Home
ಸುದ್ದಿಜಾಲ

ವಿ ಟೆಲಿಕಾಂನಿಂದ ಗುಡ್‌ ನ್ಯೂಸ್‌! ಗ್ರಾಹಕರಿಗೆ ಡಬಲ್‌ ಡೇಟಾ ಆಫರ್‌!

ವೋಡಾಫೋನ್‌ ಐಡಿಯಾ ಟೆಲಿಕಾಂ ವಲಯದಲ್ಲಿ ಮುಂಚೂನಿಯಲ್ಲಿ ಗುರುತಿಸಿಕೊಂಡಿರುವ ಟೆಲಿಕಾಂಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಡೆಟಾ ಮತ್ತು ಅನಿಯಮಿಯ ಕರೆ ಪ್ರಯೋಜ ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಅಲ್ಲದೆ ಜಿಯೋ, ಏರಟೆಲ್‌ಗೆ ಸೆಡ್ಡು ಹೊಡೆಯುತ್ತಾ ಬಂದಿದೆ. ಅಲ್ಲದೆ ವೊಡಾಫೋನ್ ಐಡಿಯಾ ಪ್ರಸ್ತುತ ಎಲ್ಲಾ ರಾತ್ರಿಯೂ ಬಿಂಜ್ ಮತ್ತು ವೀಕೆಂಡ್ ಡೇಟಾ ರೋಲ್ಓವರ್ ಆಯ್ಕೆಯನ್ನು ತನ್ನ ಚಂದಾದಾರರಿಗೆ ಅನನ್ಯವಾಗಿ ನೀಡುತ್ತಿರುವ ಏಕೈಕ ಕಂಪನಿಯಾಗಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ಕುರಿತು ಇತ್ತೀಚಿಗೆ ಕೆಲವು ಋಣಾತ್ಮಕ ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೂ ಕೂಡ ವಿ ಟೆಲಿಕಾಂ ಗ್ರಾಹಕರಾಗಲು ಇದಕ್ಕಿಂತ ಉತ್ತಮ ಸಮಯ ಮತ್ತೊಮ್ಮೆ ಸಿಗುವುದಿಲ್ಲ. ಏಕೆಂದರೆ ವಿ ಟೆಲಿಕಾಂ ಇದೀಗ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಸಾಕಷ್ಟು ಉಚಿತ ಡೇಟಾವನ್ನು ನೀಡಲು ಮುಂದಾಗಿದೆ. ಇದೇ ಕಾರಣಕ್ಕೆ ವೊಡಾಫೋನ್ ಐಡಿಯಾ ತನ್ನ ಜನಪ್ರಿಯ 449ರೂ, ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ ಡಬಲ್ ಡೇಟಾ ಮತ್ತು ZEE5 ಚಂದಾದಾರಿಕೆಯನ್ನು ಆರಂಭಿಸಿದೆ. ಹಾಗಾದ್ರೆ ವೋಡಾಫೋನ್‌ ಐಡಿಯಾದ ಡಬಲ್‌ ಡೇಟಾ ಪ್ರಯೋಜನವನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೊಡಾಫೋನ್ ಐಡಿಯಾ 449ರೂ, ಪ್ರಿಪೇಯ್ಡ್ ಪ್ಲಾನ್ ವಿವರಗಳು

ವೊಡಾಫೋನ್ ಐಡಿಯಾ 449ರೂ, ಪ್ರಿಪೇಯ್ಡ್ ಪ್ಲಾನ್ ವಿವರಗಳು

ವೊಡಾಫೋನ್ ಐಡಿಯಾ 449ರೂ, ಪ್ರಿಪೇಯ್ಡ್ ಪ್ಲಾನ್ 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಚಂದಾದಾರರು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಗ್ಯೂ, ಈ ಪ್ಲ್ಯಾನ್‌ ನಲ್ಲಿ ಇದೀಗ ಡಬಲ್‌ ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ಚಂದಾದಾರರು ದಿನಕ್ಕೆ ಕೇವಲ 2GB ಡೇಟಾಕ್ಕೆ ಸೀಮಿತರಾಗಿದ್ದರು, ಇದೀಗ ದಿನಕ್ಕೆ 4GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಡೇಟಾ

ಇದರ ಜೊತೆಯಲ್ಲಿ, ಬಿಂಜ್ ಆಲ್-ನೈಟ್ ಆಫರ್ ಮೂಲಕ ರಾತ್ರಿಯಲ್ಲಿ ಅನಿಯಮಿತ ಡೇಟಾವನ್ನು ಬಳಸಲು ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರರ OTT ವಿಷಯವನ್ನು ವೀಕ್ಷಿಸಬಹುದು ಅಥವಾ ಡೇಟಾವನ್ನು ಅವರ ಕೆಲಸ ಅಥವಾ ಮನರಂಜನೆ-ಸಂಬಂಧಿತ ಅಗತ್ಯಗಳಿಗಾಗಿ ಬಳಸಬಹುದು. ಇದು ಮಾತ್ರವಲ್ಲ, ವಾರಾಂತ್ಯದ ಡೇಟಾ ರೋಲ್‌ಓವರ್ ಎಂದರೆ ಈ ವಾರ ಬಳಸಲು ಚಂದಾದಾರರು ಹಿಂದಿನ ವಾರದಿಂದ ಉಳಿದಿರುವ ಡೇಟಾವನ್ನು ಬಳಸಬಹುದು. ಈ ಪ್ಲಾನ್ ನಲ್ಲಿ ಒಟ್ಟು ಡೇಟಾ ಲಾಭವು 56 ದಿನಗಳ ಸಂಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 224GB ಆಗಿರುತ್ತದೆ.

ವೋಡಾಫೋನ್ ಐಡಿಯಾ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ

ವೋಡಾಫೋನ್ ಐಡಿಯಾ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ

ಸದ್ಯ ವೊಡಾಫೋನ್ ಐಡಿಯಾ ತನ್ನ ಪ್ಲ್ಯಾನ್‌ನಲ್ಲಿ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ಕೂಡ ನೀಡಿದೆ. ಈ ಯೋಜನೆಯಲ್ಲಿ ಈ ಮೊದಲು ಚಂದಾದಾರರು ಹೊಂದಿರದ ಒಂದು ಹೊಸ ಪ್ರಯೋಜನ ಇದು. ವೊಡಾಫೋನ್ ಐಡಿಯಾದಿಂದ 699 ರೂ.ಗಳ ಪ್ರಿಪೇಯ್ಡ್ ಪ್ಲಾನ್ ನಂತಹ ಇತರ ಯೋಜನೆಗಳಿವೆ, ಇದು ZEE5 ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಬರುತ್ತಿತ್ತು. ಇದು ಮಾತ್ರವಲ್ಲದೆ, ವೊಡಾಫೋನ್ ಐಡಿಯಾದ 299 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಈಗ ಒಂದು ZEE5 ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಬರುತ್ತದೆ, ಇದು ಇಡೀ ವರ್ಷಕ್ಕೆ ಮಾನ್ಯವಾಗಿರುತ್ತದೆ.

Best Mobiles in India

English summary
Vodafone Idea is also the only company currently offering Binge all night and Weekend data rollover option to its subscribers uniquely.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+