ವೊಡಾಫೋನ್‌ನಿಂದ ಉಚಿತ 2GB 4G/3G ಡಾಟಾ ಆಫರ್: ತಿಳಿಯಲೇಬೇಕಾದ 5 ಅಂಶಗಳು
ವೊಡಾಫೋನ್ ಚಂದಾದಾರರು ಉಚಿತವಾಗಿ 2GB 4G/3G ಡಾಟಾವನ್ನು ಸಿಮ್ ಅಪ್‌ಗ್ರೇಡ್ ಮಾಡಿ ಪಡೆಯಬಹುದು.
ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ವೊಡಾಫೋನ್ ತನ್ನ ಪ್ರಸ್ತುತ ಗ್ರಾಹಕರರಿಗೆ ಹೊಸ ಯೋಜನೆ ಪ್ರಕಟಣೆಗೊಳಸಿದೆ. ಹೊಸ ಯೋಜನೆಯಿಂದ ವೊಡಾಫೋನ್ ಗ್ರಾಹಕರು 2GB 4G ಡಾಟಾವನ್ನು ಉಚಿತವಾಗಿ ಪಡೆಯಬಹುದು. ಜಸ್ಟ್ ನಿಮ್ಮ ಸಿಮ್ ಅನ್ನು 4G ಗೆ ಅಪ್‌ಗ್ರೇಡ್ ಮಾಡಿದರೆ ಸಾಕು.
ಹೌದು, ವೊಡಾಫೋನ್ ತನ್ನ ಗ್ರಾಹಕರಿಗೆ 4G ಸೂಪರ್ ನೆಟ್ ಸೇವೆ ನೀಡಲು ಈ ಯೋಜನೆ ಪ್ರಕಟಣೆಗೊಳಿಸಿದ್ದು, 4G ಎನೇಬಲ್ ಸ್ಮಾರ್ಟ್‌ಫೋನ್ ಗ್ರಾಹಕರು ತಮ್ಮ ಸಿಮ್ ಅಪ್‌ಗ್ರೇಡ್ ಪಡೆದು ಉಚಿತ 2GB ಡಾಟಾ ಪಡೆಯಬಹುದು. 4G ಸಿಮ್‌ಗಳು ವೊಡಾಫೋನ್ ಸ್ಟೋರ್‌ಗಳು, ವೊಡಾಫೋನ್ ಮಿನಿ ಸ್ಟೋರ್ ಮತ್ತು ಮಲ್ಟಿ-ಬ್ರ್ಯಾಂಡ್ ಔಟ್‌ಲೆಟ್‌ಗಳಲ್ಲಿ ಲಭ್ಯ. 2GB 4G ಉಚಿತ ಡಾಟಾ ಪಡೆಯುವುದು ಹೇಗೆ ಎಂದು ಮುಂದೆ ಓದಿ ತಿಳಿಯಿರಿ.
ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!

ಹತ್ತಿರದ ವೊಡಾಫೋನ್ ಸ್ಟೋರ್‌ಗೆ ಭೇಟಿ ನೀಡಿ
4G ಸಿಮ್ ಅಪ್‌ಗ್ರೇಡ್ ಮಾಡಲು ನಿಮ್ಮ ಹತ್ತಿರದ ವೊಡಾಫೋನ್ ಸ್ಟೋರ್, ವೊಡಾಫೋನ್ ಮಿನಿ ಸ್ಟೋರ್‌ಗೆ ಭೇಟಿ ನೀಡಿ. ವೆರಿಫಿಕೇಶನ್ ಪ್ರಕ್ರಿಯೆಗೆ ವಿಳಾಸ ಮತ್ತು ಐಡಿ ಪ್ರೂಫ್ ಅನ್ನು ಹೋಗುವ ವೇಳೆ ಕೊಂಡ್ಯೊಯಿರಿ.

2GB 4G ಉಚಿತ ಡಾಟಾ 10 ದಿನಗಳ ವ್ಯಾಲಿಡಿಟಿ
ವೊಡಾಫೋನ್ ಪ್ರೀಪೇಡ್ ಗ್ರಾಹಕರಾಗಿದ್ದಲ್ಲಿ, 2GB 4G ಉಚಿತ ಡಾಟಾವನ್ನು 10 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಮ್ ಅಪ್‌ಗ್ರೇಡ್ ಮಾಡಿ ಪಡೆಯಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್‌ಪೇಡ್ ಗ್ರಾಹಕರು ಮುಂದಿನ ಬಿಲ್ಲಿಂಗ್ ವರೆಗೆ ಬೆನಿಫಿಟ್ ಪಡೆಯಬಹುದು
ಪ್ರೀಪೇಡ್ ಗ್ರಾಹಕರ ರೀತಿಯಲ್ಲಿ ಅಲ್ಲದೇ, ವೊಡಾಫೋನ್ ಪೋಸ್ಟ್‌ಪೇಡ್ ಗ್ರಾಹಕರು ತಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದ ವರೆಗೆ 2GB 4G ಉಚಿತ ಡಾಟಾವನ್ನು ಎಂಜಾಯ್ ಮಾಡಬಹುದು.

ಕೆಲವು ಆಯ್ಕೆಯ ವೃತ್ತಗಳಲ್ಲಿ ಮಾತ್ರ ಆಫರ್
ಸ್ವಲ್ಪ ಟ್ವಿಸ್ಟ್: ಅಂದಹಾಗೆ ಈ ಆಫರ್ ಕೇವಲ ಆಯ್ಕೆಯ ವೃತ್ತಗಳಿಗೆ ಮಾತ್ರ ಲಭ್ಯವಿದ್ದು, ಮುಂಬೈ, ತಮಿಳು ನಾಡು, ಹರಿಯಾಣ ಮತ್ತು ಪಂಜಾಬ್'ಗಳಲ್ಲಿ ಆಫರ್ ಲಭ್ಯ.

3G ಬಳಕೆ
ಪಂಜಾಬ್‌ನಲ್ಲಿ ಕೆಲವು ಪ್ರದೇಶಗಳಲ್ಲಿ 4G ಸರ್ವೀಸ್ ಲಭ್ಯವಿಲ್ಲದಿದ್ದಲ್ಲಿ 3G ಡಾಟಾ ಸೇವೆಯನ್ನು ಬಳಸಬೇಕು. ವೊಡಾಫೋನ್ ಆರ್ಥಿಕ ವರ್ಷದ ಕೊನೆಯಲ್ಲಿ 4G ಸರ್ವೀಸ್ ಅನ್ನು ಲಾಂಚ್ ಮಾಡಲಿದೆ.


Click it and Unblock the Notifications








