಡಾಫೋನ್ ಆಫರ್!..999 ರೂ.ಪ್ಲ್ಯಾನ್ ಮೇಲೆ 20,000 ರೂ.ಮೌಲ್ಯದ ಪ್ರಯೋಜನ!

ಭಾರತದ ಅತಿದೊಡ್ಡ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾ ಆಕರ್ಷಕ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಒಂದನ್ನು ಪರಿಚಯಿಸಿದೆ. ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವೊಡಾಫೋನ್ ಇದೀಗ ಪ್ರೀಮಿಯಂ ಚಂದಾದಾರರ ವಿಭಾಗದದಲ್ಲಿ ರೆಡ್‌ಎಕ್ಸ್ ಎನ್ನುವ ಹೊಸ ಯೋಜನೆ ಬಿಡುಗಡೆ ಮಾಡಿದ್ದು, 999 ರೂ.ಮಾಸಿಕ ದರದಲ್ಲಿರುವ ಈ ವಿಶೇಷ ಕೊಡುಗೆ 20,000 ರೂ. ಮೌಲ್ಯದ ಪ್ರಯೋಜನ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಫಸ್ಟ್‌ ಕಮ್ ಫಸ್ಟ್ ಸರ್ವ್ ಎಂಬಂತೆ ಈ ಕೊಡುಗೆ ಸೀಮಿತ ಅವಧಿಗೆ ಲಭ್ಯವಿದೆ.

 ಪ್ರೀಮಿಯಂ

ಹೌದು, ಪ್ರೀಮಿಯಂ ಬಳಕೆದಾರರಿಗಾಗಿ ವೊಡಾಫೋನ್ ಈ ಹೊಸ ಕೊಡುಗೆಯ ಮೂಲಕ ಬಂದಿದ್ದು, ಈ ಯೋಜನೆಯಲ್ಲಿ ಹೊಸ ವೊಡಾಫೋನ್ ಆರ್‌ಇಡಿಎಕ್ಸ್ ಮನರಂಜನಾ ಅಪ್ಲಿಕೇಶನ್‌ಗಳು, ಅಂತರರಾಷ್ಟ್ರೀಯ ರೋಮಿಂಗ್ ಸೇವೆಗಳು, ಉತ್ತಮ ಡೇಟಾ ವೇಗದೊಂದಿಗೆ ಅನಿಯಮಿತ ಡೇಟಾ, ವಿಮಾನ ನಿಲ್ದಾಣದ ವಿಶ್ರಾಂತಿ, ಹ್ಯಾಂಡ್‌ಸೆಟ್‌ಗಳ ವಿಶೇಷ ವ್ಯವಹಾರಗಳು ಮತ್ತು ಹೋಟೆಲ್ ಬುಕಿಂಗ್‌ಗಳೊಂದಿಗೆ ಸೀಮಿತ ಆವೃತ್ತಿಯ ಪೋಸ್ಟ್‌ಪೇಯ್ಡ್ ಯೋಜನೆಯಾಗಿದೆ ಎಂದು ವೊಡಾಫೋನ್ ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ.

ವೊಡಾಫೋನ್

999 ರೂ.ಮಾಸಿಕ ದರದ ವೊಡಾಫೋನ್ ರೆಡ್‌ಎಕ್ಸ್ ಪ್ಲ್ಯಾನ್ ಮೂಲಕ ಗ್ರಾಹಕರಿಗೆ ತಿಂಗಳಿಗೆ 150 GB ಡೇಟಾ ಲಭ್ಯವಾಗುತ್ತದೆ. ಅಲ್ಲದೆ ಈ ಪ್ಯಾಕ್‌ ಆಯ್ದುಕೊಂಡ ಗ್ರಾಹಕರಿಗೆ ಶೇ. 50 ಸ್ಪೀಡ್ ಡೇಟಾ ಕೂಡ ಲಭ್ಯವಾಗಲಿದೆ. ಇದರ ಜತೆಗೆ, ಅನಿಯಮಿತ ವಾಯ್ಸ್ ಕರೆ, ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯಲಿದೆ. ಉಳಿದಂತೆ, ಒಟ್ಟಾರೆ 20,000 ರೂ. ಮೌಲ್ಯದ ಪ್ರಯೋಜನ ದೊರೆಯಲಿದ್ದು, ಇದರಲ್ಲಿ ಇಂಟರ್‌ನ್ಯಾಶನಲ್ ರೋಮಿಂಗ್ ಸರ್ವಿಸ್, ಪ್ರೀಮಿಯಂ ಕಸ್ಟಮರ್ ಸರ್ವಿಸ್, ಏರ್‌ಪೋರ್ಟ್ ಲಾಂಜ್ ಅಕ್ಸೆಸ್ ಸೇವೆಗಳು ಸಹ ಸೇರಿವೆ.

