ಸಹಾಯ ಹಸ್ತ ನೀಡಿದ ವೊಡಾಫೋನ್ ಸಂಸ್ಥೆ..!

By: Akshatha J

ಭಾರತದ ಈಶಾನ್ಯ ಭಾಗಗಳಾದ ಅಸ್ಸಾಂ, ಉಖ್ರುವಾಲ್ ಮತ್ತು ಬಿಷ್ಣುಪುರ್ನ, ಮಣಿಪುರ, ಉತ್ತರ ತ್ರಿಪುರಾದ ಕಾಮ್ರಪ್, ಕರೀಮ್ಗಂಜ್ ಹಾಗು ಬೊಂಗೈಗಾನ್ಗಳಂತಹ ಪ್ರದೇಶಗಳಲ್ಲಿ ಪ್ರವಾಹ ತಲೆದೂರಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ತಡೆಗಟ್ಟುವವರಿಗಾಗಿ, ಭಾರತದ ಎರಡನೇ ಟೆಲಿಕಾಂ ಸಂಸ್ಥೆಯಾದ ವೊಡಾಫೋನ್ ಆಯ್ದ ನಗರಗಳಲ್ಲಿ 50 ನಿಮಿಷಗಳ ಉಚಿತ ಕರೆಯ ಅವಕಾಶ ನೀಡುತ್ತೇವೆ ಎಂದು ಸ್ವತಃ ವೊಡಾಫೋನ್ ಸಂಸ್ಥೆಯ ಬಿಸಿನೆಸ್ ಹೆಡ್ ನಿಧಿ ಲಾರಿಯಾ ಹೇಳಿದರು.

ಸಹಾಯ ಹಸ್ತ ನೀಡಿದ ವೊಡಾಫೋನ್ ಸಂಸ್ಥೆ..!

ಈಗಾಗಲೇ ಈ ಪ್ರದೇಶಗಳಲ್ಲಿ ವೊಡಾಫೋನ್ ಹೊಸ ಸೇವೆಗಳನ್ನು ನೀಡುತ್ತಿದ್ದು, ಇನ್ನು "ಈ ಸೇವೆಯು ಮಾನ್ಸೂನ್ ಅಂತ್ಯದ ತನಕ ಮುಂದುವರಿಯುತ್ತದೆ ಹಾಗೂ ಸರಿ ಸುಮಾರು 15000 ಜನರಿಗೆ ಈ ಯೋಜನೆ ಒಳಪಟ್ಟಿದೆ."

ಇನ್ನು ಈ ಸೇವೆಯು ಉಚಿತ ಟಾಕ್-ಟೈಮ್ ಪ್ರಸ್ತಾಪವು ಪ್ರವಾಹ ಪೀಡಿತ ಪ್ರದೇಶಗಳ ಸೆಲ್ ಸೈಟ್ ಡೇಟಾವನ್ನು ಅವಲಂಬಿಸಿರುತ್ತದೆ ಹಾಗು ಸ್ಥಳೀಯ ಕರೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಹ ವೊಡಾಫೋನ್ ತಿಳಿಸಿದೆ.

ವೊಡಾಫೋನ್ ಸಂಸ್ಥೆಯು ಭಾರತದ ಪ್ರವಾಹ ಪರಿಸ್ಥಿತಿಗೆ ನಿಕಟವಾಗಿ ಗಮನ ಹರಿಸುತಿದ್ದು, ನಾಗರಿಕರ ಆರೋಗ್ಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಸಂಸ್ಥೆ ವ್ಯಕ್ತಪಡಿಸದೆ. ಇನ್ನು ವೊಡಾಫೋನ್ ಸಂಸ್ಥೆಯು ಅಸ್ಸಾಂ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ನ ಸಹಯೋಗದೊಂದಿಗೆ, ಪ್ರವಾಹ ಸಂಬಂಧಿತ ಮುನ್ನೆಚ್ಚರಿಕೆಗಳ ಬಗ್ಗೆ ನಿರಂತರ ಎಸ್ಎಂಎಸ್ ಎಚ್ಚರಿಕೆಯನ್ನು ಕಳುಹಿಸುತ್ತದೆ ಎಂದು ತಿಳಿದು ಬಂದಿದೆ.Read more about:
English summary
Vodafone has said the free talk-time offer depends on cell site data of flood affected regions and applies only to local calls.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot