ವೊಡಾಫೋನ್‌ ಅಂಗಸಂಸ್ಥೆ 'ಯು' ನಿಂದ ಹೊಸ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಲಾಂಚ್‌!

|

ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ವೊಡಾಫೋನ್‌-ಐಡಿಯಾ ಸಂಸ್ಥೆಯು ಜಿಯೋ ಹಾಗೂ ಏರ್‌ಟೆಲ್‌ಗಳಿಗೆ ನೇರ ಸ್ಪರ್ಧೆ ನೀಡುತ್ತಿದೆ. ಗ್ರಾಹಕರನ್ನು ತನ್ನ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಹಲವು ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಪ್ರತಿದಿನ 2GB ಡೇಟಾ, ಅನಿಯಮಿತ ವಾಯಿಸ್ ಕಾಲ್‌ ಸೌಲಭ್ಯಗಳ ಪ್ಲ್ಯಾನ್‌ಗಳನ್ನು ಹೊಂದಿದ್ದು, ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡಬಲ್‌ ಡೇಟಾ ಯೋಜನೆಯ ಕೊಡುಗೆಗಳನ್ನು ನೀಡಿದೆ.

ವೊಡಾಫೋನ್

ಹೌದು, ವೊಡಾಫೋನ್ ಐಡಿಯಾ ಟೆಲಿಕಾಂ ಹಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡಬಲ್‌ ಡೇಟಾ ಪ್ರಯೋಜನ ಪರಿಚಯಿಸಿದೆ. ಇದೀಗ ವೊಡಾಫೋನ್ ಅಂಗಸಂಸ್ಥೆ ಯು 30mbpsನಿಂದ 200mbps ವರೆಗೆ ಲಭ್ಯವಿರುವ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಪರಿಚಯಿಸಿದೆ. ಈ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳು ಒಂದು ತಿಂಗಳ ವ್ಯಾಲಿಡಿಟಿ, ಮೂರು ತಿಂಗಳ ವ್ಯಾಲಿಡಿಟಿ, ಆರು ತಿಂಗಳ ವ್ಯಾಲಿಡಿಟಿ ಮತ್ತು ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿವೆ. ಹಾಗಾದ್ರೆ ಈ ಹೊಸ ಬ್ರಾಡ್‌ಬ್ಯಾಂಡ್‌ ಯೋಜನೆಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯು

ವೊಡಾಫೋನ್‌ ಅಂಗಸಂಸ್ಥೆ 'ಯು' ಪರಿಚಯಿಸಿರುವ ಹೊಸ ಬ್ರಾಡ್‌ಬ್ಯಾಂಡ್‌ ಯೋಜನೆಗಳು 30mbps ನಿಂದ 200mbps ವರೆಗೆ ಲಭ್ಯವಿರುತ್ತವೆ. ಈ ಪ್ಲಾನ್‌ಗಳು 3.5TB ಅಥವಾ 3,500GB ನ್ಯಾಯೋಚಿತ ಬಳಕೆ-ನೀತಿ (ಎಫ್‌ಯುಪಿ) ಡೇಟಾದೊಂದಿಗೆ ಬರಲಿದೆ, ಮತ್ತು ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ. ಈ ಯೋಜನೆಗಳು ಪ್ರಸ್ತುತ ಕೊಡುಗೆಗಳಾದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ಜಿಯೋ ಫೈಬರ್, ಬಿಎಸ್‌ಎನ್‌ಎಲ್ ಮತ್ತು ಎಕ್ಸಿಟೆಲ್ ಯೋಜನೆಗಳೊಂದಿಗೆ ಸ್ಪರ್ಧಿಸಲಿವೆ. ಸದ್ಯ ಈ ಯು ಬ್ರಾಡ್‌ಬ್ಯಾಂಡ್ ಯೋಜನೆಗಳ ಲಭ್ಯತೆಯನ್ನು ಆಂಧ್ರಪ್ರದೇಶದ ವಿಜಯವಾಡ ಮತ್ತು ಕಾಕಿನಾಡ ಸೇರಿದಂತೆ ಹೆಚ್ಚಿನ ಟೆಲಿಕಾಂ ವಲಯಗಳಿಗೆ ಹೆಚ್ಚಿಸಿದೆ.

ವೊಡಾಫೋನ್‌ ಹೊಸದಾಗಿ ಪರಿಚಯಿಸಿರುವ ಬ್ರಾಡ್‌ಬ್ಯಾಂಡ್ ಯೋಜನೆಗಳ ವಿವರ

ವೊಡಾಫೋನ್‌ ಹೊಸದಾಗಿ ಪರಿಚಯಿಸಿರುವ ಬ್ರಾಡ್‌ಬ್ಯಾಂಡ್ ಯೋಜನೆಗಳ ವಿವರ

ಒಂದು ತಿಂಗಳ ವ್ಯಾಲಿಡಿಟಿ: ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು ಕ್ರಮವಾಗಿ 50 Mbps ಮತ್ತು 75 Mbps, 100 Mbps, 150 Mbps ಮತ್ತು 200 Mbps ವೇಗವನ್ನು ಹೊಂದಿದ್ದು, ಇವುಗಳ ಬೆಲೆ ಕ್ರಮವಾಗಿ 649, 708, 826, 885 ಮತ್ತು 1026 ರೂ. ಬೆಲೆಯನ್ನು ಹೊಂದಿದೆ.

ಬ್ರಾಡ್‌ಬ್ಯಾಂಡ್

ಮೂರು ತಿಂಗಳ ವ್ಯಾಲಿಡಿಟಿ: ಯು ಬ್ರಾಡ್‌ಬ್ಯಾಂಡ್ ಕ್ರಮವಾಗಿ 50mbps ಮತ್ತು 75mbps, 100mbps, 150mbps ಮತ್ತು 200mbps ವೇಗವನ್ನು ಹೊಂದಿರುವ ಪ್ಲಾನ್‌ಗಳು ಕ್ರಮವಾಗಿ 1949 ರೂ., 2124, ರೂ. 2478, ರೂ 2655 ಮತ್ತು 3186 ರೂ. ಬೆಲೆಯನ್ನು ಹೊಂದಿವೆ. ಈ ಯೋಜನೆಯು 5 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಸಹ ನೀಡುತ್ತದೆ.

ಪ್ಲಾನ್‌ಗಳಲ್ಲಿ

ಆರು ತಿಂಗಳ ವ್ಯಾಲಿಡಿಟಿ: ಈ ಪ್ಲಾನ್‌ಗಳಲ್ಲಿ ಕ್ರಮವಾಗಿ 50mbps ಮತ್ತು 75mbps, 100mbps, 150mbps ಮತ್ತು 200mbps ವೇಗವನ್ನು ಹೊಂದಿರುವ ಪ್ಲಾನ್‌ಗಳು ಕ್ರಮವಾಗಿ 3499 ರೂ., 4248, 4956, 5310 ಮತ್ತು 6372 ರೂ.ಬೆಲೆಯನ್ನು ಹೊಂದಿವೆ. ಈ ಯೋಜನೆಯು 10 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಸಹ ನೀಡುತ್ತದೆ.

mbps

ಒಂದು ವರ್ಷದ ವ್ಯಾಲಿಡಿಟಿ: ಯು ಬ್ರಾಡ್‌ಬ್ಯಾಂಡ್ ಕ್ರಮವಾಗಿ 50mbps ಮತ್ತು 75mbps, 100 mbps, 150 mbps ಮತ್ತು 200mbps ವೇಗವನ್ನು ಹೊಂದಿರುವ ಪ್ಲಾನ್‌ಗಳು ಕ್ರಮವಾಗಿ 6699 ರೂ., 8496, ರೂ. 9912, 10,620 ಮತ್ತು 12,744 ರೂ. ಬೆಲೆಯನ್ನು ಹೊಂದಿವೆ. ಈ ಯೋಜನೆಯು 30 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತದೆ. ಈ ಎಲ್ಲಾ ಪ್ಲಾನ್‌ಗಳು ಕಾಕಿನಾಡ ವಲಯದಲ್ಲಿ ಲಭ್ಯವಿದೆ.

Most Read Articles
Best Mobiles in India

English summary
Vodafone powered You Broadband plans, details, availability.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X