ರೆಡ್‌ಎಕ್ಸ್

ಇನ್ನು ವೊಡಾಫೋನ್ ತನ್ನ ರೆಡ್‌ಎಕ್ಸ್ ಗ್ರಾಹಕರಿಗೆ ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಅಂಗಡಿಯಲ್ಲಿ ಲಭ್ಯವಿರುವ ಆಯ್ದ ಸ್ಯಾಮ್‌ಸಂಗ್ ಫೋನ್‌ಗಳಿಗೆ ವಿಶೇಷ ರಿಯಾಯಿತಿಯನ್ನು ನೀಡುವುದಾಗಿ ತಿಳಿಸಿದೆ. ಈ ಕೊಡುಗೆ ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಹಕರಿಗೆ ಗರಿಷ್ಠ ಎರಡು ಖರೀದಿಗಳಿಗೆ ಮಾನ್ಯವಾಗಿರುತ್ತದೆ. ಜತೆಗೆ ನೆಟ್‌ಫ್ಲಿಕ್ಸ್ ಬೇಸಿಕ್, ಅಮೆಜಾನ್ ಪ್ರೈಮ್, ಝೀ5 ಮತ್ತು ವೊಡಾಫೋನ್ ಪ್ಲೇ ಸೇವೆಗಳಿಗೆ ಸದಸ್ಯತ್ವ ದೊರೆಯಲಿದೆ. ಅಲ್ಲದೆ 2,999 ರೂ. ಮೌಲ್ಯದ ಐ-ರೋಮ್ ಪ್ಯಾಕ್ ಏಳು ದಿನಗಳ ಅವಧಿಗೆ ಲಭ್ಯವಿರಲಿದೆ.

ವೊಡಾಫೋನ್ ರೆಡ್‌ಎಕ್ಸ್

ವೊಡಾಫೋನ್ ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆ ಅಸ್ತಿತ್ವದಲ್ಲಿರುವ ವೊಡಾಫೋನ್ ರೆಡ್ ಯೋಜನೆಗಳೊಂದಿಗೆ ಲಭ್ಯವಿದೆ. ಗ್ರಾಹಕರು ಹೊಸ ಯೋಜನೆಯನ್ನು ವೊಡಾಫೋನ್ ಇಂಡಿಯಾ ವೆಬ್‌ಸೈಟ್ ಅಥವಾ ಮೈ ವೊಡಾಫೋನ್ ಆಪ್ ಮೂಲಕ ಮೊದಲೇ ಬುಕ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ವೊಡಾಫೋನ್ ಇಂಡಿಯಾ ಸೈಟ್‌ನಲ್ಲಿ ಲಭ್ಯವಿರುವ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಈ ನೂತನ ರೆಡ್‌ಎಕ್ಸ್ ಯೋಜನೆಯು "ಫಸ್ಟ್ ಕಮ್ ಫಸ್ಟ್ ಸರ್ವ್‌ನ ಆಧಾರದ ಮೇಲೆ ಸೀಮಿತ ಗ್ರಾಹಕರಿಗೆ" ಮಾತ್ರ ಲಭ್ಯವಿದೆ.

Best Mobiles in India

English summary
Vodafone also provides Vodafone RedX customers with special discounts on select Samsung phones available on the Samsung India online store. This offer valid for maximum of two purchases per customers for every six months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+